ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವರ್ಣಿಸಲಳವೆ ಸುಗುಣಸಾಂದ್ರನ ಪ ಕರ್ಣಜನಕಕೋಟಿ ತೇಜಶ್ರೀಶ ಭಜಕ ಜಯ ಮುನೀಂದ್ರನ ಅ.ಪ ಸೂತ್ರ ನೇತ್ರದಿಂದಬದ್ಧಮಾಡಿ ಪಿಡಿದು ಕಡೆದುಶುದ್ಧ ಯುಕುತಿ ಸುಧೆಯ ತೆಗೆದನ ಶಿಷ್ಯ ಜನಕೆಶ್ರದ್ಧೆಯಿಂದಲದನು ಎರೆದನ ಕ್ರೋಧದಿಂದಕೃದ್ಧವಾದಿಗಳನು ಗೆಲಿದನ-ಜಯ ಮುನೀಂದ್ರನ 1 ಮಾನನೀಯ ಶೀಲರಾದಮಾನವರನು ಕರೆದು ಹರಿಯಧ್ಯಾನದಲ್ಲಿ ನಿಲಿಸಿ ಒಲಿಸಿಹಾನಿಯಿಲ್ಲದ ಮುಕುತಿ ಪಡೆದಜ್ಞಾನಮತವ ಜನಕೆ ಸಾರ್ದನ, ಶಿಷ್ಯಜನಕೆಸಾನುರಾಗದಿ ತತ್ವಪೇಳ್ದನಜಯ ಮುನೀಂದ್ರನ2 ಸರಸದಿಂದ ಮೂರ್ಯೋಳುವಿರಸ ದುಷ್ಟ ಭಾಷ್ಯಗಳನುಮುರಿದಕ್ಷೋಭ್ಯ ತೀರ್ಥಯತಿಪಕರಸಂಜಾತ ರಮ್ಯಚರಿತಶರಣ ಜನರ ಪೊರೆವ ಯತಿಪನ, ಶಿಷ್ಯಜನರಮರುಳ ಮೋಹತಿಮಿರ ದಿನಪನ, ನಮ್ಮ ಪರಮಗುರು ಶ್ರೀಕೃಷ್ಣ ಪಾದಭಜಕನಜಯ ಮುನೀಂದ್ರನ3
--------------
ವ್ಯಾಸರಾಯರು
ಶಾಮಸುಂದರ ಮಾಮನೋಹರ ತಾಮರಸಾಕ್ಷ ಪ ಪ್ರೇಮದಿ ಕೊಡು ಕಾಮಿತಾರ್ಥವ ಭೂಮಿವಲ್ಲಭ ಅ.ಪ ಮಾನವಿಲ್ಲದೆ ಹೀನ ನೃಪರನು ನಾನಾ ಪರಿಯಲಿ ಶ್ವಾನನಂದದಿ ನಾನು ಸೇವಿಸಿ ದೀನನಾದೆನೊ 1 ದಾನ ಧರ್ಮಗಳೇನು ಮಾಡದೆ ಮಾನನೀಯರ ಸಾನುರಾಗದಿ ನಾನು ಕೂಡಿದೆ ಜ್ಞಾನವಿಲ್ಲಾದೆ 2 ದಾಶರಥಿ ನೀ ಬೇಸರೀಸುತ ಘಾಸಿಗೈಯ್ಯಲೂ ಘೋಷಿಪರ್ಯಾರೊ ವಾಸವನುತ ರಂಗೇಶವಿಠಲನೆ 3
--------------
ರಂಗೇಶವಿಠಲದಾಸರು
ಇಕ್ಕೊಳ್ಳಕ್ಕೊ ಸಿಕ್ಕ ರಂಗನೋಡುಈಠಕ್ಕ ಮಾಡಿಹ ಬಹು ಕೇಡು ಪಪೆಟ್ಟಿಗೆಯೊಳು ದೇವರುಗಳು ಗಂಡಸ- |ರಿಟ್ಟಿರಲವ ಅಂಜದಾಲೆ ||ಮುಟ್ಟಿ ಮನೆಗೊಂದೊಂದೊಗೆದು ಮುರು-ಬಟ್ಟಿ ಮಾಡಿಬಿಟ್ಟನಲ್ಲೆ 1ತಾ ಕೆಡಿಸಿ ಒಡೆದಡಕಲಿ ಗಡಿಗೆಗಳನು |ಆಕಳ ಒಳಘೊಗಿಸಿಹ್ಯನೂ ||ಈ ಕರಕರೆಯರಿಯಳು ನಮ್ಮತೆಯೆಂ-ಬಾಕೆನ್ನನು ಕೊಲ್ಲುವಳಲ್ಲೆ 2ಅಡಕಲಿಯೊಳು ದೇವರ ತಾಳಿಯ ಸರ |ತುಡುಗು ಮಾಡಿ ತಕ್ಕೊಂಡು ||ಗಡಬಿಡಿ ಮಾಡೆಲ್ಲೊಗೆದನೊ ನಾ ಎ- |ಷ್ಠುಡುಕಿದರೂ ಸಿಗವಲ್ಲೆ3ನೆಲವಿಗೇರಿಸಿದ ಚಟ್ಟಿಗಿಗಳು ಒಂ- |ದಳುಕದೆ ಮೊದಲಂತಿಹವೆ ||ಇಳುಕಲು ಒಂದಕ್ಕೊಂದಕೆ ತೂತು |ಪಾಲ್ಗಳು ಈಸನಿಲ್ಲವಲ್ಲೆ 4ಅಡವಿಯ ದೇವರ ಹೆಸರಿಲಿ ತುಪ್ಪವ |ಮಡಿಯ ಮಾಡಿ ತುಂಬಿರಲು ||ಕುಡಿದು ಮುಚ್ಚಿ ಮೊದಲಪ್ಪಂದಿಟ್ಟಿಹ |ಕೊಡದೊಳು ಬರಿ ನೀರಲ್ಲೇ 5ಅಂಡಜವಾಹನಓಕಳಿ ಚಲ್ಲಿಹ |ಪುಂಡತನದಿ ಮಂಚದ ಮೇಲೆ ||ಭಂಡಿದು ಏನೆಂಧೇಳಲಿ ಮನೆಯೊಳು |ಗಂಡನ ಸಿಟ್ಟು ನೀ ಬಲ್ಲೆಲ್ಲೆ 6ಏನೆನರಿಯದವಳಿಗಿದು ಬಂದಿತು |ಕ್ಷೋಣಿಯೊಳಗೆ ಒಣಹರಲೆ ||ಮಾನನೀಯಳೆ ಈಪರಿಮಾಡಿ- |ದನಿಕೋ ಪ್ರಾಣೇಶ ವಿಠಲನೀಗ 7
--------------
ಪ್ರಾಣೇಶದಾಸರು