ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಣಲೊಲ್ಲೆ ಯಾಕೋ ಅಣ್ಣಯ್ಯ ಉಣದೆ ಹೀಗೇಕೆ ಹಟ ಮಾಡುವಯ್ಯ ಪ ಉಣದಿರೆ ನನ್ನೆದೆ ತಳಮಳಗೊಳುವುದು ತಣಿಸೋ ಮನವನು ಉಂಡು ಕಂದಯ್ಯ ಅ.ಪ ನೀನನುದಿನವೂ ಉಣದಿದ್ದರೂ ಹೀಗೆ ಏನೂ ಹಸಿವಿಲ್ಲದೆ ಆಟವಾಡುವೆ ಹೇಗೆ ಏನಿದರ ಗುಟ್ಟು ಎಲ್ಲೂಟ ಮಾಡುವೆ ನಾನೇನ ಮಾಡಿಹೆನು ಉಣದಿರಲು ಹೀಗೆ 1 ಗೋಪಾಲಿಕೆಯರಲಿ ಆಕಳ ಹಾಲುಂಡು ಗೋಪಾಲಕರ ಕೂಡೆ ಬೆಣ್ಣೆಯ ಕದ್ದುಂಡು ಪಾಪಿಷ್ಠ ಬಲನೊಡನೆ ಮಣ್ಣನಾದರು ತಿಂದು ಅಪಾಟಿ ಹೊಟ್ಟೆಯ ತುಂಬಿಕೊಂಡಿಹೆಯೇನೊ 2 ಪೂತನಿಯ ಮೊಲೆಯುಂಡು ಜಡಗಟ್ಟಿತೊ ಪ್ರೀತಿಯಲಿ ಆ ಗೋಪಿಯರ ದಿಟ್ಟಿ ತಾಕಿತೊ ಆತುಕೊಂಡಾವ ಗೋಪಿಯು ಕೊಟ್ಟಳೆದೆಹಾಲ ಸೋತು ಹೋದೆನಯ್ಯ ನಿನಗುಣಿಸಲಾಗದೆ 3 ಅಣ್ಣಯ್ಯ ಕುಚೇಲ ನೀಡಿದ ಅವಲಕ್ಕಿಯುಂಡು ಕೃಷ್ಣೆ ಕೊಟ್ಟುಳಿದ ಅಗುಳನ್ನವುಂಡು ಚಿಣ್ಣ ಕಡುಭಕ್ತ ವಿದುರನ ಮನೆಯಲಿ ಹಾಲುಂಡು ಸಣ್ಣ ಹೊಟ್ಟೆ ತುಂಬಿತೆ ಕಂದ ಉಣಲೊಲ್ಲೆ ಯಾಕೊ4 ವಸುಧೆಯೊಳಗೆ ದಾಸರು ನಿನ್ನ ಪೂಜಿಸೆ ಏಸು ಪರಿಯಲಿ ನೈವೇದ್ಯ ನೀಡುವರೊ ಬಿಸಿಬಿಸಿ ಪರಮಾನ್ನ ಸಣ್ಣಕ್ಕಿಯೋಗರವು ಹಸಿದ ನಿನಗೆ ಬಲು ಇಷ್ಟವಾಯಿತೆ ಕೃಷ್ಣ 5 ವರಮಹಾಋಷಿಗಳ ವೇದ ಮಂತ್ರಗಳ ಪರಮ ಭಾಗವತರ ಪಲ್ಲಾಂಡುಗಳು ವರಜಾಜಿಪುರಿವಾಸ ನಿನ್ನ ಸೇವಿಸುತಿರಲು ನಿರುತ ಸಂತುಷ್ಟ ನೀ ಚೆನ್ನಕೇಶವನೆ 6
--------------
ನಾರಾಯಣಶರ್ಮರು
ತಿರುಪತಿ ವೆಂಕಟೇಶ ಕಂಡೆನೋ ನಿನ್ನ ವೆಂಕಟನೇ ಸ್ವಪ್ನೆಪುಂಡರೀಕಾಕ್ಷ ಸಂಪೂರ್ಣ ಸದ್ಗುಣನೇ ಪ ಗಿರಿಯ ಮೇಲ್ಹತ್ತಿ ಬಂದಿಹೆನು ನಿನ್ನಶರಣರೊಳಗೆ ಬಂದು ನುತಿಯ ಮಾಡಿಹೆನುಪರದೇಶ ಜನರ ನೋಡಿದೆನು ಅವರ್ಹೊರಗೆ ಪೋಗಲು ನಾನ್ಹೊರಗೆ ಬಂದಿಹೆನು1 ಮತ್ತು ನಾ ಒಳಗೆ ಬಂದಿಹೆನು ತೆರದುತ್ತಮ ದ್ವಾರಗಳನ್ನೇ ನೋಡಿದೆನುಚಿತ್ರ ವಾಲಗರ ಕೇಳಿದೆನು ಪೋಗ-ಲುಕ್ತಿ ಪೇಳುತಲೆ ಸನ್ನಿಧಿಲೆ ಬಂದಿಹೆನು 2 ಕಮಲ ನೋಡುತಲಿಇಂದಿರೇಶನೆ ನಯನದಲಿ ಪೊಕ್ಕೆ-ನಿಂದು ಸಂತೋಷ ನಿರ್ಭರ ಶರಧಿಯಲಿ 3
