ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಶೇಷ ಆ ಹಣ್ಣು ಈ ಹಣ್ಣು ನೆನಸಿ ಫಲವೇನೆ ಈ ಹುಣಸೇಹಣ್ಣಿಗೆ ಸಮಬಾಹೋದೇನೆ ಪ ಹಡಗಿಂದ ಬಂದಿತು ಉತ್ತತ್ತಿ ಹಣ್ಣು ಬಡವರಿಗೆ ಬೇಕಾದ ಬಾಳೆಯ ಹಣ್ಣು ಕೂತರೆ ಏಳದು ಕುಂಬಳದ್ದಲ್ಲ ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 1 ಮಕ್ಕಳು ಬಯಸುವ ಚಕ್ಕೋತ ಹಣ್ಣು ಸಕ್ಕರೆ ಸವಿಯಾದ ಅನಾಸಿನ ಹಣ್ಣು ರುಚಿ ಹಲಸಿನ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 2 ದಾಹವಡಗಿಸುವದು ದ್ರಾಕ್ಷಿಯ ಹಣ್ಣು ದೊರೆಗಳು ತಿನ್ನುವ ದಾಳಿಂಬೆ ಹಣ್ಣು ಫರಂಗಿಯರು ತಿನ್ನುವ ಪನ್ನೇರಳೆ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 3 ಅತಿಮಧುರವಾದ ಕಿತ್ತಲೆ ಹಣ್ಣು ಯತಿಗಳಿಗಾನಂದ ಸೀತಾಫಲದ್ಹಣ್ಣು ಅತಿರುಚಿಯಾದ ಅಂಜೂರದ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 4 ಮಾನವಂತರು ತಿನ್ನುವ ಮಾವಿನ ಹಣ್ಣು ಜ್ಞಾನಿಗಳಿಗೆ ರಾಮನಾಮದ ಹಣ್ಣು ದೀನಜನರು ತಿಂಬ ಮೂಸುಂಬೆ ಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 5 ಅಪರೂಪದಲಿ ಬೆಳೆದ ಮಾದಳದ್ಹಣ್ಣು ಕಪಿಗಳು ತಿನ್ನುವ ಸೀಬೆಯ ಹಣ್ಣು ತಪಸ್ವಿಗಳಾಹಾರ ಜಂಬುನೇರಳೆಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 6 ಪರಿ ಔಪಧಕೆ ಹೆರಳೆಯ ಹಣ್ಣು ಮರ್ಯಾದೆಗೆ ಕೊಡುವ ನಿಂಬೆಯ ಹಣ್ಣು ಪರಮ ರೂಪಿಯಾದ ಕರಬೂಜದ್ಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 7 ಬಡವರಿಗೂ ಈ ಹುಣಸೇ ಹಣ್ಣಿರಬೇಕು ಬಲ್ಲಿದರಿಗೂ ಹುಣಸೇ ಹಣ್ಣಿರಬೇಕು ರುಚಿ ಎಲ್ಲ ಜನರುಗಳು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 8 ಹುಣಸೇಹಣ್ಣಿಲ್ಲದೆ ಭಾಂಡ ಶುದ್ಧಿಗಳಿಲ್ಲ ಹುಣಸೇ ಇಲ್ಲದೆ ಸ್ವಯಂಪಾಕ ರುಚಿಯು ಇಲ್ಲ ಹುಣಸೇ ಮರಕ್ಕಿಂತ ಗಟ್ಟಿ ಮರಗಳಿಲ್ಲ ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 9 ಹುಣಸೇಕಾಯಿಯ ಕುಟ್ಟಿ ರಸವ ಮಾಡುವರು ಹುಣಸೇಹಣ್ಣನು ಕುಟ್ಟಿ ಅಣಿಮಾಡಿಡುವರು ಹುಣಸೇಹಣ್ಣಿನ ಬೆಲೆ ಮುಗಿಲಿಗೇರಿರಲು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 10 ಹರಿಯ ಅಪ್ಪಣೆಯಂತೆ ಹುಣಸೆಯ ಮರಹುಟ್ಟಿ ಪರರಿಗೆ ಉಪಕÀರಿಸುವದಿದು ಹರಿಯಾಜ್ಞೆ ವರದ ಶ್ರೀ ಹರಿ ಕಮಲನಾಭ ವಿಠ್ಠಲನಿಚ್ಛೆ ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 11
