ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾಗ್ಯ ಬೇಕೈ ಗುರುವೇ ಬೋಧವ ಕೇಳೆ ಭಾಗ್ಯ ಬೇಕೈ ಜೀವಿಗೆ ಭಾಗ್ಯದ ಹೊರತಾಗಿ ಬೋಧ ಭೋಗಲಂಪಟ ಭವ ರೋಗಿಗೆ ದೊರಕೀತೆ ಪ ಮಾನವಜನ್ಮವ ತಾಳೆ ಬೇಕೆಲೋ ಭಾಗ್ಯ ಹೀನಬಾಳುವೆ ಬೇಸರಾಗೆ ಬೇಕೆಲೋ ಭಾಗ್ಯ ಜ್ಞಾನಿಯ ದರುಶನವಾಗೆ ಬೇಕೆಲೋ ಭಾಗ್ಯ ತಾನು ತನ್ನಯ ನಿಜವ ತಿಳಿಯೆ ಪರಮ ಭಾಗ್ಯ 1 ಬಾಳಿನ ಸುಖಕಾಗಿ ಆಳಾಗಿ ದುಡಿವಂಗೆ ಕೀಳುತನದಿ ಜ್ಞಾನವಲ್ಲಗಳೆಯುವಗೆ ಮೇಲು ತಾನೆಂದು ತಿಳಿದೋಡಾಡುವವನಿಗೆ ಕಾಲನಂಜಿಕೆ ಕಳೆವ ಬೋಧವು ತಿಳಿವೊಡೆ 2 ಏನಾದೊಡೇನಯ್ಯ ಎನ್ನ ಪೂರ್ವದಭಾಗ್ಯ ನಾನಾದೆ ದೇವನು ಗುರು ನೀನೇ ಯೋಗ್ಯ ಹೀನರ ಕೊಂಡೇನು ನಾನೊಂದು ಪಾರಾದೆ ಜ್ಞಾನಿಶಂಕರನೆ ನಾನಾದೆ ಎನ್ನಯ ಭಾಗ್ಯ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಮನುಜಾ ಹಿಡಿ ದಾರಿ ದಾರಿ ದಾರಿ ದಾರಿ | ಪ್ರಾಣಿ ಹಿಡಿ ದಾರಿ ದಾರಿ ದಾರಿ ದಾರಿ ಪ ದೃಢಭಾವದಿಂದಾ | ಪಡೆದು ಸದ್ಬೋಧಾ | ಒಡನೆ ಸದ್ಗುರು ಪಾರಾ | ಸಾರಿ ಸಾರಿ ಸಾರಿ ಸಾರಿ 1 ಚಾರು ಭಕುತಿಯಾ | ದಾರಿ ನಿಶ್ಚಯಾ | ಆರು ಅರಿಗಳ ಕೈಯ್ಯಾ | ಮೀರಿ ಮೀರಿ ಮಮೀರಿ ಮೀರಿ 2 ತನುಧನ ಬೆರೆದು | ಋಣವೆಲ್ಲ ಮರೆದು | ಕ್ಷಣದೊಳೆಲ್ಲಡಗುವದು | ತೋರಿ ತೋರಿ ತೋರಿ ತೋರಿ 3 ಸ್ವಾನಂದ ವಿರಹಿತಾ | ದಿನಗಳೆವರೆ ವ್ಯರ್ಥಾ| ಮಾನವಜನ್ಮದಿ ಮತ್ತೆ | ಬಾರಿ ಬಾರಿ ಬಾರಿ ಬಾರಿ 4 ಸಾರಥಿ | ತೋರಿ ತೋರಿ ತೋರಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನ ಮಾಡಲಿ ಶ್ರೀಹರಿ- ಇಂಥ |ಮಾನವಜನ್ಮ ನಚ್ಚಿಸಬಹುದೆ? ಪಮಾತನಾಡದೆ ಮೌನದೊಳಿದ್ದರೆ-ಮೂಕ-|ನೀತನೆಂದು ಧಿಕ್ಕರಿಸುವರು ||ಚಾತುರ್ಯದಿಂದಲಿ ಮಾತುಗಳಾಡಲು |ಈತನು ಬಲು ಬಾಯ್ಬಡಿಕನೆಂಬುವರಯ್ಯ 1ಮಡಿ ನೇಮ ಜಪ-ತಪಂಗಳ ಮಾಡುತಿದ್ದರೆ |ಬಡಿವಾರದವನೆಂದಾಡುವರು ||ಮಡಿ ನೇಮ ಜಪ-ತಪಂಗಳ ಮಾಡದಿದ್ದರೆ |ನಡತೆ ಹೀನನೆಂದು ಬಲು ನಿಂದಿಸುವರಯ್ಯ 2ಗಟ್ಟಿಯಾಗಿ ಒಪ್ಪತ್ತಿನೂಟದೊಳಿದ್ದರೆ |ನಿಷ್ಟೆಯೇನು ಸುಟ್ಟಿತೆಂಬರು |ಗಟ್ಟಿಯಾಗಿ ಎರಡು ಮೂರು ಬಾರಿಯುಂಡರೆ |ಹೊಟ್ಟೆ ಬಾಕನೆಂದು ತೆಗಳಾಡುವರಯ್ಯ 3ಒಲಪಿನೊಳ್ಚೆನ್ನಿಗತನವನು ಮಾಡಲು |ಬಲು ಹೆಮ್ಮೆಗಾರನೆಂದಾಡುವರು ||ಸುಲಭತನದಿ ತಾ ನಿಗರ್ವಿಯಾಗಿದ್ದರೆ |ಕಲಿಯುಗದಲಿ ಮಂದಮತಿಯೆಂಬುವರಯ್ಯ 4ನರಜನ್ಮದೊಳಗಿನ್ನು ಮುಂದೆ ಪುಟ್ಟಿಸಬೇಡ |ಮೊರೆ ಹೊಕ್ಕೆ ಮತ್ಸ್ಯಾವತಾರ ನಿನ್ನ ||ಧರೆಯೊಳಗಿಹ ಪರಿಯಂತರ ಸಲಹೆನ್ನ |ಕರುಣವಾರಿಧಿ ಶ್ರೀಪುರಂದರವಿಠಲ5
--------------
ಪುರಂದರದಾಸರು
ಮಾನವಜನ್ಮ ದೊಡ್ಡದು - ಇದ |ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಪ.ಕಣ್ಣು ಕೈಕಾಲ್ಕಿವಿ ನಾಲಗೆ ಇರಲಿಕ್ಕೆ |ಮಣ್ಣುಮುಕ್ಕಿ ಮರುಳಾಗುವರೆ ||ಹೊನ್ನು ಹೆಣ್ಣಿಗಾಗಿ ಹರಿನಾಮಾಮೃತವನು |ಉಣ್ಣದೆ ಉಪವಾಸವಿರುವರೇನೋ 1ಕಾಲನವರು ಬಂದು ಕರಪಿಡಿದೆಳೆವಾಗ |ತಾಳು ತಾಳೆಂದರೆ ಕೇಳುವರೆ ? ||ವೇಳೆ ಹೋಗದ ಮುನ್ನ ಧರ್ಮವ ಗಳಿಸಿರೊ |ಸುಳ್ಳಿನ ಸಂಸಾರ ಸುಳಿಗೆ ಸಿಲುಕಬೇಡಿ 2ಏನು ಕಾರಣ ಯದುಪತಿಯನು ಮರೆತಿರಿ |ಧ್ಯಾನ್ಯ - ಧನ -ಸತಿ - ಸುತರಿವು ನಿತ್ಯವೆ? ||ಇನ್ನಾದರು ಶ್ರೀ ಪುರಂದರವಿಠಲನ |ಚೆನ್ನಾಗಿ ಭಜಿಸಿ ನೀವ್ ಸುಖಿಯಾಗಿರಯ್ಯ 3
--------------
ಪುರಂದರದಾಸರು