--------------
ಇಂದಿರೇಶರು
ನೀನೆ ನುಡಿಸಿದಂತೆ ನುಡಿಯುವೆನು ಮಿಕ್ಕ ಜ್ಞಾನವಿಲ್ಲ ಎನಗೇನೇನು ಪ ನೀನೆ ಜಗತ್ರಾಣ ಶ್ರೀಹರಿಯೆಂಬುದೊಂದೆ ಖೂನಮಾಡಿ ಕೊಂಡಾಡುವೆನು ಅ.ಪ ನೀ ನಡೆಸಲು ನಾ ನಡೆಯುವೆನು ಹರಿ ನೀನಾಡಿಸಲು ನಾನಾಡುವೆನು ನೀನೀಡದಿರೆ ಬಲು ಮಿಡುಕುತ ಬಳಲುವೆ ನೀ ನುಣಿಸಲು ಉಂಡು ನಲಿವೆ ಪುಂಡನಾಗಿ 1 ಕಡುಪ್ರೇಮದಿ ಚರಾಚರಗಳನು ಕಾಯ್ವಿ ಪೊಡವಿ ಈರೇಳುವ್ಯಾಪಕ ನೀನು ಕೊಡುವ ಕರ್ತ ನೀನೆ ಮೂಲೋಕಕೆಂಬ ನುಡಿ ದೃಢದಿ ನಂಬಿ ಗಟ್ಟಿಮಾಡಿಹೆನು 2 ಹೋಮ ಯಜ್ಞ ಯಾಗ ತಿಳಿಯೆ ನಾನು ಮತ್ತು ನೇಮನಿತ್ಯದ ಗುರುತರಿಯೆನು ಭೂಮಿಗಧಿಕ ಮಮಸ್ವಾಮಿ ಶ್ರೀ ರಾಮನ ಪೂರ್ಣನಂಬಿಕೊಂಡಿಹೆನು 3
--------------
ರಾಮದಾಸರು
ದೂತ ಸಂವಾದ ದೇವಿಯೊಡನಾದುದು ಪ್ರೀತಿಯಲಿ ಕೇಳಿರೆಲ್ಲದಾತೆ ಶುಂಭನ ಯುದ್ಧಕೆತಾಯೆಂದಟ್ಟಿ ಮಾತ ಮುಗಿಸಿದಳಲ್ಲಪತೆರೆಕಣ್ಣ ಮುಚ್ಚಿದ್ದಿ ಯಾಕೆ ಕಾಡೊಳಗಿರುವೆ ಕೇಳೆಲೆ ಮಹಾದೇವಿಪುರುಷರು ನಿನಗಾರು ಓರ್ವಳೆ ಮಾತಾಡು ಕೇಳೆಲೆ ಮಹಾದೇವಿಕರೆಯಲು ಬಂದೆ ಹಿಮಾಚಲಕೆ ನಿನ್ನ ಕೇಳೆಲೆ ಮಹಾದೇವಿಅರಸ ಶುಂಭನ ದೂತ ಸುಗ್ರೀವ ನಾನೀಗ ಕೇಳೆಲೆ ಮಹಾದೇವಿ1ಕಣ್ಣ ತೆರೆದು ನುಡಿದಳು ದೇವಿ ಖಳನಿಗೆ ಕೇಳೆಲೋ ಸುಗ್ರೀವನನ್ನಗೊಡವೆಏನು ನುಡಿಯಿಂದ ಕೆಲಸವೇನು ಕೇಳೆಲೋ ಸುಗ್ರೀವನಿನ್ನಧಿಕಾರವದೇನು ಶುಂಭನಾರು ನೀನಾರು ಕೇಳೆಲೊ ಸುಗ್ರೀವನನ್ನಗೊಡವೆಏನು ನುಡಿಯಿಂದ ಕೆಲಸವೇನು ಕೇಳೆಲೋ ಸುಗ್ರೀವ2ನಂಬೆನ್ನ ಮಾತನು ಕಪಟವೇನಿಲ್ಲ ಕೇಳೆಲೆ ಮಹಾದೇವಿಶುಂಭನ ಭಾಗ್ಯ ಹೇಳಲಿಕಳವಲ್ಲ ಕೇಳೆಲೆ ಮಹಾದೇವಿತುಂಬಿವೆ ಮನೆಯೊಳು ದಿವ್ಯ ರತ್ನವು ಕೇಳೆಲೆ ಮಹಾದೇವಿಶುಂಭಗೆ ನೀನು ಕಡೆರತ್ನ ದೊರಕಲು ಕೇಳೆಲೆ ಮಹಾದೇವಿ3ಕರುಣದಿ ಕಪಟವಿಲ್ಲದಲೆ ನೀನು ಕೇಳ್ವೊಡೆ ಕೇಳೆಲೋ ಸುಗ್ರೀವಇರಬಾರದು ಸುಮ್ಮಗಿದ್ದುದನಾಡಿವೆವು ಕೇಳೆಲೋ ಸುಗ್ರೀವಪುರುಷರು ಇಂದಿನವರೆಗಿಲ್ಲ ನಾ ಸ್ವತಂತ್ರ ಕೇಳೆಲೋ ಸುಗ್ರೀವಪುರುಷರಿಗೋಸ್ಕರ ನಾನು ತಪವನು ಮಾಡುವೆ ಕೇಳೆಲೋ ಸುಗ್ರೀವ4ಶುಂಭನು ಶೀಘ್ರದಿ ಕರೆತಾರೆಂದನು ನಿನ್ನ ಕೇಳೆಲೆ ಮಹಾದೇವಿಶುಂಭನ ಭಾಗ್ಯ ದೊರಕಿದಡೆ ನೀ ಕೃತಾರ್ಥೆ ಕೇಳೆಲೆ ಮಹಾದೇವಿಶುಂಭಗೆ ನಿನಗೆ ಸಕ್ಕರೆ ಹಾಲು ಬೆರೆತಂತೆ ಕೇಳೆಲೆ ಮಹಾದೇವಿಶುಂಭಗೆ ಚಾಕರ ನಿನಗೆ ಚಾಕರ ನಾನು ಕೇಳೆಲೆ ಮಹಾದೇವಿ5ಮಾಡಬಾರದ ಪ್ರತಿಜೆÕಯ ಮಾಡಿಹೆನು ಕೇಳೆಲೋ ಸುಗ್ರೀವಆಡಲಿ ಏನ ಅದೃಷ್ಟಹೀನೆಯು ಕಂಡ್ಯಾ ಕೇಳೆಲೋ ಸುಗ್ರೀವಖಾಡಾ ಖಾಡಿಯಲಿ ಜಯಿಸಿದವನೆ ಭರ್ತನೆಂದೆನೆ ಕೇಳೆಲೋ ಸುಗ್ರೀವಕೂಡಿ ಬರುವೆ ಮಾಡಿದ ಭಾಷೆಯ ಹುಸಿಯದೆ ಕೇಳೆಲೋ ಸುಗ್ರೀವ6ಕರೆಯಲು ಬಿಗಿಯಲು ಬೇಡವೆ ನೀನೀಗ ಕೇಳೆಲೆ ಮಹಾದೇವಿಥರಥರ ಸಾಲು ಸಾಲಿನ ಛತ್ರಿ ನಿನ್ನವು ಕೇಳೆಲೆ ಮಹಾದೇವಿಇರುವನು ನೀ ಹೇಳಿದಂತ ಶುಂಭನು ಕೇಳೆಲೆ ಮಹಾದೇವಿದೊರೆವುದು ನಿನಗೆ ತ್ರೈಭುವನದರಸುತನ ಕೇಳೆಲೆ ಮಹಾದೇವಿ7ಕಂಡುದಿಲ್ಲವೋ ಈವರೆಗೆನ್ನ ಜಯಿಸಿದವರನ್ನು ಕೇಳೆಲೋ ಸುಗ್ರೀವದಿಂಡುಗಡೆದರು ಎನ್ನೆದುರು ನಿಂತವರೆಲ್ಲ ಕೇಳೆಲೋ ಸುಗ್ರೀವಗಂಡನ ಪಡೆದಿರೆಶುಂಭಜಯಿಸುವನೆನ್ನ ಕೇಳೆಲೋ ಸುಗ್ರೀವಗಂಡನಾವನಿಲ್ಲದಿರೆ ಏನ ಮಾಡುವೆ ಕೇಳೆಲೋ ಸುಗ್ರೀವ8ಚಾರ್ವಾಕರ ಮಾತಾಡಲು ಬೇಡ ಕೇಳೆಲೆ ಮಹಾದೇವಿಬರ್ವಳು ನಿನ್ನ ಮಾತಿಗೆಶುಂಭಬಹನೇ ಕೇಳೆಲೆ ಮಹಾದೇವಿಉರ್ವಿಗೆ ಕರ್ತನ ಎದುರಿಗೆ ನೀ ನಿಲ್ಲುವೆಯ ಕೇಳೆಲೆ ಮಹಾದೇವಿಗರ್ವವ ