ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಲಿಸಯ್ಯಾ ನಿಲಿಸೆನ್ನ ಮನವ ಶ್ರೀ ಹರಿಯೇ ನಿನ್ನಾ | ಹೊಳೆವ ಚರಣದಲ್ಲಿ ನೆಲೆಗೊಂಬುವಂದದಿ ಪ ಯರಳಿಯು ಘಂಟಾನಾದಕೆ ಬಲೆ ಹೋಗುವಂತೆ | ಮರುಳಾಗಿ ತರಣಿಯರಾಳಾಪದಿ | ಭರದಿಂ ದೀವಿಗೆ ಕಂಡು ಪತಂಗ ಮಡಿವಂತೆ | ಹರಿದು ರೂಪ ವಿಷಯದಲಿ ಮುಗ್ಗುತಿಹುದೋ1 ಕರಿ ಅಂಗ ಸಂಗದೀ ಕುಣಿಯಾ ಬೀಳುವಂತೆ | ಸ್ಪರುಶ ವಿಕ್ಷಯದಲಿ ಮೈಮರೆದು | ಯರಗಿ ಮಾಂಸಕ ಗೋಣ ನೀವ ಮಚ್ಛದಂತೆ | ನಿರುತ ಜಿವ್ಹಾಸ್ವಾದಕ ತೊಳಲುತಲಿಹುದೈಯ್ಯಾ2 ಪರಿಮಳಕಾಗಿ ಬ್ರಮರ ಸೆರೆ ಬಿದ್ದಂತೆ | ಹರುಷ ಪಡುತ ಭೋಗ ದ್ರವ್ಯದಲಿ | ತರುವರಿ ತನಲಿಂತು ಮಾಡಿ ವಿಷಯದಿ ಬಂದು | ದುರಿತ ಮೊನೆಗೆಯನ್ನ ಗುರಿ ಮಾಡಿತಿಹುದೈಯ್ಯಾ3 ಐದು ಮೋರೆಯಲಂತು ಹರಿಗುಡದೆವೆ ಮತ್ತ | ಐದು ಪರಿಯ ಕಾವಲಿಯ ನಿರಿಸೋ | ಮಾಧವ ನಿಮ್ಮ ಸತ್ಕಥೆಗಳ ಶ್ರವಣಕ | ಪಾದ ಧ್ಯಾನದಿ ಹಿಂಗದಂದದಿ ನಯನದಿ 4 ನಿನ್ನ ದಾಸರ ಸಂಗ ವನುದಿನ ದೇಹಕ | ನಿನ್ನ ನಾಮಾಮೃತ ಜಿವ್ಹೆಯಲಿ | ನಿನ್ನ ನಿರ್ಮಾಲ್ಯ ತುಳಸಿಯಾ ಫ್ರಾಣಿಸುವ ತಾ | ಯನ್ನನುದ್ದರಿಸು ಮಹಿಪತಿ ಸುತ ಪ್ರಭುವೆ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾಕೆ ಪುಟ್ಟಿಸಿದಿ ಇನ್ನು ಎಲೊ ಹರಿಯೆ | ಲೋಕ ದೊಳಗನುಗಾಲ ತಿರಿದು ತಿಂಬುವಂತೆ ಮಾಡಿ ಪ ಒಡಲಿಗಾಗಿ ಒಬ್ಬನ ಸಂಗಡ ಹೋಗಲು | ಕೊಡುವವನು ಇಲ್ಲೆಂದು ಪರಿಹರಿಸುವ || ಸುಡು ಈ ಶರೀರವ ಬಳಲಲಾರೆನೊ ವಿಷದ, ಮಡುವನಾದರು ಧುಮುಕಿ ಮರಣವಾಗುವೆ ರಂಗಾ 1 ಪ್ರತಿದಿನವೂ ಅನ್ನ ಕೊಡುವವನ ಬಾಗಿಲಿಗ್ಹೋಗೆ | ಹುತವಾಗುವನು ಎನ್ನ ನೋಡುತಲಿ || ಪರಿ ಬದುಕಿ ಇಹೋದಕಿಂತ | ಹತವಾಗಬಹುದಂಬಿನ ಮೊನೆಗೆ ಬಿದ್ದು ರಂಗಾ 2 ಎಲ್ಲಿ ಬೇಡಿದಲ್ಲವೆಂಬೋ ಸೊಲ್ಲಿಲ್ಲಿದೇ | ಒಲ್ಲೆನೋ ಸಾಕು ಈ ನರ ಜನ್ಮವು ಸಿರಿ ವಿಜಯವಿಠ್ಠಲ ನಿ- | ನ್ನಲ್ಲಿ ದೂತರ ಸಂಗದಲ್ಲಿ ಸುಖಬಡಿಸೊ 3
--------------
ವಿಜಯದಾಸ