ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಪದ್ಭಾಂಧವ ವಿಠಲ | ಕಾಪಾಡೊ ಇವಳಾ ಪ ಶ್ರೀಪತಿ ಶೀರಂಗ ಸ | ಮೀಪಗನೆ ಹರಿಯೇ ಅ.ಪ. ದುರಿತ ರಾಶಿಗಳಳಿದು | ಹರಿನಾಮ ಸುಧೆ ಸವಿಯೆವರಮಾರ್ಗ ತೋರಿ ಪೊರೆ | ಶ್ರೀದ ನರಹರಿಯೇ |ತರುಣಿಮಣಿ ಹರಿದಾಸ್ಯ | ನೆರೆಸುಕಾಂಕ್ಷಿಸಲಾಗಿವಿರಚಿಸಿಹೆ ಉಪದೇಶ | ಪರಿಪಾಲಿಸಿವಳಾ 1 ತಾರತಮ್ಯಾಂತರದಿ | ಹರಿಯ ಉತ್ಕರ್ಷತ್ವಸುರಸಾದಿ ಸುರರೆಲ್ಲ | ಹರಿದಾಸರೆಂಬಾ |ಎರಡು ಮೂರ್ಭೇದ ಸಹ | ವರ ಜಗದ ಸತ್ಯತೆಯಅರುಹಿ ಪಾಲಿಸು ಇವಳ | ಕರಿವರದ ಹರಿಯೇ2 ಸೀಮೆ ಮೀರಿದ ಮಹಿಮ | ಭೂಮ ಗುಣ ಸಂಪೂರ್ಣಕಾಮಾರಿ ಸಖಕೃಷ್ಣ | ಕಾಮಿತಾರ್ಥದನೇನೇಮ ನಿಷ್ಠೆಗಳಿತ್ತು | ಸಾಧನಗಳಳವಡಿಸಿಕಾಮಿನಿಯ ಪೊರೆಯೊ ಹರಿ ಸ್ವಾಮಿ ಭೂವರಹಾ 3 ಜಲಜಾಕ್ಷನಮಲ ಗುಣ | ತಿಳಿಯಲ್ಕೆ ಸಾಧನವುಕಲಿಯುಗದಿ ಸತ್ಸಂಗಾ | ಬಲ ಉಳ್ಳದೋಹಲವು ಮಾತೇಕೆ ನಿನ್ನ | ಮಲಗುಣ ನಾಮಗಳತಿಳಿಸಿ ಪೊರೆ ಇವಳನ್ನು | ಕಲಿಮಲಧ್ವಂಸೀ 4 ಪಾವ ಮಾನಿಯ ಪ್ರೀಯ ದೇವ ದೇವೋತ್ತಮನೆಭಾವುಕಳ ಪೊರೆಯಲ್ಕೆ | ತೀವ್ರ ಭಿನ್ನವಿಪೇಕಾವ ಕರುಣಾಳು ಗುರು | ಗೋವಿಂದ ವಿಠ್ಠಲನೆಈ ವಿಧದ ಭಿನ್ನಪವ | ನೀ ವೊಲಿದು ಸಲಿಸೋ5
--------------
ಗುರುಗೋವಿಂದವಿಠಲರು
ನಾಗವೇಣಿಯೆಂದರೆ ಹೀಗೇಕೆ ಮಾಳ್ಪಿರಿ ಬಾಗಿಲು ಕುಟ್ಟುವುದೇಕೆ ನೀವ್ ಪ ಬಾಗಿಲು ಬಿಡುವೊಡೆ ಹೇಗದು ಸಾಧ್ಯವೊ ಬೇಗ ಹೇಳು ನೀನಾರು ಇನ್ನು ಅ.ಪ. ಆಗಮ ಕದ್ದೊಯ್ದ ಅಸುರನ ಕೊಂದು ನಾ ನಾನಾಗಲೆ ನಾಲ್ಮೊಗಗಿತ್ತೆ ಕೇಳಿ ಆಗಲೆ ಆಗಮದಲಿ ನಿನಗರ್ತಿಯಷ್ಟಿದ್ದರೆ ಮೂಗನ್ಹಿಡಿದು ಕೂಡೋ ಬೇಗ 1 ಮೂಗನ್ಹಿಡಿವ ಒಣಯೋಗಿಯು ನಾನಲ್ಲ ಆ ಗಿರಿಯನು ನಾ ಪೊತ್ತೆ ಕೇಳಿ ಈಗ ನಾವರಿದೆವು ನೀ ಗಿರಿ ಹೊರವಡೆ ಇಂದು 2 ಕಳ್ಳನಲ್ಲ ಭೂಮಿ ಕಳ್ಳನ ಕೊಂದೆನೆ ಸೂಕರ ನಾನಾಗಿ ಕೇಳಿ ಘೊಳ್ಳನೆ ನಗುವರು ಕೇಳಿದವರು ಇದ ಮೆಲ್ಲು ಹೋಗಿ ನೀ ಮಣ್ಣ 3 ಮಣ್ಣು ಮಾತೇಕೆ ಹಿರಣ್ಯಕನನು ಕೊಂದೆ ಚಿಣ್ಣನ ಕಾಯ್ದೆನು ಕೇಳಿ ಚಿಣ್ಣರ ಸಾಕ್ಷಿಯ ಬಿಟ್ಟರೆ ನಿನಗಿಲ್ಲ ಚಿಣ್ಣನಾಗು ನೀ ಹೋಗÉೂ 4 ಸಣ್ಣವನಾದರೂ ಘನ್ನನು ನಾನಾದೆ ಪುಣ್ಯನದಿಯ ನಾ ಪೆತ್ತೆ ಕೇಳಿ ಬಿನ್ನಾಣ ಮಾತಿಗೆ ಸೋಲುವರಲ್ಲವೊ ಬೆನ್ನು ತಿರುಗಿಸಿ ನೀ ಪೋಗೊ5 ತಿರುಗಿಸಿದವನಲ್ಲ ಬೆನ್ನನೊಬ್ಬರಿಗೂ ನಾ ಪರಶುಧರನು ನಾ ಕೇಳಿ ಅರಸರಲ್ಲ ನಾವ್ ಸರಸಿಜನೇತ್ರೆಯರು ಕರುಣರಹಿತ ನೀ ಪೋಗೊ 6 ಚರಣರಜದಿ ನಾ ಶಿಲೆಯನುದ್ಧರಿಸಿದೆ ಕರುಣರಹಿತನೆ ಪೇಳಿ ನೀವು ಸರಸ ಮಾತುಗಳನು ಮನ್ನಿಸಿ ಎಮ್ಮನು ಕರಿಗಿರೀಶ ನೀ ಕಾಯೋ ಸ್ವಾಮಿ 7
--------------
ವರಾವಾಣಿರಾಮರಾಯದಾಸರು
ಪಥವ ಬಿಡು ಬಿಡು ದೇವ ಪಥದಿ ಮಲಗುವರೆಗತಿ ಚಿದಾನಂದನಿರೆ ಗತಿಗೆಡುವೆನೆ ಭಯಕೆ ಪ ಭವ ಹರಿದುನಿಲ್ಲದಲೆ ನಾನೀಗಲೈ ತರಲಿಕೆಇಲ್ಲಿ ಸರ್ವವೆ ಆಗಿ ನೀ ಬಂದು ಮಲಗಿರುವೆಸುಳ್ಳನಿತು ಸೇರದಿದು ನಿನ್ನವಗೆ ಬಿಡು ಪಥವ1 ಮನುಜ ಸಂಗವನಳಿದು ಮಹದರಣ್ಯವ ಹೊಕ್ಕುಅನಂತರದ ಪುಣ್ಯದಾಶ್ರಮವ ನೋಡಿಸನುಮತದಿ ಪೂಜೆಯನು ಮಾಳ್ಪೆನಾನೆಂದು ಬರೆಘನಸರ್ಪವಾಗಿ ನೀನಡ್ಡ ಬಿದ್ದಿಹೆ ದೇವ 2 ಸಕಲ ಸಂಗವನುಳಿದು ಸ್ವಾನುಭಾವಗಳಿಂದಅಖಿಲ ಮೃಗಗಳ ಕೂಡಿ ನಿಶ್ಚಲತೆಯಿಂದಭಕುತಿಯಲಿ ನಿನ್ನನು ಭಜಿಪೆನೆಂದೈದುತಿರೆಭಕುತನಿಗೆ ಸರ್ಪನಂತಿಹುದಿದೇನೈ ಸ್ವಾಮಿ3 ಏಕಾಂತ ಗೃಹಗಳಲಿ ಏಕಾಂತ ಸ್ಥಳಗಳಲಿಏಕಾಂತವಾಗಿ ನಿನ್ನನೆ ಪೂಜಿಸಿಏಕಾಂತ ಸರ್ವಸಾಧನವೆನುತಲೈದುತಿರೆಏಕಾಂತ ಮಾತೇಕೆ ಪಥವ ಬಿಡು ಎಲೆ ದೇವ 4 ಶುಕಗೆ ಪಂಜರದಂತೆ ಸಾಕ್ಷಿಯೆನಗಿರುತಿರಲುಅಖಿಲ ಚಿಂತೆಯ ಗಿಡುಗ ಬರಲಹುದೆಮುಕುತಿದಾಯಕ ಚಿದಾನಂದ ಗುರು ಕೇಳೆನಗೆಯುಕುತಿಯುಂಟೇ ಬೇರೆ ಬಿಡುಬಿಡಿರೆ ಬಿಡು ಪಥವ5
