ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣದಿ ರಕ್ಷಿಸು ಎನ್ನನು ಪುಲಿ ಗಿರಿಲೋಲ ನಂಬಿದೆ ನಿನ್ನನು ಪ ಕರುಣದಿ ರಕ್ಷಿಸು ಚರಣಸೇವಕಭಯ ಚರಣಯುಗಳದಿ ಶರಣು ಹೊಕ್ಕೆನು ಅ.ಪ ಗತಿ ತಾಳ ಲಯ ಬಂಧ ತಿಳಿಯದ ಶ್ರುತಿಗಳ ಮಹಿಮೆಯ ಕೇಳದ ಶ್ರುತಿಗೋಚರ ನಿಮ್ಮ ಸ್ತುತಿಯ ಅನುಭವವಿತ್ತು ಪತಿತಪಾವನ ಪುಲಿಗಿರೀಶನೆ ಪತಿತನುದ್ಧರಿಪಂತೆ ಗತಿವಿಹೀನಗೆ ಪಥವ ತೋರಿಸಿ ಸದ್ಗತಿಯ ಪಾಲಿಸುವಂತೆ ಪತಿತನೆನ್ನನು ಭವಜಲಧಿ ಮಧ್ಯದಿ 1 ಗುರುದ್ರೋಣ ಕೃಪರ ಮುಂದಡೆಯಲ್ಲಿ ದುರುಳ ದುಶ್ಯಾಸನನ ಕೈಯಲ್ಲಿ ಪರಮಾತ್ಮ ಪರಿಪೂರ್ಣ ಕರುಣಾಳು ನಿನ್ನನೇ ಮರೆಹೊಕ್ಕೆ ಪೊರೆಯೆಂದು ಮೊರೆಯಿಡಲಾಕ್ಷಣ ಶರಣಜನ ಸಂಸಾರ ಶ್ರೀಹರಿ 2 ನರಳಿ ಸಾವಿರವರುಷ ಜಲದೊಳು ಸ್ಮರಣೆ ಮಾಡುತ ದೃಢಮನದೊಳು ಕರಿ ಮೊರೆಯಿಡಲಾ ಕರುಣದಿಂ ಮೊರೆ ಕೇಳಿ ಗರುಡನ ಪೆಗಲೇರಿ ಸಾರಿ ಕರಿಯಪೊರೆದಾ ವರದವಿಠಲ 3
--------------
ವೆಂಕಟವರದಾರ್ಯರು
ಕರುಣದಿ ರಕ್ಷಿಸುಯನ್ನನು-ಪುಲಿಗಿರಿ ಲೋಲ ನಂಬಿದೆ ನಿನ್ನನು ಕರುಣದಿ ರಕ್ಷಿಸು ಚರಣಸೇವಕ ಭಯಹರಣ ಸೌಖ್ಯವಿತರಣ ನಿನ್ನಯಚರಣ ಯುಗಳದಿ ಶರಣು ಹೊಕ್ಕೆನುಪ ಯತಿಗಣ ನೇಮವನರಿಯದ-ಸ್ವರ-ಗತಿತಾಳ- ಲಯಬಂಧ ತಿಳಿಯದ ಮಹಿಮೆಯ ಕೇಳದ ಶೃತಿಗೋಚರ ನಿಮ್ಮಸ್ತುತಿಯು ಅನುಭವವಿತ್ತು ಪತಿತ ಪಾವನ ಪುಲಿಗಿರೀಶನೆ ಪತಿತನುದ್ಧರಿಪಂತೆ ಗತಿಮತಿಗಳೇನೇನು ಅರಿಯದಪತಿತನೆನ್ನನು ಭವಜಲಧಿ ಮಧ್ಯದಿ 1 ಕೃಪರಮುಂದೆಡೆಯಲ್ಲಿ ದುರುಳದುಶ್ಯಾಸನನ ಕೈಯಲ್ಲಿ ಪಡಿಸಲೆಂದೆನುತಲುಜ್ಜುಗಿಸಲು ಪೊರೆಯೆಂದು ಮೊರೆಯಿಡಲಾಕ್ಷಣ ಸಂಸಾರ ಶ್ರೀಹರಿ ||ಕರು|| 2 ವರುಷ ಜಲದೊಳು ಪರಾತ್ಮರ ಪುಲಿಗಿರಿ ಕರಿ ಮೊರೆಯಿಡಲಾಗಬೇಗ ಕರುಣದಿಂ ಮೊರೆಕೇಳಿ ಗರುಡನ ಪೆಗಲೇರಿಸಾರಿ ಕರದ ಚಕ್ರದಿ ಸೀಳಿ ನಕ್ರನ ಕರಿಯ ಪೊರೆದಾ ವರದ ವಿಠಲ 3
--------------
ಸರಗೂರು ವೆಂಕಟವರದಾರ್ಯರು
ವಂದೇ ಮುಕುಂದ ನಮೊ | ನಂದ ಮೂರುತಿ ಪರಮಾನಂದ ನರಸಿಂಹಾ ಪ ಬಿಸಿಜಪೀಠನ ವರವ ಪಡೆದು ಮಹಾರಾಜೇಂದ್ರ | ವಸುಮತಿಗೆ ತಾನೆ ಸ್ವಾಮಿ ಎಂದು || ಹಸುಳೆಯನು ಬಾಧಿಸಲು ಮೊರೆಯಿಡಲಾಕ್ಷಣ | ಮಿಸಣಿಪ ಕಂಭದಿ ಬಂದ ಭಳಿರೆ ನರಸಿಂಹಾ 1 ರೋಷವನೆ ತಾಳಿ ನಿಟ್ಟುಸುರಗೈಸಿಕೊಳುತಾ | ಸೂಸಿ ಕಿಡಿಗಳನುದುರೆ ಕುಪ್ಪಳಿಸುತ ಕಮ || ಲಾಸನಾದ್ಯರ ಪಾಲಿಸಿದ ನರಸಿಂಹಾ 2 ಅಜವಾಣಿ ನೆಲೆಯಲ್ಲಿ ವಾಸವಾಗಿದ್ದ ನರ | ಗಜಪಗೀಯ ಮೊಗನೆ ಆನಂದ ಮಗನೇ || ಭಜಿಸುವನು ಗತಿ ಕೊಡುವ ಜನಮೇಜಯ ನೃಪವರದ | ವಿಜಯವಿಠ್ಠಲ ವರದಾತೀರ ನರಸಿಂಹ 3
--------------
ವಿಜಯದಾಸ
ಹರಿಯೇ ಧೊರೆಯೇ ಪ ಕಂದನ ನುಡಿಕೇಳಿ ಕಂಬದಿಂದ ಬಂದೆ ಅಂದು ಅಹಲ್ಯೆಯ | ಬಂಧನ ಬಿಡಿಸಿದೆ ಕರಿಮೊರೆಯಿಡಲಾಕ್ಷಣ ಬಂದು ನೀ ನಕ್ರನ್ನ ಸೀಳಿದ ಚಕ್ರಧರನೆ ನೀನು 1 ತರಳ ಧೃವನ್ನಾ ತೊಡೆಯಿಂದ ನೂಕಲು ಕಡುಭಯದಿಂದ ವನದಲ್ಲಿ ಚರಿಸುತ್ತ ಘನತಪಗೈಯಲು ಧೃಡ ಭಕುತಿಗೆ ಮೆಚ್ಚಿ ಒಡನೆ ಓಡಿ ಬಂದು ಘನತರ ಸಂಪದವತ್ತೆ 2 ಪರಮ ಪುರುಷೋತ್ತಮ ನೀನಲ್ಲವೆ ಮೊರೆಹೊಕ್ಕೆನು ನಿನ್ನ ಕರುಣಿಗಳರಸನ್ನ ತ್ವರಿತದಿಂದಲಿ ಕಾಯೊ ವೆಂಕಟವಿಠಲಾ 3
--------------
ರಾಧಾಬಾಯಿ