ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ಗೋಪಾಲ ಬಾಲ ಇನ್ನೂ ಭಾಳ ಹೊತ್ತಾಯಿತು ಭಕ್ತ ಪರಿಪಾಲ ಪ. ಮುನಿಜನರೆದ್ದು ಪೂಜಿಸೆ ನಿನ್ನ ನಿಂತಿರೆ ಮನುಜರೆಲ್ಲರೂ ಕಾದಿಹರು ದರುಶನಕೆ ಸನಕಾದಿ ವಂದಿತ ಸರ್ವೇಶನೆಂತೆಂದು ವಿನಯದಿಂದಲಿ ನುತಿಪರು ಭಾಗವತರು 1 ತಾರೆಗಳಡಗಿತು ಕಮಲಗಳರಳಿತು ಪೂರ್ವ ದಿಕ್ಕಿನಲಿ ತೋರುವ ರವಿ ಉದಯ ಭೇರಿ ತುತ್ತೂರಿ ನಗಾರಿ ಬಾರಿಸುತಿದೆ ಸಾರಿ ಕೂಗುತಲಿದೆ ಕೋಳಿ ವೃಂದಗಳು 2 ಬಾಲಲೀಲೆಗಳಿಂದ ಗೋವಳರೊಡನಾಡಿ ಭಾಳ ಆಯಾಸವಾಗಿಹುದೆ ಕಂದಯ್ಯ ಬಾಲೆ ಗೋಪ್ಯಮ್ಮ ನಿನ್ನ ಲಾಲಿಸಲಿಲ್ಲವೆ ಬಾಲಯತಿಗಳು ಪೂಜಿಸುವರೇಳಯ್ಯ 3 ಬಿಸಿಬಿಸಿ ನೀರು ಪಂಚಾಮೃತವೆರೆಯುತ ಹಸನಾದ ಪಾಲು ಸಕ್ಕರೆ ಉಂಡೆಗಳು ಹಸುಗೂಸು ನಿನಗೆ ಹುಗ್ಗಿಯು ದೋಸೆ ಪೊಂಗಲು ಬಿಸಜಾಕ್ಷ ಯತಿಗಳರ್ಪಿಸುವರೇಳಯ್ಯ 4 ನುತಿ ಕೇಳಲಿಲ್ಲ ಆ ದಣಿದೆಂದು ಮಲಗಿದ್ಯಾ ಶ್ರುತಿ ವೇದತತಿಗಿಂತ ಚತುರ ಮಾತಿನೊಳು ಹಿತದಿ ಯಶೋದೆ ಎಬ್ಬಿಸಲೆಂದು ಮಲಗಿದ್ಯಾ ಚ್ಯುತದೂರ ಗೋಪಾಲಕೃಷ್ಣವಿಠ್ಠಲಯ್ಯ 5
--------------
ಅಂಬಾಬಾಯಿ
ದೃಢಚಿತ್ತದೊಳಗೆನ್ನ ಒಡೆಯನೀತಗೆ ಮುನ್ನ ಪಡಿಯೆನಿಪರಿನ್ನುಂಟೆ ಪೊಡವಿಯಲ್ಲಿ ಜನವಾರ್ತೆಯನೆ ಕೇಳಿ ವನಿತೆಯೊಳು ಖತಿತಾಳಿ ಇನಿತು ಕಾಡಿದ ಚಾಳಿಯೊರೆವೆ ಕೇಳಿ ಮಡಿವಳನ ನುಡಿಗಾಗಿ ಕಡುಮೂರ್ಖ ತಾನಾಗಿ ಅಡವಿಗಟ್ಟುವರೇನೆ ಮಡದಿಯನ್ನೆ ಧರ್ಮಪತ್ನಿಯುಮಂತು ಪೂರ್ಣಗರ್ಭವನಾಂತ ಅರ್ಧಾಂಗಿಯನ್ನುಳಿದ ನಿರ್ದಯಾತ್ಮ ದಯೆಯೆಂಬುದಿವನಲ್ಲಿ ತೋರದಿಲ್ಲಿ ಪ್ರಿಯರಾರು ಮತ್ತಿವಗೆ ಧಾತ್ರಿಯಲ್ಲಿ ಭಯವಿಲ್ಲ ಮಾತಿನೊಳು ನಯವದಿಲ್ಲ
--------------
ನಂಜನಗೂಡು ತಿರುಮಲಾಂಬಾ
ಮಾತಿನೊಳು ಕಡುಜಾಣ ನೀತಿಯೆಂಬುದ ಕಾಣ ಪ್ರೀತಿಯಿಲ್ಲದ ಪ್ರಾಣನಾಥನಮ್ಮ ಕಪಿಜನಗಳೊಡನಾಡಿ ಚಪಲಚಿತ್ತನುಮಾದ ಕೃಪೆಯಿಲ್ಲವೆಳ್ಳನಿತು ಕೃಪಣನಕಟ ಸ್ತ್ರೀಹತ್ಯ ನರಹತ್ಯ ಬ್ರಹ್ಮಹತ್ಯವಗೈದ ಸಾಹಸಿಯೆದೇನೆಂಬೆ ಘನನಿತಂಬೆ ಪಕ್ಷಪಾತಿಗಳೊಳಗೆ ಈಕ್ಷಿಸಲ್ ಧರೆಯೊಳಗೆ ದಕ್ಷನೀತಗೆ ಸರಿಯೆ ಪೇಳೆ ಸಖಿಯೆ ಶರವೊಂದು ನುಡಿಯೊಂದರಿಂದ ನಲಿವ ತಿರುಕ ಹಾರುವರೊಡನೆ ಚರಿಸುತಿರುವ ಪರಮಸಾತ್ವಿಕ ಮೂರ್ತಿಯೆಂದು ನುಡಿವ ವರಶೇಷಗಿರಿವಾಸ ನೆಂದುಮೆರೆವ
--------------
ನಂಜನಗೂಡು ತಿರುಮಲಾಂಬಾ
ಮೃತ್ಯುವಿನ ಪರಿಹರಿಸೊ ಮೃತ್ಯುಂಜಯನೆ ಪ ಜಯ ಜಯಾ ಜಯವೆಂಬೊ ಅಸ್ತ್ರಗಳನಿತ್ತು ಪಾಲಿಸಿದಿ ಅ.ಪ. ಪರೀಪರಿಯಿಂದ ಪರಿಜನರು ಬಾಧಿಸಲು ಪರಿಹಾಸ ಮಾಡುವುದುಚಿತವೇ ನಿನಗೆ 1 ಶರಣರಾ ಸುರಧೇನು ತವ ಶರಣೆಯಳ ವ್ರಣವ ಪರಿಹರಿಸೊ ರಣವಾಸಿಯೇ 2 ಸಾಸಿರಾ ಮಾತಿನೊಳು ಇದೇ ಸಾರವಾದದ್ದು ಸತೀ ದೇವೀರಮಣ ಸುಖ ಸುರಿಸೋತಂದೆವರದಗೋಪಾಲವಿಠಲನ ಸಖ 3
--------------
ತಂದೆವರದಗೋಪಾಲವಿಠಲರು