ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆವಯ್ಯ ಗುರುನಿಮ್ಮ ಶ್ರೀಪಾದ ಸಂದಿಸಿತು ಎನ್ನ ಭೇದಾಭೇದ ಮಂಡಲದೊಳಾಯಿತಯ್ಯ ಸುಬೋಧ ಕೊಂಡಾಡುವೆ ಕೀರ್ತಿ ಅಖಂಡವಾದ 1 ಸ್ಮರಿಸುವೆ ನಿಮ್ಮ ಕ್ಷಣ ಕ್ಷಣ ಸ್ಮರಿಸುವೆ ನಿಮ್ಮ ಶ್ರೀಚರಣ ಸ್ಮರಿಸುವೆ ನಿಮ್ಮ ಸಗುಣ ನಿರ್ಗುಣ ಅನುದಿನ 2 ಸ್ಮರಿಸದೆ ನಿಮ್ಮ ಸ್ವರೂಪ ನಿರ್ವಾಣ ಅರಘಳಿಗಿರಲಾರದೆನ್ನ ಪ್ರಾಣ ಪಥ ನಿಮ್ಮ ವಿನಾ ಮೊರೆ ಹೊಕ್ಕಿದೆ ನಾ ಪರಿಪೂರ್ಣ 3 ಆವಾವ ಪರಿಯಲಿನಿಮ್ಮ ಕೀರ್ತಿ ದಿವಾರಾತ್ರೆಯಲಿ ಕೇಳುವ ಸುವಾರ್ತಿ ಭಾವಿಸುವೆ ನಿಮ್ಮ ನಿಜಾನಂದ ಮೂರ್ತಿ ಜೀವನ ಮಾಡುವೆÀ ನಾ ಮಂಗಳಾರ್ತಿ 4 ಬಾಹ್ಯಾಂತ್ರ ನಿಮ್ಮ ಧ್ಯಾನಿಸುವೆ ನಿತ್ಯಾ ಮಹಾಗುರು ನಿಮ್ಮ ಕೃಪೆವಿದು ಸತ್ಯ ಗುಹ್ಯ ಮಹಾವಾಕ್ಯವಾಯಿತು ಪಥ್ಯ ಮಹಿಪತಿ ಆದ ನೋಡಿ ತಾ ಕೃತಕೃತ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವಂದನೆಯ ಮಾಡುವೆ ಶ್ರೀಗುರುವಿಗೆ- ವಂದನೆಯ ಮಾಡುವೆÀ ಪ ವಂದನೆ ಮಾಡುವೆನಿಂದು ಯದುಶೈಲದೋಳ್ ಚಂದದೊಳಿರುತಿಹ ತಂದೆ ನಾರಾಯಣಗೆ ಅ.ಪ ಹರುಷದಿಂದಲಿ ಇನ್ನು ಹರಸಿ ಸಜ್ಜನರಿಗೆ ವರಗಳ ಕೊಡುತಿಹ ವರಲಕ್ಷ್ಮಿ ತಾಯಿಗೆ 1 ಹಿರಿದಾದ ದೈತ್ಯನ ಸೀಳಿ ಸಂತೋಷದಿ ಮೊರೆಹೊಕ್ಕ ಕಂದನ ಪೊರೆದ ನರಸಿಂಹಗೆ 2 ಪಾವನತರಮಾದ ದೇವಸಮೂಹವ ಕಾವ ಕೃಪಾನಿಧಿ ಕಲ್ಯಾಣಮ್ಮಗೆ 3 ವಿಸ್ಫುರಿತದಲ್ಲಿರ್ಪ ವೈರ್ಮುಡಿ ತಿರುಮಣ್ಣು ಸರ್ಪಶಯನಗರ್ಪಿಸಿದಂತ ಗರುಡಗೆ 4 ಶ್ರೀಲೋಲನಡಿಗಳ ಲೀಲಾಮೃತಗಳ ಶೀಲರಾಗಿ ಕುಡಿದ ಶ್ರೇಷ್ಠ ಆಳ್ವಾರ್ರಿಗೆ 5 ವರದವಿಠಲನ ಒಲಿದು ತಾ ಬಂದಿನ್ನು ಗಿರಿಯೊಳು ನೆಲೆಸಿದ ವರ ಗುರುಪೀಠಕೆ 6 ಪಂಕಜಾಕ್ಷನಪಾದಪಂಕಜ ನಂಬಿಹ ವೆಂಕಟಪುರದೊಳಗಿರುವ ವೈಷ್ಣವರಿಗೆ 7 ವಿಷ್ಣುವಿನಂಶದಿ ಪುಟ್ಟಿ ಸಂತೋಷದಿ ಸೃಷ್ಟಿಯನಾಳ್ವ ಶ್ರೀ ಕೃಷ್ಣಭೂಪಾಲಗೆ8 ಮರೆಯದೆ ಭಕ್ತರ ಕರುಣದಿಂದಲಿ ಕಾಯ್ವ ವರಮಹದೇವನ ಪುರದಶ್ರೀರಂಗಗೆ 9
--------------
ರಂಗದಾಸರು