ಒಟ್ಟು 9 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಉ) ಆತ್ಮನಿವೇದನೆ ಪಾಲಿಸಯ್ಯಾ ಪ ಎನ್ನ ಜೀಯಾ ಅ.ಪ. ದಾನಕ್ಕೆ ಲೋಭ ಅಡ್ಡಾಯಿತೋ ಮಾನಕ್ಕೆ ಕೋಪಬೀಜವಂಕುರಿಸಿತೋ ಶ್ವಾನನಂದದಿ ಬಾಳಾಯ್ತೋ 1 ಮೃಗ ತಲೆ ಸಿಕ್ಕುತೊಳಲುವ ತೆರದಿ ಮಾಯಾ ಬಿದ್ದೆನೊ ಭರದಿ 2 ದುರಿತವ ತರಿದು ಕಾಪಾಡೋ ಕರವ ಬಿಡಬ್ಯಾಡೊ 3
--------------
ಹನುಮೇಶವಿಠಲ
ಎಚ್ಚತ್ತು ಇರು ಕಂಡ್ಯ ಮನವೇ | ನಮ್ಮ | ಅಚ್ಯುತನಂಘ್ರಿಗಳನು ನೆನೆ ಕಂಡ್ಯ ಮನವೆ ಪ ಆಡದಿರಪವಾದಗಳನು ಕೊಂ | ಡಾಡದಿರಿನ್ನು ಚಿಲ್ಲರೆ ದೈವತಗಳನು || ಬೇಡದಿರು ಭಯ ಸೌಖ್ಯವನು ನೀ | ಮಾಡದಿರಿನ್ನು ದುರ್ಜನ ಸೇವೆಯನು || ಸಜ್ಜನ ದ್ವೇಷವನು1 ನರಜನ್ಮ ಬರುವದೆ ಕಷ್ಟ ಇದ- | ನರಿದು ನೋಡು ವಿಪ್ರಾದಿ ಶ್ರೇಷ್ಠ || ಮರಳಿಬಾಹುದು ಉತೃಷ್ಟ | ಕೇಳೆಲವೊ ಮರ್ಕಟ 2 ಹಾಳು ಹರಟೆಗೆ ಹೋಗಬೇಡ ನೀ ಕಂಡ | ಕೂಳನು ತಿಂದು ಒಡಲ್ಹೊರಿಯಬೇಡ || ಕಾಲ ವ್ಯರ್ಥ ಕಳಿಯ ಬೇಡ ನಮ್ಮ | ಶ್ರೀ ಹರಿಯ ದಯಮಾಡ 3 ಅನ್ಯ ಸ್ತ್ರೀಯರ ನೋಡ ಬೇಡಾ ಹಿಂದೆ | ಮಣ್ಣುಕೂಡಿದವರ ನೀ ನೋಡಾ || ಅನ್ಯ ಶಾಸ್ತ್ರವನೋದಬೇಡಾ ನಮ್ಮ | ಬೋಧ ಮೈ ಮರೆತಿರಬೇಡಾ 4 ಗೋ ವಿಪ್ರರ ಸೇವೆ ಮಾಡು ಸೋಹಂ | ಭಾವಗಳನು ಬಿಟ್ಟು ದಾಸತ್ವ ಕೊಡು || ಕೇವಲ ವೈರಾಗ್ಯ ಮಾಡು ವಿಜಯ || ಲಜ್ಜೆಯ ಈಡ್ಯಾಡೊ5 ನಾನು ಎಂಬುದು ಬಿಡು ಕಂಡ್ಯ ಎನ್ನ | ಮಾನಾಪಮಾನಕ್ಕೆ ಹರಿಯೆನ್ನು ಕಂಡ್ಯ || ಜ್ಞಾನಿಗಳ ಒಳಗಾಡು ಕಂಡ್ಯ ವಿಷಯ | ಬೀಳುವಿ ಯಮಗೊಂಡಾ 6 ಕಷ್ಟ ಪಡದೆ ಸುಖಬರದು ಕಂ- | ಗೆಟ್ಟ ಮೇಲಿನ್ನು ಕಷ್ಟ ತಿಳಿಯೋದು || ದುಷ್ಟ ವಿಷಯ ಆಶೆ ಜರಿದು ವಿಜಯ- | ಕೂಗೆಲವೊ ಬಾಯಿ ತೆರೆದು 7
