ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾರ ಕಂದನಮ್ಮ ಕೇರಿಗೆ ಬಂದು ಗಾರುಮಾಡುವ ನೋಡಲಾರೆ ಗೋಪ್ಯಮ್ಮ ಈರೇಳು ಲೋಕದೊಡೆಯನೊ ದಾರಮ್ಮ ಪ ಪಿಡಿದಿದ್ದ ಕೊಳಲೂದುವ ಬಾಯಲಿ ಬೆಣ್ಣೆ ಕಡಗೋಲ ಪಿಡಿದಿದ್ದ ಬೆಡಗು ನೋಡಮ್ಮ ಬಿಡಿಮುತ್ತಿನ ಉಡಿದಾರವು ಉಡಿಗಂಟೆ ಮುಡಿದ ಮಲ್ಲಿಗೆ ಕುಸುಮಗಳು ನೋಡಮ್ಮ ಕುಡಿಹುಬ್ಬು ಕಡೆಗಣ್ಣನೋಟದ ಚೆಲುವ ತಾ ಹುಡುಗರಂತಾಡುವ ತುಡುಗ ತಾನಮ್ಮ 1 ಕಮಲ ನಕ್ಷತ್ರದ ಪತಿಯಂತೆ ಇಪ್ಪೊ ವಜ್ರದ ಪದಕಗಳ ನೋಡಮ್ಮ ಅರ್ಕನಂತಿರಲತಿ ಕೋಮಲಪಾದಕೆ ಶುಕ್ಲಗೆ ಮಿಗಿಲಾದ ಗುರು ಕೇಳಮ್ಮ ಕತ್ತಲೊಳಗೆ ಕಳ್ಳತನದಿಂದೋಡಾಡುತ ಕಟ್ಟಿದ ಪಂಜಿನಂತ್ಹೊಳೆವೊ ಕೇಳಮ್ಮ 2 ಕಟ್ಟಿದ ನೆಲವಿನೊಳ್ ಮಕ್ಕಳ ಮಲಗಿಸಿ ಎಷ್ಟು ಘಾತಕÀ ತಾ ಕೈಬಿಟ್ಟ ನೋಡಮ್ಮ ತೊಟ್ಟಿಲೊಳಗೆ ಕೆನೆಮೊಸರಿನ ಚಟ್ಟಿಗೆ ಇಟ್ಟು ತೂಗುತ ಮೆಲ್ಲುವನು ಕೇಳಮ್ಮ ಕಟ್ಟಿದ್ದಾಕಳ ಕಣ್ಣಿ ಬಿಚ್ಚಿ ಮೊಲೆಗೆ ಬಾಯ್ಹಚ್ಚಿ ಕ್ಷೀರವ ಸುರಿದುಂಬುವನಮ್ಮ 3 ತೋಳ ಬಾಪುರಿ ವಂಕಿ ತೋಡ್ಯ ಬಿಂದಲಿ ಚಕ್ರ- ಪಾಣಿಯಲ್ಲೊ ್ಹಳೆವೊ ಮುದ್ರಿಕೆಯ ನೋಡಮ್ಮ ಆಣಿ ಮುತ್ತಿನ ಸರ ಅರಳೆಲೆ ಪದಕವು ಕಾಲ ಕಿಂಕಿಣಿ ನಾದಗಳ ಕೇಳಮ್ಮ ತೋರ ಮುತ್ತುಗಳೋಣಿಯಲುದುರುತ ಒ- ಯ್ಯಾರದೊಲಪಿನ ಚೆದುರ್ಯಾರು ಪೇಳಮ್ಮ4 ಮನ್ಮಥನಿಗೆ ಮಿಗಿಲಾದ ಸ್ವರೂಪಲಾವಣ್ಯನೆ ನೀಲದ ವರ್ಣ ಕೇಳಮ್ಮ ಹುಣ್ಣಿಮೆ ಚಂದ್ರಮನ್ನ ಸೋಲಿಸೋಮುಖ ಇನ್ನು ಇವನÀ ಸೌಂದರ್ಯ ನೋಡಮ್ಮ ಹೆಣ್ಣು ಮಕ್ಕಳ ಸೆರಗನ್ನು ಕೈಯ್ಯಲಿ ಸುತ್ತಿ ಬೆನ್ನು ಬೆನ್ಹತ್ತಿ ತಾ ತಿರುಗುವನಮ್ಮ 5 ಚೀನಿ ಅಂಗಿಯ ಮ್ಯಾಲೆ ಚಿತ್ರದ ನಡುಕಟ್ಟಿ ಜಾರ ಜರದ ಛಾದರವ ನೋಡಮ್ಮ ಸೋಗೆ ನವಿಲು ಗಿಳಿ ಕೋಗಿಲೆ ಸ್ವರದಂತೆ ವೇಣು ಕೊಳಲ ಗಾಯನವ ಕೇಳಮ್ಮ ಮೇಘಮಂಡಲ ತಲೆತಾಕುವ ಹರಿಯದೆ ತಾ ಜಿಗಿದಾಡೋನಂಗಳದಿ ಕೇಳಮ್ಮ 6 ಎಷ್ಟು ಹೇಳಿದರೀ ಮಾತು ಮನಕೆ ನಿಜ ಹುಟ್ಟವಲ್ಲದೇನೀಗ ಬಾರೆ ಗೋಪಮ್ಮ ಬಿಟ್ಟು ಕೆಲಸ ಭೀಮೇಶಕೃಷ್ಣಗೆ ಬುದ್ಧಿ ಎಷ್ಟು ಹೇಳುವಿ ಮುಂದ್ಹೇಳಲೇಕಮ್ಮ ಸಿಟ್ಟು ಮಾಡುವರೇನೆ ಸಿರಿಪತಿ ಆಟ ನಿನ್ನ ದೃಷ್ಟಿಂದ ನೋಡೆ ನಿಜಹುಟ್ಟುವುದಮ್ಮ7
--------------
ಹರಪನಹಳ್ಳಿಭೀಮವ್ವ
ದೂರು ಯಾತಕ್ಕೆ ತರಲ್ಯಮ್ಮಾ | ಯಶೋದಮ್ಮ || ವಾರಿಜ ಮುಖಿಯರು ಶೇರದೆ ಹೇಳ್ವರು ಪ ವಂದು ದಿನ ನಾ ಮನಿಯ ಬಿಟ್ಟು ಹೋಗುವೆನೆಯಲ್ಲ್ಯೊ | ಬಂದು ಹೇಳುವರೆಲ್ಲ ಕೇಳು ಗೋಕುಲದೊಳು | ಸಂದು ಸಂದನೆ ತಿರುಗಿ ಮಂದಗಮನಿಯರು | ಹೊಂದಿ ಒದಗಿ ಬಾಯಂದದ್ದು ನಿಜಮಾತು 1 ಯನ್ನ ಮಾತನ್ನು ಸುಳ್ಳಾದರೆ | ಗೋವಳ್ಹಾರೇ ಮನ್ನಿಸಿ ಬದಿಗೆ ಕರೆದುಕೇಳು | ಅವರಿಗೆ ಹೇಳು ಕನ್ಯೆಯರೆಲ್ಲಾ ಬಂದು ಬೆಣ್ಣೆಗಳ್ಳನೆಂದು ಕಣ್ಣಿಲಿ ನೋಡದೆಯನ್ನ ದಂಡಿಸುವರೇ2 ಪರರ ಮನೆಯೊಳಗಿರುವ ಮಡಿಕೆ ಪಾತ್ರೆ ನಿನಗ್ಯಾಕೆ | ಸ್ಥಿರ ಕ್ಷೀರಾಂ ಬುಧಿಶಯನನಾಗಿ | ಇರವದು ಆಗಿ | ಪುರದ ಸ್ತ್ರೀಯರು ಯಲ್ಲ ದೊರೆ ಹೆನ್ನೆ ವಿಠಲನೆಂದು ಮರೆತು ಹೇಳಲಿ ಬಹು ಸ್ಥಿರವಾಗಿ ಮಾಡುವರೇನೆ 3
--------------
ಹೆನ್ನೆರಂಗದಾಸರು
ದೂರ ಮಾಡುವರೇನೆ ರಂಗಯ್ಯನ ಪದೂರು ಮಾಡುವರೇನೆ | ಚೋರನೆಂದಿವನನ್ನು |ಮೂರು ಲೋಕವನು ತಾ | ಪಾಡುವ ರಂಗಯ್ಯನ 1ನಂದ ಗೋಕುಲದಲ್ಲಿ ಕಂದರೊಡಗೂಡಿ ಆ-|ನಂದದಿಂದಲಾಡುವ | ಕಂದ ರಂಗಯ್ಯನ 2ಗೊಲ್ಲರ ಮನೆಯಲ್ಲಿ | ಕಳ್ಳತನದಲಿ ಪೊಕ್ಕು |ಗಲ್ಲವನು ಪಿಡಿದು ಮುದ್ದಿಡುವ ರಂಗಯ್ಯನೆಂದು 3ಕಾಮಾಂಧಕಾರದಲಿ | ಕಳವಳಗೊಳಿಸಿದ |ಶ್ಯಾಮಸುಂದರ ರಂಗ | ಸೋಲಿಸಿ ಪೋದನೆಂದು 4ಮಂಗಲ ಮೂರುತಿ ಪು | ರಂದರವಿಠಲನು |ರಂಗ ಮಂಚದಲಿ ನೆರೆದು | ಹಿಂಗಿ ಪೋದನೆಂದು 5
--------------
ಪುರಂದರದಾಸರು