ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡು ಹಿಗ್ಗಿದಳೆ ಕಮಲಾಕ್ಷನ್ನ ಯಶೋದ ಎತ್ತಿ ಕೊಂಡು ಮುದ್ದಿಸಿದಳೆ ಯದುನಾಥನ್ನ ಪ ಪಾಲವಾರಿಧಿ ಮಧ್ಯದಲ್ಲಿ ಶ್ರೀದೇವಿ ಸಹಿತ್ವೊಂ ದಾಲದೆಲೆಯ ಮ್ಯಾಲಾಡುತಲಿ ಕಾಲಬೆರಳು ಕಟಬಾಯಲಿ ಚೀಪುವ ನೀಲವರ್ಣದಲಿ ತನ್ನ ಬಾಲನೆಂದೆನುತ 1 ಕೋಟಿ ಸೂರ್ಯದ ಕಾಂತಿ ಹರಣಮಾಡುವ ಮುಖ ಕಿ- ರೀಟ ಕೌಂಸ್ತುಭ ಮಣಿಯಾಭರಣ ಹಾಟಕಾಂಬರನುಟ್ಟ ನಾಟಕಧಾರಿ ಕಿ ಸಾರಥಿ ಪಕ್ಷಿರಾಟವಾಹನನ 2 ಚೆನ್ನವಾಗೀರೇಳು ಲೋಕವನು ತನ್ನುದರದೊಳಡಗಿಸಿ ಪನ್ನಂಗಶಾಯಿ ಪರಮಾತ್ಮನ್ನ ಚಿನ್ನ ಮಾಣಿಕ್ಯದ ತೊಟ್ಟಿಲೊಳಿಟ್ಟು ತೂಗುತ ಎನ್ನ ಕಂದ ನೀ ತೋಳನ್ನಾಡೆಂದೆನುತ 3 ಕಡಗ ಕಿರುಗೆಜ್ಜೆ ಚರಣದಿಂದಲಿ ನಡೆಯುತಲಿ ಬಂದು ದಧಿ- ಗಡಿಗೆ ತಾ ಒಡೆದನೆ ಕಡಗೋಲಿಂದ ಹಿಡಿದು ಕಟ್ಟಲು ಒರಳೆಳೆದ್ವಿಮಳಾರ್ಜುನ ಗಿಡವ ಕೆÀಡಹಿ ಮುಕ್ತಿಕೊಡುವ ಶ್ರೀ ಕೃಷ್ಣನ 4 ಭವ ಭಯ ನಾಶ ಮಾಡುವಾತ ಭುವ- ನೇಶ ಹದಿನಾಲ್ಕು ಲೋಕದ ವಾಸ ರಾಸಕ್ರೀಡೆಲಿ ವ್ರಜದ್ವನಿತೆಯರ ಸಂತೋಷಬಡಿಸಿದ ಭೀ- ಮೇಶ ಕೃಷ್ಣನ ಮುಖ5
--------------
ಹರಪನಹಳ್ಳಿಭೀಮವ್ವ
ದುರ್ಜನರ ಸಂಗ ಎಂದಿಗೂ ಒಲ್ಲೆನು ಇಂಥ,ಸಜ್ಜನರ ಸಂಗದೊಳಗಿರಿಸೆನ್ನ ರಂಗ ಪ ಭಂಗ ರಂಗ 1 ನಂಬಿದ ಠಾವಿನಲಿ ಕೇಡನೆಣಿಪನ ಸಂಗಸಂಭ್ರಮದಿ ಜಗಳ ಕಾಯುವನ ಸಂಗಹಂಬಲಿಸಿ ಭವದ ಸುಖ ಮೆಚ್ಚಿದಾತನ ಸಂಗರಂಭೆಯರ ನೋಡಿ ಮೋಹಿಪನ ಸಂಗ2 ಕುಹಕ ಮಾಡುವಾತನ ಸಂಗಬಲು ಬೇಡೆ ಕೊಡದಿರುವ ಲೋಭಿ ಸಂಗಕುಲಹೀನರ ಕೂಡೆ ಸ್ನೇಹ ಬೆಳೆಪನ ಸಂಗಹಲವು ಮಾತಾಡಿ ಆಚರಿಸದನ ಸಂಗ3 ಗುರುಸತಿಗೆ ಪರಸತಿಗೆ ಎರಡು ಎಣಿಪನ ಸಂಗಗುರುನಿಂದೆ ಪರನಿಂದೆ ಮಾಡುವನ ಸಂಗಪರಹಿತಾರ್ಥದ ಧರ್ಮ ಪಡೆಯದಾತನ ಸಂಗಪರಮಪಾಮರ ಸಂಗ ಬಹುಭಂಗ ರಂಗ 4 ಭಂಗ 5
--------------
ಕನಕದಾಸ
