ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಾರಿಗೆಲ್ಲಿಹದು ಫುಲ್ಲನಾಭನ ಸೇವೆ ಸುಲಭವಲ್ಲವಿದು ದುರ್ಲಭ ಸದ್ಗುರು ಮಾರ್ಗ ಧ್ರುವ ಕೋಟ್ಯಾನುಕೋಟಿಗೊಬ್ಬ ಮುಟ್ಟಿ ಕಂಡಿದರಲಿ ನೆಟ್ಟಿಸಿ ತನ್ನೊಳು ತಾ ದೃಷ್ಟಿಸಿ ಗುರುಪಾದ 1 ಮಾತಿನಂತಲ್ಲವಿದು ಜ್ಯೋತಿರ್ಮಯದ ಸುಖ ನೆÉೀತಿನೆÉೀತಿವೆಂಬುದು ಶ್ರುತಿ ಸಾರುತದ ವಾಕ್ಯ 2 ಹರಡಿಸಿರಾಗದು ಮೂರುಲೋಕದೊಳಗ ಕರುಣಿಸಿದರಾಹುದು ಗುರು ಕೃಪೆಯಿಂದ 3 ವರ್ಮ ತಿಳಿಯದೆಂದೆಂದು ಕರ್ಮತಮಂಧರಿಗೆ ಬ್ರಹ್ಮ ಸುಖದೋರುವ ಸ್ವಾಮಿ ಸದ್ಗುರು ಧರ್ಮ 4 ಸೇವೆ ಸೂತ್ರನರಿಯದ ಭಾವಿ ಮಹಿಪತಿಗೆ ಭಾವಭಕ್ತಿಯ ಕೊಟ್ಟು ಪಾವನಗೈಸಿದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧಿಸಿದೇ ನೋಡಿ ಪೂರ್ಣ ಆದಿ ತತ್ವದ ಸುಸ್ಥಾನ ಭೇದಿಸುವದನುದಿನ ಸದಾನಂದ ಗುರುಜ್ಞಾನ ಧ್ರುವ ಮಾತಿನಂತಲ್ಲವಿದು ಸ್ವಾತ್ಮಸುಖದ ಸಾಧನ ಶ್ರುತಿಗಗೋಚರ ನೋಡಿ ಪ್ರತ್ಯೇಕದನುಸಂಧಾನ ಅತಿಗುಹ್ಯಗೂಢವಿದು ಹಿತೋಪಾಯದ ಖೂನ ರತಿಗೊಟ್ಟುನೋಡಿ ಪ್ರತ್ಯಕ್ಷ ಇಹ್ಯ ನಿಧಾನ 1 ನಡಿನೋಟ ನೀಟಮಾಡಿ ಪಡಕೊಳ್ಳದೆ ಸ್ವಹಿತ ನುಡಿಆಟದೋರಬ್ಯಾಡಿ ಕೂಡಿ ಸುಜ್ಞಾನÀಸನ್ಮತ ಬಡಬ್ಯಾಡಿ ನಾನಾಶ್ರಮವಿಡಿಯದೆ ಸುಗಮ ತಾ ಇಡಿದು ತುಂಬೇದ ಸಾಂದ್ರ ನೋಡಿ ಅನಂದೋಭರಿತ 2 ಸಾಧನಕಿದೇ ಮುಖ್ಯ ಸಾಧಿಸಿದೆ ಗುರುದಯ ಇದಕಿಲ್ಲ್ಲಿನ್ನೊಂದಧಿಕ ಬುಧಜನರ ಉಪಾಯ ಅದರಿಂದೊಲುವ ತಾನು ಸದ್ಗುರು ಭಾನುಕೋಟ್ಯುದಯ ಸದ್ಗೈಸಿ ಮಹಿಪತಿಯ ಸದೋದಿತ ಉದಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು