ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದು ಬಣ್ಣಿಸಲಿ ಎಲೆ ಧನವೆ ನಿನ್ನ ಮಾಣುವ ವಿಷಯಸುಖ ಅಹುದೆನಿಪ ಪರಿಯ ಪ ಏರಿಸುವಿ ಹಿರಿಕುದುರೆ ತೋರಿಸುವಿ ದುರ್ಮದವ ಹಾರಿಸುವಿ ಸುವಿಚಾರ ಮೀರಿಸುವಿ ಸುಪಥ ದೂರಿಸುವಿ ಮಹನೀತಿ ಘೋರಿಸುವಿ ಬಡವರನು ಕಾರಿಸುವಿ ತಿಂದನ್ನ ಧಾರುಣಿಯೊಳು 1 ಮೆರೆಸುವಿ ಅಂದಣದಿ ಸುರಿಸುವಿ ದುರ್ವಚನ ನರಸುವಿ ಎಡಬಲದಿ ಪರಿಪರಿಯ ಜನರ ತರಿಸುವಿ ಸತಿಸುತರ ಇರಿಸುವಿ ಅರಮನೆಯೊಳ್ ಮರೆಸುವಿ ಮಹಿಮರ ಸಂದರುಶನದ ಸುಖವ 2 ವೇದಶಾಸ್ತ್ರಕಿಳಿಸುವಿ ವಾದನುಡಿ ಕಲಿಸುವಿ ನೀ ಸಾಧುಸಜ್ಜನರ ನಿಜಬೋಧ ತೋರಿಸುವಿಯೋ ಭೇದನಿಕ್ಕುತ ವೈರ ಸಾಧಿಸುತ ಪರಲೋಕ ಸಾಧನೆಯ ಕೆಡಿಸ್ಯಮಬಾಧೆಗಾನಿಸುವಿ 3 ತೊಡಿಸುವಿ ವಿಧವಿಧದ ಒಡವೆವಸ್ತ್ರಂಗಳನು ನುಡಿಸುವಿ ಕಡೆತನಕ ಕಡುದುಗುಡ ಬಡಿಸುವಿ ಬಲುಜಂಬ ನಡೆಸುವಿ ದುಷ್ಷಥದಿ ಕೆಡಿಸುವಿಯೋ ಸಲೆ ಪುಣ್ಯಪಡೆದ ನರಜನುಮ 4 ಇನ್ನೆಷ್ಟು ಬಣ್ಣಿಸಲಿ ನಿನ್ನ ಕರುಣದ ಗುಣವ ನಿನ್ನ ನಂಬಲು ಬಿಡದೆ ಕುನ್ನಿಯೆಂದೆನಿಸಿ ಪನ್ನಂಗಶಯನ ಮಮ ಸನ್ನುತಾಂಗ ಶ್ರೀರಾಮ ನುನ್ನತಂಘ್ರಿಯ ಧ್ಯಾನವನ್ನು ಅಗಲಿಸುವಿ 5
--------------
ರಾಮದಾಸರು
ಜೋ ಜೋ ಜೋನಂತ ಸದ್ಗುಣಧಾಮಾ ಜೋ ಜೋ ಜೋ ಯದುವಂಶಲಲಾಮ ಜೋ ಜೋ ಸಕಲ ಮಲಾಪಹ ನಾಮ ಜೋ ಜೋ ಸಮಾಲಿಂಗಿಹ ಸತ್ಯಧಾಮ ಪ. ನಿಗಮತತಿಗಳೆಲ್ಲ ಪೊಗಳುತ್ತಲಿಹನ ನಗಚಾಪ ಪಿತನನ್ನು ನಗುತ ಪೆತ್ತವನ ಸ್ವಗತ ಭೇದಶೂನ್ಯ ಖಗಪ ವಾಹನನ ಮಗುವೆಂದು ಕೂಗುವ ಮಾರಜನಕನ 1 ಮೂರು ಗುಣಂಗಳ ಮೀರಿದ ಸಿರಿನಲ್ಲ ಚೋರತನದಿ ಬೆಣ್ಣೆ ಮೆಲುವರೆ ಬಲ್ಲ ಈರೇಳು ಭುವನವ ಮೂರಡಿ ಮಾಡಿದ ಧೀರಗೆ ತಕ್ಕ ತೊಟ್ಟಿಲ ಕಾಣೆನಲ್ಲ 2 ಜಾಗ್ರತ್ಸ್ವಪ್ನ ಸುಷುಪ್ತಿ ಭಾವಗಳು ಭೋಗಿ ಶಯನತ್ವದಧೀನವಾಗಿರಲು ವಾಗೀಶವಾಯುಗಳರ್ಚಿಪ ನಿನ್ನನು ತೂಗುವ ರಾಗವ್ಯಾವದೊ ಪೇಳೊ ರನ್ನ 3 ಆದರು ಕಲುಷಾವನೋದನ ನಿನ್ನಯ ಪಾದಕಮಲಗಳ ಪೊಗಳಿ ಪಾಡುವರ ಕಾದುಕೊಳ್ಳುವೆನೆಂಬ ವೇದ ಸಾರವನ್ನು ನೀ ದಯ ಮಾಡಿದರೋದುವೆನಿದನು 4 ನೀರೊಳಗಾಡಬ್ಯಾಡೆಂದರೆ ಕೇಳದೆ ಮಂದರ ಪೊತ್ತು ಬೇರನೆ ಕಿತ್ತಿ ಘೋರ ದೈತ್ಯನ ಸೀಳಿ ತೋರಿ ವಾಮನ ಮೂರ್ತಿ ಧಾರುಣೀಶರ ಕೊಂದ ಧೀರ ರಾಘವನೆ 5 ಚಿಕ್ಕತನದಿ ಬಹು ರಕ್ಕಸ ಕುಲವ ಧಿಕ್ಕರಿಸುತ ಕೈಗೆ ಸಿಕ್ಕದೆ ಓಡಿ ಮಕ್ಕಳಾಟಿಕೆಯಿಂದ ಫಕ್ಕನೆ ಮಾವನ ಸೊಕ್ಕ ಮುರಿದು ನೆಲ ತಿಕ್ಕಿದ ಹರಿಯೆ 6 ಘೋರ ಜರಾಸಂಧ ಸಾಲ್ವೈಕಲವ್ಯರ ಗಾರಗೆಡಿಸಿ ದ್ವಾರಕಾ ಪುರ ರಚಿಸಿ ಕೌರವನೊಶದಲಿ ಸೇರಿದ ಧರಣಿಯ ಮಾರುತಿಯಲಿ ಪ್ರೇಮದೋರಿ ಪಾಲಿಸಿರಿ 7 ಎರಡು ಹೆಂಗಳನಾಳುವುದೆ ಬಹು ಘೋರ ಎರಡೆಂಟು ಸಾವಿರ ಮತ್ತೆಂಟು ನೂರ ನೆರಹಿಕೊಂಡರೆ ನಿನಗಾಗದೆ ಭಾರ ಪರಮಾತ್ಮ ನಿನಗಿದು ಲೀಲಾವತಾರ 8 ಬತ್ತಲೆ ತಿರುಗಿದರಾಗದೆ ದೃಷ್ಟಿ ಕರವಾಳ ಮುಷ್ಟಿ ಸುತ್ತ ತಿರುಹಿ ಪಾಪಿಗಳ ಕೊಂದ ಜಟ್ಟಿಯ ನಿತ್ಯ ನಂಬಿದಪರಿಗಾನಂದ ಪುಷ್ಟಿ 9 ಅಣುಗಳಿಗೆ ಪರಮಾಣುವಾಗಿ ನಿಲುವಿ ಘನಕಿಂತ ಘನವಾಗಿದನುಜರ ಕೊಲುವಿ ಕನಡಿಲಿ ಪ್ರತಿಫಲಿಸುವ ವೋಲಿರುವಿ ಕನಲುತ ಭಕ್ತರು ನೆನೆವಲ್ಲಿ ಒಲಿವಿ 10 ಜೋಗಿ ಜನರ ಸಹವಾಸ ಬೇಡೆಂದರೆ ಪೋಗಿ ಪೋಗಿ ಅವರ ಮನದೊಳಗಿರುವಿ ಶ್ರೀ ಗುರು ಮಧ್ವಮುನಿಯ ಮೇಲೆ ಕರುಣದಿ ಸಾಗಿ ಬಂದಿರುವೀಗ ರೌಪ್ಯ ಪೀಠದಲಿ 11 ಶೃಂಗಾರ ವಾರುಧಿ ಶ್ರೀ ಕೃಷ್ಣಜೀಯ ಮಂಗಳ ದೇವಿಯ ಮೋಹಿಪಕಾಯ ಗಂಗೆಯ ಪಡದಂಗುಷ್ಠವನಿಟ್ಟಪಾಯ ರಂಗನಾಥ ಶ್ರೀ ವೆಂಕಟರಾಯ 12
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿವಾಯುಗಳು ಮೂರಕ್ಕರದ ದೇವ ಮೂರು ವಸ್ತುವ ಬೆರಸಿ ಮೂರು ಮೂರಾಗಿಸೆಯೆ ಪಾಲಿಸುವ ನಮ್ಮ ಎರಡು ವಸ್ತುವು ಸೇರಿ ದೇಹಕ್ಕೆ ಚಲನೆಯದು ಹರಿವಾಯುಗಳ ಒಲುಮೆ ದೇಹ ರಕ್ಷಕವು4 ಅವ್ಯಾಕೃತಾಕಾಶ ರೂಪದಲಿ ತಾನಿಹನು ವಿಶ್ವಂಭರಾತ್ಮಕನು ದೇವ ನಿಜದಿಂದ ಸೃಷ್ಟಿಗವನೇ ಮೂಲ ವಾಸುದೇವಾತ್ಮಕನು ಮಧ್ವಹೃದಯನಿವಾಸಿ ಸರ್ವಮೂಲನವ 5 ಪೃಥಿವಿಯಪ್ ತೇಜಸ್ಸು ಮೂರು ಭೂತಾಣುಗಳು ತುಂಬಿಯಾಗಸದಲ್ಲಿ ವ್ಯಾಕೃತವದಹುದು ತುಂಬಿ ವಾಯುವಿನಣುಗಳ್ ಒಂದೆಡೆಯೆ ತಾನಹುದು ವ್ಯಾಕೃತಾಕಾಶ 6 ಆಗಸದಿ ವಾಯುವಿನ ಪರಮಾಣು ಒತ್ತಡವೆ ದೃಶ್ಯವಾಯುವು ತಾನೆ ಹರಿವುದಾಗಸದಿ ದೃಶ್ಯವಾಯುವಿನ ಪರಮಾಣುವೊತ್ತಡದಿ ನಿಜ ತೇಜವುದಯಿಸುವುದದರಲ್ಲಿ ಮೂರಿಹವು 7 ತೇಜದಿಂದಲೆ ನೀರು ಜಗಕೆಯಾಧಾರವದು ನೀರಿನಿಂದಲೆ ಭೂಮಿ ಉದಯಿಸುವದದರಿಂ ಪಂಚಭೂತಂಗಳಿವು ಭೂಮಿಯಲಿ ತೋರುವವು ಪಂಚಭೂತಾತ್ಮದ ಪ್ರಕೃತಿಯಿದು ಸತ್ಯ 8 ಇವುಗಳಿಗೆ ಒಡತಿಯಾ ಪ್ರಕೃತಿದೇವಿಯು ಸತ್ಯ ಪ್ರಕೃತಿಯೆದೆಯಲ್ಲಿರುವ ದೇವರೂ ಸತ್ಯ ಪ್ರಕೃತಿ ಪುರುಷರ ಲೀಲೆ ಮಧ್ವಮತದಾ ತಿರುಳು ಮಧ್ವ ಸದ್ಗ್ರಂಥಗಳು ಸರ್ವಮೂಲಗಳು 9 ಭೂತಕೃತ್ತೂ ಅವನೆ ಭೂತಪಾಲಕನವನೆ ಭೂತಭಾವದಲಿದ್ದು ಪ್ರೇರಕನು ಅವನೆ ಆತ್ಮಾಂತರಾತ್ಮವೆಂದೆರಡು ರೂಪಗಳವಗೆ ಹೃದಯದಾಕಾಶದಲಿ ವಾಸವಾಗಿಹನು 10 ಪಂಚಭೂತಗಳು ಪಂಚೇಂದ್ರಿಯಗಳು ಪಂಚ ಕರ್ಮೇಂದ್ರಿಯಗಳ ರಚಿಸಿ ಹರಿಯು ಪಂಚಾತ್ಮಕನು ದೇವ ಪಂಚವಾಯುಗಳಿಂದ ಪಂಚತನ್ಮಾತ್ರಗಳ ಜ್ಞಾನವೊದಗಿಪನು11 ಸುಖ ರತಿ ಪ್ರೇರಕನು ತಾನಾಗಿ ಸಿರಿವರನು ಶಾರೀರ ಪುರದಲ್ಲಿ ನೆಲೆಯಾಗಿ ಇಹನು ಬೆಳಗುತ್ತ ದೇಹವನು ಬೆಳಗಿಸುವ ದೇವತೆಗ ಳವನ ಬಳಿಯಿದ್ದು ಸೇವೆಯ ಗೈಯುತಿಹರು 12 ವಿಶ್ವ ದರ್ಶನಕಾಗಿ ವಿಶ್ವಜನರೊಳು ಕಣ್ಣಿನಲ್ಲಿ ನೆಲೆನಿಂತು ವಿಶ್ವಸಾಕ್ಷಿಯು ಸೂರ್ಯನಲ್ಲಿಯೂ ತಾನಿದ್ದು ವಿಶ್ವವನು ಬೆಳಗಿಸುತ ಜ್ಞಾನವೊದಗಿಪನು 13 ಸೂರ್ಯನೊಂದೆಡೆಯಿದ್ದು ತಾನ್ ಬೆಳಗಿ ಲೋಕವನು ತನ್ನ ಕಿರಣಂಗಳಿಂ ಬೆಳಗಿಸುವ ತೆರದಿ ಕಣ್ಣು ಮೊದಲಾದಿಂದ್ರಿಯಗಳಲಿ ತಾನಿದ್ದು ಅವುಗಳನು ಬೆಳಗಿಸುತ ರಕ್ಷಿಪನು ನಮ್ಮ14 ತೈಜಸದ ದೇವನವ ತೇಜದಾರೂಪದಲಿ ಕಂಠಗತನಾಗಿದ್ದು ದೇಹದಲಿ ಬೆಳಗಿ ಹುಲಿ ಕರಡಿ ಮೊದಲಾದ ಜಂತುಗಳ ಸೃಷ್ಟಿಸುತ ಸ್ವಪ್ನಲೋಕವನು ಮಾನಸಕೆ ತೋರಿಸುವ 15 ಪ್ರಾಜ್ಞರೂಪದ ದೇವನಪ್ಪಿ ಜೀವಾತ್ಮನನು ಮಾಯೆಯಾ ಮುಸುಕಿನಿಂದಜ್ಞಾನಬರಿಸಿ ಜೀವನಿಗೆ ತೋರದುದರಿಂದ ಪ್ರಾಜ್ಞನದಾಗಿ ಜಗಕೆ ತನ್ನಯ ಮಾಯೆಯನು ತೋರಿಸುವನು 16 ನಾಲ್ಕನೆಯ ರೂಪವದು ತುರ್ಯ ನಾಮದಲಿಹುದು ಮುಕ್ತರಿಗೆ ಮಾತ್ರವೇ ತೋರುವುದು ಪೇಳ್ವೆ ಜಾಗರಾದಿಯವಸ್ಥೆಗಳ ನಾಲ್ಕು ಪೇಳಿದನು ಮಾಯಾವಿ ಪರಮಾತ್ಮನದು ಲೀಲೆಗಳಿವು 17
--------------
ನಿಡಂಬೂರು ರಾಮದಾಸ
ದಾಸರಿಗೆ ದುರಿತದೋರದುಶೇಷಾಧೀಶ ಶ್ರೀ ಶ್ರೀನಿವಾಸನದ್ವೇಷಖಳ ಮೋಳಿಗೆಯ ನಿ:ಶೇಷವೆನಿಸಿ ನಿಜಜನರ ವರ್ಧಿಪನ ಸುರಾಧಿಪನ ಸುಪ್ರತಾಪನ ಪ.ಅವನಿಯ ಕೊಂಡಿಳಿದವನ ಕೊಂದವನಿ ತಂದ ವನಜಭವ ಸನಕಾದ್ಯರಿಗೊಲಿದನಕುವರ ತನ್ನವರಿದ್ದಾಟವಿಯಲಿದ್ದವನ ಭಯವ ನಿವಾರಿಸಿ ಕುವರಗೆ ವರದನ ಪೊರೆದನ ಮೆರೆದನ 1ವಿಧಿಪದಕರ್ತರ ಗುರುಸುಖತೀರ್ಥರಹೃದಯ ಮಂಗಳ ಮಾನಸದ ಮರಾಳನಪದಸೋಂಕಿಸಿ ಪಾರಾಕಿಯನು ತ್ವರಿಯದಿಸುದತಿಯ ಮಾಡಿದುದರಿಯಾಘಹಾರಿಯ ಅರಿದಾರಿಯಮುರಾರಿಯ 2ಕಿರುಗೆಜ್ಜೆ ನೂಪುರ ವರಜಾಂಬೂನದಾಂಬರದಾಮಕೌಸ್ತುಭಸಿರಿವತ್ಸ ಕೇಯೂರಹಾರ ಕರವಲಯಕುಂಡಲಮಣಿಮಕುಟಾಭರಣಭೂಷಿತ ಘನಗಾತ್ರನಬ್ಜನೇತ್ರನ ಮಾಕಳತ್ರನ ಖಗಪತ್ರನ3ಸಿರಿದೊರೆತಿರೆ ಬೆರೆತಿರದೆ ಆ ಹರಿಶರಣರವೆರೆಸಿ ಗರ್ವಜರಿದು ಶ್ರೀಹರಿಯಗುರುನಿರೂಪದಪರಿಅರಿದೆಡರದರಿದುಅರಿಅರುವರಿಗಂಜದಿಹ ಅಳುಕದಿಹ ದೃಢದಲ್ಲಿಹ ಮುಕ್ತನಾಗಿಹ4ಪಂಚಬೇಧ ವಿವರ ತಿಳಿದು ತತ್ವ ಜಪಿಸಿಪಂಚರಾತ್ರಾಗಮ ತಂತ್ರಸಾರಾರ್ಥಗಳಿಂಮಿಂಚುವ ಭಕ್ತಿ ಪಥದಲಿ ನಿಜಾಯುವಹಿಂಚುಮಾಡುವ ಭವಾರ್ಣವವನೀಸಾಡುವ ಕಡೆಗೋಡುವನಲಿದಾಡುವ 5ವೆಂಕಟೇಶನ ನಾಮ ಪಾಡಿಕೊಂಡಾಡುವವೆಂಕಟೇಶನಾಕೃತಿ ನೋಡೊಲೆದಾಡುವವೆಂಕಟೇಶನ ಕಥಾಮೃತಕೇಳಿಬಾಳುವವೆಂಕಟೇಶನ ಚರಣವೆ ಶರಣೆನುವ ಕಾರಣೆನುವ ಪೂರಣೆನುವ 6ಮೊದಲೆ ಸ್ವಾಮಿ ಪುಷ್ಕರಣಿ ಶ್ರೀವರಾಹನಸದಮಲ ಸುವಿಮಾನ ಶ್ರೀನಿವಾಸನಇದೀಗೆ ಭೂವೈಕುಂಠವೆನಿಪಾನತರಾದರ ಪ್ರಸನ್ವೆಂಕಟೇಶನ ಕಾಣುವ ಶಮಮಾಣುವ ಕೊಬ್ಬಿಕುಣಿವ 7
--------------
ಪ್ರಸನ್ನವೆಂಕಟದಾಸರು