ನಿನ್ನ ಕ್ಲೇಶವ ಕೇಳೆ ಎನಗೆ ಮರುಕಪ ಎನ್ನ ಕ್ಲೇಶವ ನಿನಗೆ ತಿಳಿಸಬಹುದೆ ದೇವ ಅ.ಪ ಹದಿನಾಲ್ಕು ಲೋಕಗಳ ಹುಡುಗತನದಲಿ ಪಡೆದು ಅದಕೆಲ್ಲ ಅನ್ನವೀಯುವ ಚಿಂತೆಯು ಹದಿನಾಲ್ಕು ಲೋಕಗಳ ಸರ್ವಕರ್ಮಗಳಿಗೂ ಹಗಲಿರುಳು ಪ್ರೇರಣೆಯ ಮಾಡುವಾತಂಕ 1 ಹಿರಿಮಗನದೊಂದುಸಿರ ತರಿದರೆಂಬಾತಂಕ ಕಿರಿಮಗನ ದೇಹ ಪೊಸಕಿದ ಚಿಂತೆಯು ಹರನು ಮೊಮ್ಮಗ ಹಾಲಾಹಲವ ಕುಡಿಯುತ ಹಲ್ಲು ಕಿರಿಯುವಾತಂಕಕ್ಕೆ ಹರವು ತೆರವಿಲ್ಲ 2 ಚಂಚಲಳು ಸತಿಯೆಂದು ಹೊಂಚು ಕಾಯುವ ಚಿಂತೆ ಮಂಚದಲಿ ಘಟಸರ್ಪ ವಿಷದ ಚಿಂತೆ ಸಂಚಿತಾಗಮ ಪ್ರಾರಭ್ಧಗಳನಳಿಸುವಗೆ ವಂಚಕರು ಏನು ಮಾಡುವರೆಂಬ ಚಿಂತೆ 3 ಹಲವು ವಿಧ ವೇಷಗಳ ತಾಳಿ ಜಗಂಗಳಲಿ ನೀ ತಲೆಯ ಮರಿಸಿಕೊಂಡರೇನು ಫಲವೊ ಬಳಸಿ ಹುಡುಕಿ ಗೂಢಚಾರಿ ಯೋಗಿಯು ನಿನ್ನ ತಿಳಿದು ಬೆಳಕಿಗೆ ತರುವ ಮರೆಮಾಚಲೇಕೊ 4 ತಾಪತ್ರಯ ತಳೆಯೆ ಗೋಪನಲಿ ಪುಟ್ಟಿದರು ಗೋಪಿಯರ ಸಾಸಿರದ ಗೋಳು ನಿನಗೆ ಭೂಪ ದಶರಥನ ಮಗನಾಗಿ ಪುಟ್ಟಿದರಯ್ಯೊ ಪಾಪ ಸತಿಯಳ ಕಳೆದುಕೊಂಡ ಬಲುಚಿಂತೆ 5 ನಿನ್ನ ಬೇಡುವುದಿಲ್ಲ ನಿನ್ನ ಕಾಡುವುದಿಲ್ಲ ನಿನ್ನ ನೋಡಲು ಎನಗೆ ಬೇಸರವು ಜಗಕೆ ನಿನ್ನ ಚಿಂತೆಯು ಮನ ಪ್ರಸನ್ನತೆ ನೀಡುವುದು ಇನ್ನೇನು ನಿನಗೆ ಚಿಂತೆಯೊ ತಿಳಿಸಿ ಪೊರೆಯೊ 6
--------------
ವಿದ್ಯಾಪ್ರಸನ್ನತೀರ್ಥರು
ಬೃಂದಾವನವಿದೆಕೊ ಯತಿವರ ಪ ನಂದ ನಂದನ ಗೋವಿಂದನ ಪಾದಾರ ವಿಂದವ ಪೂಜಿಪ ಶ್ರೀರಾಘವೇಂದ್ರನ ಅ.ಪ ಮಂತ್ರಾಲಯದಿ ಸ್ವತಂತ್ರ ಭೂಮಿಕೆಯಲ್ಲಿ ಯಂತ್ರ ಸ್ಥಾಪನೆಗೈದು ಸಂತೃಪ್ತಿಯಾಂತು ಮಂತ್ರಾರ್ಥ ತತ್ವಗಳನುಪದೇಶ ಗೈಯುವ ಮಂತ್ರ ಸ್ವರೂಪನು ಸೇವಿಪ್ಪ ಪುಣ್ಯದ1 ಗುರುರಾಜರಾಜನು ಕರುಣಾಪಯೋಧಿಯು ನಿರುತ ಭಕ್ತರಿಗೆಲ್ಲ ವರವೀವ ದೊರೆಯು ಸರಸೀರುಹಾಕ್ಷ ಮಾಂಗಿರಿವಾಸ ರಂಗನ ಚರಣವ ತೋರುವ ಕೃಪೆಮಾಡುವಾತನ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್