ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಶೇಷಶಾಯಿಯ ವರ್ಣನೆ) ಸ್ವರಮಣನೆನುತಲಿ ಮೊರೆಯಲು ಶ್ರುತಿಗಳು ಹೊರಳುವದೇನುಚಿತ ಅರೆ ನಿಮಿಷವು ನಿನ್ನುರವ ಬಿಟ್ಟಗಲದೆ ಇರುವಳು ರಮೆ ನಿರತ ಪ. ಕವಿಗಳು ಗುಣರಸ ಸವಿದು ಸುಖಭರದಿ ದಿವಿಜರ ಲೆಕ್ಕಿಸರೂ ಪವಿಧರ ಪಾಲಕ ರವಿ ಉದಿಸಿದ ಬಳಿ ಕವಿಕುಲ ಮಲಗುವರೆ 1 ಇಂದಿರೆ ನಿನ್ನನು ಹೊಂದುತ ಪರಮಾ- ನಂದದಿ ಮುಳುಗಿರಲು ಎಂದಿಗು ಮಲಗದ ಸುಂದರ ವಿಗ್ರಹ ಇಂದು ನೀ ಮಲಗುವರೆ 2 ದೋಷವಿದೂರ ಅಶೇಷ ಸುರಾರ್ಚಿತ ದಾಸ ಜನಾನಂದ ಶೇಷಗಿರಿ ವಿಶೇಷಾಸನ ಯಿ- ನ್ನೇಸು ಶಯನ ಚಂದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕರೆವರು ನಿನ್ನ ಹಸೆಗೆ ಪರಮ ಪುರುಷ ನೀನೆಂದು ಪ ಸರಸದಿಂದ ಸಿರಿಸಹಿತ ಬರಬೇಕು ನೀಂ ತ್ವರಿತದಲಿ ಅ.ಪ ನಾದದಶವಾದ್ಯಗಳು ಮೋದದಿಂದ ಮೊರೆಯಲು ವೇದಾಂತರಹಸ್ಯವೆಂಬ ವಿವಿಧ ಗೀತೆಗಳ ಪಾಡಿ 1 ತತ್ವಭಿಮಾನಿಗಳೆಂಬ ಮುತ್ತೈದೆಯರೆಲ್ಲ ಕೂಡಿ ಸೂರಿ ಜನಪ್ರಿಯನೆಂದು 2 ಎಂಟುದಳ ಪದ್ಮದೊಳು ನೆಂಟರಿಷ್ಟರೆಲ್ಲುರು ನೂ- ರೆಂಟು ಚಿತ್ರಗಳ ಬರೆದು ರಚಿಸಿ ರತ್ನ ಪೀಠವನ್ನು 3 ಧೀರ ಸಭೆಯಲ್ಲಿ ಹದಿನಾರು ನಿನ್ನಾಧೀನಗೈದು 4 ಯಾಮ ಯಾಮದಿ ಬಿಡದೆ ಕಾಮಿನೀ ಮಣಿಯರು ನಿ- ಷ್ಕಾಮ ಸುಖವೀವ ಗುರುರಾಮವಿಠಲ ಬಾರೆಂದು 5
--------------
ಗುರುರಾಮವಿಠಲ