ಲೋಕನೀತಿ
ಮನವೇ ನೀ ಭಜಿಸು| ರಾಮನಾಮವನು
ಘನ ಮುಕ್ತಿಸಾಧನೆ | ಪಾದನಾಮವನು ಪ
ಅಂದದ ನಾಮ| ಚಂದದ ನಾಮ||
ವಂದಿಸೆ ಮನಕಾ| ನಂದದ ನಾಮ 1
ಕೋಮಲ ನಾಮ| ನಿರ್ಮಲ ನಾಮ|
ಕಾಮಿತವೀವ ಸು| ಪ್ರೇಮದ ನಾಮ 2
ಪಾವನ ನಾಮ| ಶ್ರೀವರ ನಾಮ||
ಪವನಸಂಜಾತನು ಸ್ಮರಿಸುವ | ನಾಮ 3
ಅಗಣಿತ ಮಹಿಮ||
ಜಗದಭಿರಾಮನ | ಘನಗುಣ ನಾಮ 4
ಭಕ್ತಾದಿ ಜನರು| ಭಜಿಸುವ ನಾಮ|
ಮುಕ್ತಿಸಾಧನವಾದ| ಭಕ್ತಿಯ ನಾಮ 5