--------------
ವಿಜಯದಾಸ
ದಯಮಾಡಿ ಪಿಡಿ ಎನ್ನಕೈಯ್ಯಾ ಗುರುರಾಯಾ ಪಕರುಣಾಸಾಗರನೆಂಬ ಬಿರುದು ನಿನಗೆ ಉಂಟು ಅ.ಪನಾನು ನನ್ನದು ಎಂಬ 'ೀನ ಬುದ್ದಿಯ ಬಿಡಿಸುಸಾನುರಾಗದಿ ಮನಸನು ಧರ್ಮದಲ್ಲಿರಿಸುಮಾನಾಪಮಾನಕ್ಕೆ 'ಗ್ಗದೆ ಕುಗ್ಗದೆಧ್ಯಾನಾನಂದದೊಳೆನ್ನ ಇರಿಸಯ್ಯಾ ಸ್ವಾ'ು 1ದೇಹ ನನ್ನದು ಎಂಬ ದುರಭಿಮಾನವ ಬಿಡಿಸುದೇಹಾನುಬಂಧುಗಳ ಮೋಹಬಿಡಿಸುದೇಹಗೇಹಗಳೆಲ್ಲ ದೇವರ ಸ್ವತ್ತೆಂಬಸುಜ್ಞಾನವನು ಕೊಟ್ಟು ಸಲುಹಯ್ಯಾ ಸ್ವಾ'ು 2ದುಷ್ಟ ಬುದ್ಧಿಯು ಎನಗೆ ಹುಟ್ಟದಂತೆ ಮಾಡುಕೆಟ್ಟಜನರ ಗಾಳಿ ತಟ್ಟದಿರಲಿಎಷ್ಟು ಬೇಕಾದಷ್ಟು ಕಷ್ಟಬಂದರು ಸಹಗಟ್ಟ್ಯಾಗಿ ನಿನ್ನಲ್ಲಿ ಭಕ್ತಿಹುಟ್ಟಲಿ ಸ್ವಾ'ು 3ಭೇದ ಅಭೇದದ ಮರ್ಮವ ತಿಳಿಸಯ್ಯಾಸಾಧು ಸಜ್ಜನರ ಸಂಗದೊಳೆನ್ನ ಇರಿಸುಮೋದತೀರ್ಥರ ಮತದ ಸುಜ್ಞಾನವನು ಕೊಟ್ಟುಭೂದೇವ ವಂದ್ಯ ಭೂಪತಿ 'ಠ್ಠಲನ ತೋರು 4
--------------
ಭೂಪತಿ ವಿಠಲರು
ನೆಚ್ಚದಿರು ಸಂಸಾರ ನೆಲೆಯಲ್ಲವೀ ಕಾಯಅಚ್ಯುತನ ನಾಮವನು ನೆನೆದು ಸುಖಿಯಾಗೊ ಪ ಗಳಿಸದಿರು ಸೀಮೆಯನು ಗಳಿಸದಿರು ದ್ರವ್ಯವನುಗಳಿಸದಿರು ನೀ ದುರಿತರಾಶಿಗಳನುನಳಿನನಾಭನ ದಿವ್ಯ ನಾಮವನು ನೆನೆನೆನೆದುನೆಲೆಯಾದ ಪರಮ ಪದವಿಯ ಪಡೆಯೊ ಮನವೆ 1 ನೋಡದಿರು ಪರಸತಿಯ ಕೂಡದಿರು ದುರ್ಜನರಆಡದಿರು ಮಾತುಗಳ ಗರ್ವದಿಂದಬೇಡದಿರು ಕೈಯ ಹಿಂದೆಗೆವ ಲೋಭಿಯನು, ಕೊಂ-ಡಾಡದಿರು ಬೀದಿಗೂಳುಂಬ ದೈವಗಳ 2 ನಾನಾ ಜನ್ಮದಿ ಬಂದ ನಾಟಕದ ಬೊಂಬೆಯಿದುಮಾನಕ್ಕೆ ಮೆಚ್ಚಿ ನೀ ಮರುಳಾಗದೆಜಾಣತನದಿಂ ಕಾಗಿನೆಲೆಯಾದಿಕೇಶವನಮಾನಸದಲಿ ನೆನೆದು ಸುಖಿಯಾಗು ಮನುಜ 3
--------------
ಕನಕದಾಸ
ಬಿಡು ಬಿಡು ಇನ್ನು ಸೋಗಾಚಾರ | ಒಡಿಯ ಬಲ್ಲನು ನಾನು ನಿನ್ನ ವಿಚಾರ ಪ ತುಡಗತನ ಕಲಿತು ನೆರೆಹೊರೆಯವರ ಮನೆಯಲ್ಲಿ | ಗಡಿಗೆ ತುಪ್ಪಾ ಬೆಣ್ಣೆ ಮೊಸರು | ಹಾಲು | ಕುಡಿದು ಛೀ ಹಳಿ ಕದ್ದ ಕಳ್ಳನೆನೆಸಿಕೊಂಡ | ಪಡಚುತನವಲ್ಲದೆ ಭಾರಕನು ನೀನಲ್ಲ 1 ಸೀರಯನು ಕದ್ದಂದು ಕಡವಿನ ಮರವನೇರಿ | ಊರ ನಾರಿಯರ ಮಾನಕ್ಕೆ ಸೋತು || ಜಾರತನದವನಾಗಿ ತಿರಗಿ ಜಗದಾ ಭಂಡ | ಪೋರರಿಗೆ ಪೋರನಲ್ಲದೆ ಹಿರಿಯನಲ್ಲ2 ಮುನಿಗಳೆಜ್ಞದಲ್ಲಿ ತಿರಿತಂದು ಗೊಲ್ಲತೆರ | ತನುಜರ ಸಂಗಡಲಿದ್ದು ಎಂಜಲುಂಡು | ಮನುಜದೇಹವ ತೆತ್ತು ಬಿನಗು ಲೀಲಾಕೃತಿ | ದನಗಾವಿ ಎಲ್ಲದೆ ದೊರೆ ಮಗನು ನೀನಲ್ಲ 3 ಯಾತಕ್ಕೆ ಬಾರದ ಕುನಪೆಣ್ಣಿಗೆ ಮೆಚ್ಚಿ | ಮಾತುಳನ ಕೊಂದು ಮುತ್ತೈಯಗೊಲಿದು | ಭೀತಿಯಲಿ ಪರರಾಯನ ಮಗಳ ಕೊಂಡು ಬಂದ | ಯಾತರ ಪೌರುಷದವನು ಲೋಕದೊಳಗೆಲ್ಲ 4 ತೊತ್ತಿನ ಮಗನಲ್ಲಿ ವುಂಡು ಬಿಗಿಸಿಕೊಂಡು | ಮಿತ್ರಭೇದವನಿಕ್ಕಿ ಬಂಧುಗಳಿಗೆ | ತೆತ್ತಿಗನು ನೀನಾಗಿ ವಾಜಿಗಳ ಪಿಡಿದು | ಹತ್ಯವ ಮಾಡಿಸಿದೆ ಉತ್ತಮನು ನೀನಲ್ಲ 5 ಅಣ್ಣ ತಮ್ಮಂದಿರನು ಅಗಲಿಸಿ ವೈರದಲಿ | ನುಣ್ಣಗೆ ಒಬ್ಬರೊಬ್ಬರ ಕೊಲ್ಲಿಸಿ | ಇನ್ನೇನು ಉಸರುವೆನು ಕಟ್ಟಕಡಿಗೆ ಎಲ್ಲ | ನಿನ್ನ ಕುಲವನು ಕೊಂದೆ ಇದು ಪುಶಿಯಲ್ಲ 6 ತಿಳಿಯಲಾರರು ನಿನ್ನ ಠಕ್ಕು ಠವಳಿಯ ಮಾಯ | ಜಲಜ ಸಂಭವ ಶಿವ ಇಂದ್ರಾದ್ಯರು | ಸುಲಭ ದೇವರದೇವ ವಿಜಯವಿಠ್ಠಲರೇಯ |ವೊಲಿದ ದಾಸರಿಗೆ ಸಂತಾನ ಕುಲದೀಪ7
--------------
ವಿಜಯದಾಸ
ಮತಿತಪ್ಪಿ ನಡೆದೆಯಲ್ಲ ಶ್ರೀಲಕುಮೀ ಪತಿಯನು ನೆನೆಯಲಿಲ್ಲ ಹಿತವಾದ ಪಥವು ಸಂತತ ತೋರದೆ ನೀನು ಖತಿಗೊಂಡು ವೆಂಕಟಪತಿಯನು ನೆನೆಯದೆ ಪ ಕೃತ ತ್ರೇತ ದ್ವಾಪರ ಕಲಿಯುಗ ಚತುರ್ವಿಧ ಜೊತೆಯಾಗಿ ಪೋಗಲು ಸಾವಿರ ಬಾರಿಯು ಚತುರಾಸ್ಯ ಬ್ರಹ್ಮಗೆ ಹಗಲೊಂದು ಸಲುವುದು ಗತಿಯ ಕಾಣೆನು ಶ್ರುತಿಯ ಅಯುತ ಕಾಲದೊಳು 1 ಹಿಂದಣ ಭವದೊಳಗೆ ಬಂದ ಭವದೊಳಗೆ ಸಂ - ಬಂಧವಾಗಿಹ ಸತಿಯರೆಷ್ಟು ಮಂದಿಯೋ ಕಾಣೆ ಕಂದರನು ಪಡೆದುದಕೆ ಲೆಕ್ಕ ಸಂಖ್ಯೆಗಳಿಲ್ಲ ತಿಂದ ಅನ್ನವು ಮೇರುವಿಗಿಂತ ಇಮ್ಮಡಿಯು 2 ಕಾಯ ಬಿಡಿಸಿಕೊಂಬುದು ಜೀವ ಅಡಿಗಡಿಗೆ ಹುಟ್ಟುತ್ತ ಸಾವಾಗಯೆನ್ನುವನು ಕಾಲ ಮನದಿ ಬೇಸರಗೊಳಲು ಜಡತೆಕಿಕ್ಕದೆ ಮುಂದೆ ಕಡೆ ಹಾಯು ಮನವೆ 3 ಬಲೆಯ ಕಾಣದೆ ಪಕ್ಷಿ ಮೇವಿನಾಸೆಗೆ ಪೋಗಿ ತಲೆ ಸಿಕ್ಕಿ ಪ್ರಾಣವನು ಕಳಕೊಂಬ ತೆರನಂತೆ ಕುಲವೃಕ್ಷದೊಳಗಿರ್ದ ಫಲದ ಮಮತೆಗಳಿಂದ ಜಲಜನಾಭನ ಬಿಟ್ಟು ಹೊಲಬುದಪ್ಪಿತಲ 4 ಸ್ನಾನಕ್ಕೆ ಚಳಿ ಹುಟ್ಟಿ ಧ್ಯಾನಕ್ಕೆ ಮರವೆಯು ಮೌನಕ್ಕೆ ಕೋಪದ ಬೀಜವಂಕುರಿಸಿತು ದಾನಕ್ಕೆ ಲೋಭವು ಮಾನಕ್ಕೆ ಪಿಸುಣರು ಏನ ಮಾಡಿದರಿವರು ಬಿಡರಲ್ಲೊ ಮನವೆ 5 ಸಂಗಡದಿ ಬರುತಿಪ್ಪ ಶುಭಗಳನು ಕಡೆಗಿಟ್ಟು ಅಂಗಸುಖವ ತಾಳ್ದು ಗೊಂಗುಡಿಯ ಹೊದ್ದು ಕಂಗಳಿಗೆ ಚೆಲುವಾದ ಅಂಗನಾಮೋಹದಿ ಶ್ರೀ- ರಂಗನ ನಾಮದ ಅಂಗಿಯ ಸಡಲಿಸಿದೆ 6 ಹರಿಧ್ಯಾನ ಹರಿಪೂಜೆ ಹರಿನಾಮ ಕೀರ್ತನೆಯು ಹರಿಭಕ್ತಿ ನರ್ತನೆಯು ಹರಿಯ ಸೇವೆಗಳು ಎರವುದೋರದೆ ನೀನು ವರಾಹತಿಮ್ಮಪ್ಪನನು ಸ್ಥಿರವಾಗಿ ನಿಲುವಂತೆ ಕರಕೊಳ್ಳೊ ಮನವೆ 7
--------------
ವರಹತಿಮ್ಮಪ್ಪ
ಮಾಧವ ಪ ಮಾಧವ ಅ.ಪ. ಪಾರುಗಾಣೆನಯ್ಯ ಸಂಸಾರ ಬಂಧನದಿಂದ ನಾನುಸಾರಾಸಾರಾ ವಿಚಾರವಿಲ್ಲವೊ ಗಡ ತೀರ ಅಲ್ಪನು ತಿಳಿ 1 ಜ್ಞಾನಹೀನನಾಗಿ ನಿನ್ನ ಧ್ಯಾನಮಾಡದಾದೆ ನಾನುಮಾನಾಪಮಾನಕ್ಕೆ ನೀ ಹೊಣೆಗಾರನು ದೀನಜನಪಾಲಕನೆ 2 ಆರು ಹಗೆಗಳೆನ್ನ ಮೈಯ್ಯ ಸೇರಿ ನಿನ್ನ ಭಜಿಸಗೊಡರುಬಾರೊ ನೀ ದಯವನು ತೋರೊ ಗದುಗಿನ ವೀರನಾರಾಯಣನೆ 3
--------------
ವೀರನಾರಾಯಣ
ಮಾವಿನಕೆರೆ 4 ನೀನಿಲ್ಲದೆನಗಾರೋ ಮಾಂಗಿರಿಯ ರಂಗ ಪ ಮಾನಾಪಮಾನಕ್ಕೆ ಹೊಣೆಗಾರ ರಂಗಾ ಅ.ಪ ಗಿರಿಯೊಳಗೆ ವಾಸಿಸುವೆ ನರರ ಗೋಜೆನಗೇಕೆ ನರರ ನೇತ್ರಂಗಳಿಗೆ ಹರನಂತೆ ಕಾಂಬೇ ಧರೆಯೊಳಗೆ ವಾಸಿಸುವರಾರ ಹಂಗೆನಗಿಲ್ಲ ಕೊರತೆಯೇ ಎನಗಿಲ್ಲವೆಂದರಿಯಬೇಡಾ 1 ಗಿಯಾದರೇನಯ್ಯ ಸುರಲೋಕಕದು ಪೂಜ್ಯ ಹರನಾದಡೇನಯ್ಯ ಹರಗೆ ಪಿತನೀನು ನರರ ಹಂಗೇಕಿಲ್ಲ ಗಿರಿಯನೇರುವ ಭಕ್ತ [ಜ] ನರಅಂಜಿಟ್ಟಾ ಹರಕೆಗಳು ಸಾಲವೇ ರಂಗ 2 ಶಾಮಜೋಯಿಸ ನಿನ್ನ ಸೋಮಧರನೆಂಬರಿಗೆ ವಿಭೂತಿ ಅಕ್ಷತೆಯ ನೀಡುವಾ ಸೋಮಸುಂದರ ನಮ್ಮ ಮಾಂಗಿರಿಯ ರಂಗಯ್ಯ ಸ್ತೋಮ ಜನಗಳಿಗದು ತಿರುಮಣಿಯೂ ಜೀಯ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹರಿದಾಸನಾದರೆ ಹ್ಯಾಂಗಿರಲಿ ಬೇಕು ನರಲೋಕದ ಚಿಂತೆ ಬಿಟ್ಟುಕೊಡಬೇಕು ಪ ಇಂದ್ರಿಯಗಳನ್ನೆಲ್ಲ ಗ್ರಹಿಸಬೇಕು ಬಂದದೆಲ್ಲ ಬರಲಿ ಈಗಲೇ ಎನಬೇಕು ಅಂದವರು ಎನಗೆ ಬಂಧುಗಳು ಎನಬೇಕು 1 ಸ್ನಾನವನು ಬಿಟ್ಟು ಹರಿಕಥೆಯ ಕೇಳಲಿ ಬೇಕು ಮಾನಾಭಿಮಾನಕ್ಕೆ ಹರಿತಾನೆ ಎನಬೇಕು ಏನಾದರಾಗಲಿ ಸುಖಬಡಲಿಬೇಕು 2 ಇರಳು ಹಗಲು ಹರಿಸ್ಮರಣೆ ಮಾಡಲಿ ಬೇಕು ಪರಲೋಕದ ಗತಿ ಬಯಸಬೇಕು ಗುರುಹಿರಿಯರಿಗೆ ವಂದನೆಯ ಮಾಡಲಿ ಬೇಕು ದುರುಳರನ ಕಂಡರೆ ದೂರಾಗಬೇಕು 3 ತಾವರೆಮಣಿ ತುಲಸಿಸರವ ಧರಿಸಲಿಬೇಕು ಭಾವಶುದ್ಧನಾಗಿ ತಿರುಗಬೇಕು ಕೋವಿದರೆ ಸಂಗಡ ಕೂಡ್ಯಾಡುತಿರಬೇಕು ಪಾವಕನಂತೆ ಇಂಪವ ಕಾಣಬೇಕು 4 ಅನ್ನಪಾನಾದಿಗಳಿಗವಸರ ಬೀಳದಿರಬೇಕು ಕಣ್ಣಿದ್ದು ಕುರುಡನೆಂದೆನಿಸಬೇಕು ಚೆನ್ನಾಗಿ ವಾಯುಮತದಲ್ಲಿ ನಿಂದಿರಬೇಕು ತನ್ನೊಳಗೆ ತಾ ತಿಳಿದು ನಗುತಲಿರಬೇಕು 5 ಬಿಂಬ ಮೂರುತಿಯ ಹೃದಯದಲಿ ನಿಲಿಸಲಿ ಬೇಕು ಡಂಭಕ ಭಕುತಿಯ ಜರಿಯ ಬೇಕು ಡಿಂಬುವನು ದಂಡಿಸಿ ವ್ರತವ ಚರಿಸಲಿ ಬೇಕು ನಂಬಿ ನರಹರಿಪಾದವೆನುತ ಸಾರಲಿ ಬೇಕು6 ಹರಿಯಿಲ್ಲದನ್ಯತ್ರ ದೈವವಿಲ್ಲೆನ ಬೇಕು ಮರುತನೆ ಜಗಕೆ ಗುರುವೆನಲಿ ಬೇಕು ಪುರಂದರದಾಸರೇ ದಾಸರೆಂದನ ಬೇಕು ಸಿರಿ ವಿಜಯವಿಠ್ಠಲನ ಸ್ಮರಣೆ ಮಾಡಲಿ ಬೇಕು 7
--------------
ವಿಜಯದಾಸ