--------------
ನಿಡಗುರುಕಿ ಜೀವೂಬಾಯಿ
ಸೊಂಡಿಲಾನಗರದ ಭೂಪನ ಕೊಂಡಾಡಲ್ವಶವಲ್ಲ ತಾಯಿಕಂಡು ಬಂದೆನೆ ಪಾಂಡವರ ಭಾಗ್ಯವ ಪ. ಥೋರ ಮುತ್ತಿನ ಝಲ್ಲೆ ಬಿಗಿದ ತೇರುವಾಜಿ ಶೃಂಗರಿಸಿದ ದಾರಿ ಮ್ಯಾಲ ನಿಂತಾವ ನಮ್ಮ ವೀರ ರಂಗನ ಕರೆಯ ಬರಲು 1 ಅಚ್ಚ ಮುತ್ತಿನ ಝಲ್ಲೆ ಬಿಗಿದಹೆಚ್ಚಿನ ರಥಗಳುವಾಜಿಜತ್ತಾಗಿ ನಿಂತಾವಮ್ಮಅಚ್ಯುತನ ಕರೆಯ ಬರಲು2 ಬರಿಯ ಮಾಣಿಕ ರತ್ನ ಬಿಗಿದ ದೊರೆಗಳೇರೊ ರಥ ವಾಜಿಸರಿಯಾಗಿ ನಿಂತಾವಮ್ಮ ನಮ್ಮಹರಿಯ ಕರೆಯ ಬರಲು 3 ನಾನಾ ಮುತ್ತು ರತ್ನ ಬಿಗಿದ ಆನೆ ಅಂಬಾರಿಗಳು ಕೋಟಿಮಾನವಂತರು ಏರಬೇಕುಶ್ರೀನಿವಾಸನ ಕರೆಯ ಬರಲು 4 ಮುತ್ತು ಮಾಣಿಕ ರತ್ನ ಬಿಗಿದಹೆಚ್ಚಿನ ರಥಗಳು ವಾಜಿಮಿತ್ರೆಯರಿಂದ ಬರತಾರಮ್ಮನಮ್ಮ ಅಚ್ಯುತನ ಕರೆಯ ಬರಲು 5 ಏಳು ಕೋಟಿ ಕಾಲಾಳುಗಳುಭಾಳ ಮುತ್ತಿನ ರತ್ನವಿಟ್ಟುತಾಳ ಮೇಳದಿ ನಿಂತಾರಮ್ಮವ್ಯಾಳಾ ಶಯನನ ಕರೆಯ ಬರಲು6 ಸಾವಿರ ಬಂಡಿಯ ಮ್ಯಾಲೆ ಹೇರಿ ಬುಕ್ಕಿಟ್ಟು ಗುಲಾಲು ಸೂರ್ಯಾಡಿ ರಂಗನ ಕರೆಯಲು ವೀರರೈವರು ಬರುತಾರಮ್ಮ 7 ಕೊಲ್ಹಾರಿ ಬಂಡಿಯ ಮ್ಯಾಲೆ ಮಲ್ಲಿಗೆ ಸಂಪಿಗೆ ಹೇರಿಚೆಲ್ಲಾಡಿ ರಂಗನ ಕರೆಯ ಬಲ್ಲಿದ ಐವರು ಬರುತಾರಮ್ಮ 8 ಮದ್ದು ಬಾಣ ಬಿರುಸು ಕೋಟಿ ಶೀಘ್ರವಾಗಿ ನಿಂತಾವಮ್ಮಮುದ್ದು ರಂಗನ ಕರೆಯ ಬರಲು ಮಧ್ವ ಮತದ ಬಿರುದು ಹಿಡಿಸಿ 9 ಬಿಡವೋ ಬಾಣ ಬಿರುಸು ಕೋಟಿ ಕಡು ಭಾಗÀವತರು ಕೋಟಿಷಟಶಾಸ್ತ್ರ ಬಲ್ಲವರು ಕೋಟಿಒಡೆಯ ರಂಗನ ಕರೆಯ ಬರಲು 10 ತಂದೆ ರಾಮೇಶನ ಗುಣವ ಬಂಧುಗಳು ಹೊಗಳೋರು ಕೋಟಿಅಂದು ಆರಣ ಬ್ರಾಹ್ಮಣ ಕ್ರಮ ಜಟಿ ಬಂದು ಕರೆವೊ ದ್ವಿಜರು ಕೋಟಿ 11
--------------
ಗಲಗಲಿಅವ್ವನವರು
ಹುಚ್ಚು ಹಿಡಿದಿದೆ ಎನಗೆ ಹುಚ್ಚು ಹಿಡಿದಿದೆ ಪ ತುಚ್ಛ ವಿಷಯವೆಂಬುವಂಥ ಅಚ್ಚಮದ್ದು ನೆತ್ತಿಗೇರಿಅ.ಪ ಹಿರಿಯರರಿಯೆ ಕಿರಿಯರರಿಯೆ ಹರಿಯ ಸ್ಮರಣೆ ಮಾಡಲರಿಯೆ ನಾರಿಯರ ಪರಿಚಯದಿ ಆರು ಪುರುಷರೊಡನೆ ಇರುವೆ 1 ಇದ್ದರಿದ್ದೆ ಎದ್ದರೆದ್ದೆ ಇದ್ದ ಸುದ್ದಿ ಪೇಳಲರಿಯೆ ಕದ್ದ ಕಳ್ಳನಂತೆ ಇದ್ದು ಬುದ್ಧಿ ಹೊದ್ದಿಕಿ ಬಿಟ್ಟಿರುವೆ 2 ಹೀನಗುಣಗಳೇನು ಪೇಳಲಿ ಶ್ರೀ ನರಹರಿಯೆ ನೀನೆ ಬಲ್ಲಿ ಮಾನವಂತರು ಜ್ಞಾನವಿತ್ತು ಅಜ್ಞಾನ ವಿಷಯ ಹಾನಿ ಮಾಡಿರಿ3
--------------
ಪ್ರದ್ಯುಮ್ನತೀರ್ಥರು