ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋ ಜೋ ಸುಖಸಾರ ಪ ಜೋ ಜೋ ಜೋಜೋ ದೋಷ ವಿದೂರ ಅ.ಪ ಸುಮ್ಮನೆ ಸಾಗೆಲೊ ಮುಂದೆ ನಮ್ಮ ಮಗುವು ತಾ ಮಲಗಿಹನಿಂದು ನಿಮ್ಮ ಮಂದಿಗೆ ಈ ಶಿಶುವು ಬೊಮ್ಮನು ಫಣಿಯಲಿ ಬರೆದಿಹನೇನೊ 1 ನಿದ್ರೆಯ ಸುದ್ದಿಯ ಕಾಣದ ನಾನು ನಿದ್ರೆಯ ಮಾಡುವ ಸಡಗರವೇನು ಮುದ್ದು ಮಾತುಗಳಲಿ ಫಲವೇನು ನಿದ್ರೆ ನಾ ಮಾಡಲು ಎದ್ದಿರುವರ್ಯಾರು2 ನಿದ್ರೆ ಮಾಡುವುದೆಂತು ಬೇಕಾದ ಜೋಗುಳ ಪಾಡುವೇನೊ ಏಕಮನದಿ ನೀ ಪ್ರಾಜ್ಞನ ಕೂಡೊ ದಧಿ ಕ್ಷೀರಗಳು ನಾಕು ನಿಮಿಷದಲಿ ಜೀರ್ಣವಾಗುವುವೊ 3 ಕಣ್ಣನು ಮುಚ್ಚಿದೆ ಪ್ರಾಜ್ಞ ನಾನು ಚನ್ನಾಗಿ ತಬ್ಬಿದೆ ನೋಡಮ್ಮ ಎನ್ನಯ ಕುಕ್ಷಿಯು ಬರಿದಾಯ್ತು ಇನ್ನು ಪ್ರಸನ್ನಳಾಗುಣಬಡಿಸಮ್ಮ 4
--------------
ವಿದ್ಯಾಪ್ರಸನ್ನತೀರ್ಥರು
ಏಕೆ ವೃಂದಾವನವು ಸಾಕು ಗೋಕುಲವಾಸ |ಏಕೆ ಬಂದೆಯೊ ಉದ್ಧವಾ? ಪಸಾಕು ಸ್ನೇಹದ ಮಾತನೇಕ ಮಹಿಮನು ತಾನು |ಆ ಕುಬುಜೆಯನು ಕೂಡಿದ-ಉದ್ಧವಾ ಅ.ಪಬಿಲ್ಲು ಬಿಳಿಯಯ್ಯನ ಬೇಟ ನಗೆನುಡಿ ನೋಟ |ಇಲ್ಲದಂತಾಯಿತಲ್ಲ ||ಎಲ್ಲರಿಂದಗಲಿಸಿದ ಕ್ರೂರ ಅಕ್ರೂರನವ |ವಲ್ಲಭನ ಒಯ್ದನಲ್ಲ ||ಮಲ್ಲರನು ಮರ್ದಿಸುತ ಮಾವ ಕಂಸನ ಕೊಂದು |ಘಲ್ಲನಾಭನ ತಂದು ತೋರೈ-ಉದ್ಧವಾ 1ಅನುದಿನೊಳಾದರಿಸಿ ಅಧರಾಮೃತವನಿತ್ತು |ಇನಿದಾದ ಮಾತುಗಳಲಿ ||ಮನದ ಮರ್ಮವ ತಿಳಿದ ಮನಸಿಜಪಿತನ ಸಖವು |ಮನಸಿಜನ ಕೇಳಿಯಲ್ಲಿ ||ಕನಸಿನಲಿ ಕಂಡ ತೆರನಾಯಿತಾತನ ಕಾಂಬು |ವನಕ ಬದುಕುವ ಭರವಸೆ ಹೇಳು-ಉದ್ಧವಾ 2ಕರುಣನಿಧಿಯೆಂಬುವರು ಕಪಟನಾಟಕದರಸು |ಸರಸ ವಿರಸವ ಮಾಡಿದ ||ಸ್ಮರಿಸಿದವರನು ಕಾಯ್ವ ಬಿರುದುಳ್ಳ ಸಿರಿರಮಣ |ಮರೆದು ಮಧುರೆಯ ಸೇರಿದ ||ಪರಮಭಕ್ತರ ಪ್ರಿಯ ಪುರಂದರವಿಠಲನ |ನೆರೆಗೂಡಿಸೈ ಕೋವಿದ-ಉದ್ಧವಾ 3
--------------
ಪುರಂದರದಾಸರು