ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀರ ತರಂಗಿಣಿ ತೀರ ನಾರಸಿಂಹ ಪ ಸಾರಿದೆನೊ ತವಪಾದ ಪಂಕಜ ತೋರು ಮನದಲಿ ತವಕದಿ ಅ ನಾರದನುತ ಚಿಚ್ಛರೀರವ ಶ್ರೀ ಭೂದು ರ್ಗಾರಮಣ ದುರಿತಾರಿ ಬ್ರಹ್ಮ ಸ ಮೀರ ಮುಖ ವಿಬುಧಾರ್ಚಿತ ಚಾರು ಚರಣಯುಗ ಕ್ಷೀರಾಬ್ಧಿ ಶಯನ ಮ ದ್ಭಾರ ನಿನ್ನದು ಮೂರು ಲೋಕದ ಸೂರಿಗಮ್ಯ ಸುಖಾತ್ಮಕ 1 ವೇದವೇದ್ಯ ಸಂಸಾರೋದಧಿ ತಾರಕ ಛೇದ ಭೇದ ವಿಷಾದವೇ ಮೊದ ಶ್ರೀದ ಶ್ರೀಶ ಅನಂತ ಆಪ್ತಕಾಮ ಬಾದರಾಯಣ ಭಕ್ತವರ ಪ್ರ ಹ್ಲಾದಪೋಷಕ ಪಾಹಿ ಮಾಂ 2 ಹೋತಹೃದ್ಯ ಜಗನ್ನಾಥವಿಠಲ ನಿನ್ನ ಮಾತು ಮಾತಿಗೆ ಸ್ಮರಿಸುತಿಹ ಸ ಚ್ಚೇತನರನು ನೀ ಸರ್ವದಾ ವೀತಶೋಕ ಭವಭೀತಿ ಬಿಡಿಸಿ ತವ ದೂತರೊಳಗಿಡು ಮಾತರಿಶ್ವಗ ಭೂತಭಾವನ ಭವ್ಯದ3
--------------
ಜಗನ್ನಾಥದಾಸರು
ಯಾತರವ ನಾನೈಯ ಇಂದಿರೇಶ ಪ ಹೋತನ ಕೊರಳೊಳಗೆ ಮೊಲೆಯಿರ್ಪ ತೆರದಲಿ ಅ.ಪ ಗ್ರಾಸಕ್ಕಲ್ಲದೆ ನಾನು ದೇಶ ದೇಶಕೆ ಪೋಗಿ ವಾಸಪಗೆ ಸಮರೆಂದು ದೋಶಿಗಳ ಪೊಗಳೀ ಕಾಸುಗಳಿಸಲು ದಾಸ ವೇಷ ಹಾಕಿದ ಶೂರ ಏಸು ಜನ್ಮವು ಕಳಿಯೆ ನಾಶವಾಗದೊ ಆಶೆ 1 ನೇಮ ನಿಷ್ಠೆಗಳಾಟ ಪರರಿಗೋಸುಗ ಹೂಡಿ ಕೋಮಲಾಂಗಿಯರ ಮನ ಮೆಚ್ಚಿಸುತ ಜಗದೊಳಗೆ ಹೇಮದಾಶೆಗೆ ಸೂಳೆ ಪ್ರೇಮವನ್ನು ತೋರ್ಪಂತೆ ನಾಮಸವಿಯುಣ್ಣದೆಲೆ ಗಾಯನವ ಮಾಡುವೆನು 2 ವ್ಯಾಸಕೂಟದಿ ಬೇರೆ ದಾಸಕೂಟವು ಎಂಬ ದೋಷವಾದವ ಮಾಡಿ ವ್ಯಾಸದಾಸರ ದ್ರೋಹ ಗ್ರಾಸವಾದೆನು ನಾನು ಶಾಸ್ತ್ರವಾಹುದೆ ಬೇರೆ ಭಾಷೆ ಬೇರೆಯು ಆಗೆ ಶ್ರೀಶ ಹರಿಸೋ ಇದನು 3 ಮಾನವರ ಬಹುಮಾನ ಸಾನುರಾಗದಿ ಬಯಸಿ ನಾನು ಮೋದಿಸುವೆ ಹೀನ ಮತಗಳ ಹುಳುಕು ಪ್ರಾಣಪತಿಮತ ಮೇಲ್ಮೆಗಾನಮಾಡೆನು ದೃಢದಿ ಸ್ವಾನುಸಂಧಾನ ವಹೀನ ಜ್ಞಾನಿಯೊ ನಾನು4 ಖ್ಯಾತಿ ಜೀವನಕಾಗಿ ಶಾಸ್ತ್ರವೋದಿದ ಮೂಢ ನೀತಿ ಪೇಳುವೆ ಜನಕೆ ನೀತಿತೆರನಾನಡಿಯೆ ನಿತ್ಯ ನೇಮವುಯನಗೆ ಈತರದ ಹರಿದಾಸ ಮಾತರಿಶ್ವಗೆ ದೂರ 5 ದಾನ ಧರ್ಮಗಳಿಲ್ಲ ಮೌನ ಜಪ ತಪವಿಲ್ಲ ಹೀನಗುಣ ಬಿಡಲಿಲ್ಲ ನಾನುಯೆಂಬುವೆನಲ್ಲ ಸೊಲ್ಲು ಏನು ಬಿಡೆದಿಹೆನಲ್ಲ ನಿನ್ನ ನಂಬಿಹೆನಲ್ಲ ನೀನು ಬಿಡೆ ಮದ್ದಿಲ್ಲ6 ಇಂತುಟಾದರು ಮೆರೆವೆ ಹಂತ ನಿನ್ನಯ ಕೃಪೆಯೊ ಯೆಂತು ಪೇಳಲಿ ಜೀಯ ಸಂತ ಜಯಮುನಿ ವಾಯುವಂತರದಿ ನಲಿವಂಥ “ಶ್ರೀ ಕೃಷ್ಣವಿಠಲ”ನೆ ನಿನ್ನಂಥ ದೊರೆಯಿಲ್ಲ ಸರ್ವೋತ್ತಮನೆ ಶರಣೈಯ7
--------------
ಕೃಷ್ಣವಿಠಲದಾಸರು