--------------
ಚಿದಾನಂದ ಅವಧೂತರು
ಪ್ರಾಣ ಗುರು ರಾಮ ವಿಠಲ | ನೀನೆ ಪೊರೆ ಇವಳಾ ಪ ಮೌನಿ ಸದ್ವಂದ್ಯಗೆ | ಶ್ರೀನಿವಾಸದೇವ ಅ.ಪ. ಅರುಹಳೆನ್ನಳವಲ್ಲ | ಗುರುಕರುಣ ಸತ್ಪಾತ್ರೆವರಸುತ್ಯೆಜಸನಿತ್ತ | ಪಾನಕವ ಕೊಂಡುಸಿರಿ ರಮಣ ಮಂದಿರವ | ಸೇರಿ ನಾರಿಳ ಫಲವುಕರಗತವು ಆಗಲದು | ವರಮೂರ್ತಿಎನಿಸೆ 1 ಸುಪ್ತೀಶನಾಜ್ಞೆಯಲಿ | ಇತ್ತಿಹೆನೊ ಅಂಕಿತವಕತೃಸಿರಿ ರಾಮನೆ | ವ್ಯಕ್ತ ತೆರನಾದಾಮಕ್ತಗೊಡೆಯನೆ ದೇವ | ಭಕ್ತವತ್ಸಲಹರಿಯೆಆರ್ತರುದ್ಧರತಾ ಹರಿ | ಅರ್ಥಿಯಲಿಸಲಹೊ 2 ಹರಿದಾಸ್ಯದೊರಕಲ್ಕೆ | ಪೂರ್ವಸುಕೃತವೇ ಮಾರ್ಗತರಳೆ ಅದ ಪಡೆದಿಹಳು | ಕಾರುಣ್ಯ ಮಾರ್ತೆಮರುತಮತದಲ್ಲಿರುವ | ಕಾರುಣದಿ ಪೊರೆ ಇವಳಸರ್ವಜ್ಞಸರ್ವೇಶ | ಸುರ ಸಾರ್ವ ಭೌಮ3 ಭ್ರೂತ ಪಂಚಕದೇಹ | ಸುಸ್ಥಿರವು ಅಲ್ಲೆಂಬಖ್ಯಾತ ಮತಿಯನೆ ಕೊಟ್ಟು | ಸಲಹ ಬೇಕಿವಳಾಮಾತುಮೂತಿಗೆ ನಿನ್ನ | ನಾಮ ಸಂಸೃತಿಯಿತ್ತುಈ ತರಳೆನುದ್ದರಿಸು | ಮಾತಳಾಂತಕನೆ4 ಹಲವು ಮಾತೇಕೆ ಹರಿ | ಕಲಿಯುಗದಿ ತವನಾಮಬಲುಮಂದಿ ಜಪಿಸುತ್ತ | ಭವವ ದಾಂಟಿಹರೊಒಲಿಮೆಯಿಂದವಳನ್ನು | ಸಲಹಲ್ಕೆ ಪ್ರಾರ್ಥಿಸಿಹೆಎಲರುಣಿ ಶಯ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸಮಿಪ ಸದ್ಗುರುರಾಯಾ ಆ ನಿನ್ನ ದಯದಿ ಪುನೀತವಾದುದು ಕಾಯಾ ಅರಿವಾಯ್ತು ಎನ್ನ ಸ್ವರೂಪದನುಭವ ಜೀಯಾ ಮಾಯಾ ಘೋರಕರ್ಮವ ನೀಗಿದೆನು ನಾ ಪಾರಮಾರ್ಥಿಕ ಸತ್ಯವರಿಯುತ ಮೀರಿದಾನಂದದಲಿ ಮುಳುಗತ ಸೇರಿ ಒಂದಗಿಹೆನು ನಿನ್ನೊಳು ಸರಸ ನಿನ್ನಯ ಬೋಧಾ ಈ ಮರುಳು ಮಾನವರೇನು ಬಲ್ಲರು ಮೋದ ಮಾತೆನಲುಬೇಗನೇ ಸಚ್ಚಿದಾತ್ಮನ ಶೋಧಾ ಮರುಳುಮತಿಗಳು ಅರಿದರೆಂತೋ ಪರಮತತ್ವವ ಪರವಿಚಾರದಿ ದುರುಳರಾ ಮಾತೇಕೆ ನಿನ್ನಯಕರುಣೆಯಿಂದಲಿ ಪಾರುಗಂಡÉನು
--------------
ಶಂಕರಭಟ್ಟ ಅಗ್ನಿಹೋತ್ರಿ
ಭಾಗೀರಥೀದೇವಿ ಭಯನಿವಾರಣೆ ಗಂಗೆ |ಸಾಗರನ ನಿಜರಾಣಿ ಸಕಲಕಲ್ಯಾಣಿ ಪಒಮ್ಮೆ ಶ್ರೀಹರಿ ಪಾದಕಮಲದಿಂದುದುಭವಿಸಿ |ಬ್ರಹ್ಮಕರ ಪಾತ್ರೆಯಲಿನಿಂದುಬಂದೆ ||ಶ್ರೀ ಮನ್ನಾರಾಯಣನ ಪಾದತೀರ್ಥವಾಗಿ |ಬೊಮ್ಮಾಂಡವನು ಪಾವನಮಾಡ ಬಂದೆ 1ದೇವಿ ನೀ ವಿಷ್ಣುಪಾದೋದಕವೆಂದೆನಿಸಿ |ದೇವತೆಗಳಿಗೆಲ್ಲ ಅಧಿಕವಾದೆ ||ದೇವರೆಲ್ಲರು ನೆರೆದು ತಲೆಬಾಗಿದರು ಮಹಾ-|ದೇವನ ಶಿರದಿಂದ ಧರೆಗಿಳಿದು ಬಂದೆ 2ಜಹ್ನವಿನುದರದಿ ಪೂಕ್ಕ ಕಾರಣದಿಂದ |ಜಾಹ್ನವಿಯೆಂದು ನೀನೆನಿನೆಕೊಂಡೆ ||ಮುನ್ನ ನರಕಕ್ಕಿಳಿದ ಸಗರರಾಯನ ವಂಶ- |ವನ್ನು ಪಾವನಮಾಡಿ ಪೊರೆಯಲು ಬಂದೆ 3ನಿಟ್ಟಿಸಲು ಮುನ್ನಾರು ಜನ್ನಪಾತಕಹರಣ |ದಿಟ್ಟಿಸಲು ಮೂರುಜನ್ಮದಿ ಮುಕುತಿಯು ||ಮುಟ್ಟಿ ಮಾಡಿದರೊಂದು ಸ್ನಾನಮಾತ್ರದಲಿ |ಸುಟ್ಟು ಹೋಹುದು ಸಾಸಿರಜನ್ಮ ಪಾಪ 4ಹಲವು ಪರಿಯಲಿ ಹರಿಯ ಸ್ಮರಣೆಯಿಲ್ಲದೆ ಭವ-|ದೊಳಗೆ ಸಿಲುಕಿ ಕಡುನೊಂದೆ ನಾನು ||ಹಲವು ಮಾತೇಕೆ ಶ್ರೀ ಪುರಂದರವಿಠಲನ |ಚೆಲುವಪದದಿಂದಿಳಿದು ಒಲಿದು ದಯೆ ಮಾಡೆ 5
--------------
ಪುರಂದರದಾಸರು
ಸಂಗಾವೇತಕೆ ಅಲ್ಪರೊಡನೆ ಗುಣವಿಲ್ಲಮಂಗ ಮನುಜನ ಕೂಡ ಮಾತಾಡಸಲ್ಲ ಪ.ಪರರ ಕೆಣಕಿ ತನ್ನ ಹಿರಿಯತನ ಕೆಡಲೇಕೆ ?ಹರಕೆಯಿಲ್ಲದ ಮೇಲೆ ಹಾದಿಯಿಸಲೇಕೆ ?ಮುರುಕು ಮನೆಯಲಿ ತಾ ಕಷ್ಟವ ಪಡಲೇಕೆ ?ಸರಿಬಾರದವರೊಡನೆ ಸರಸ ಮಾತುಗಳೇಕೆ ? 1ತೊತ್ತಿನ ಕೂಡಾಡಿ ಅತಿದೀಕ್ಷೆ ಕೆಡಲೇಕೆ ?ಹೊತ್ತಿಗಲ್ಲದವನ ಕೂಡ ಗೆಳೆತನದ ಮಾತೇಕೆ ?ರತ್ನವನು ನಾಯ ಕೊರಳಿಗೆ ಸುತ್ತಿ ಬಿಡಲೇಕೆ ?ಕತ್ತೆಯ ಮೇಲೇರಿ ಕೆಡಲೇಕೆ ಮನುಜಾ ? 2ನೆಲೆ ತಪ್ಪಿದ ಮೇಲೆ ನಂಟ - ಬಂಧುಗಳೇಕೆ?ಸಲುಗೆಯಿಲ್ಲದ ಮೇಲೆ ಛಲವು ತನಗೇಕೆ ?ಬುಲುದೈವ ಪುರಂದರವಿಠಲನಿರಲಿಕ್ಕೆ ?ಹಲವು ದೈವದಗೊಡವೆನವಗೇಕೆ ಮನುಜಾ ?3
--------------
ಪುರಂದರದಾಸರು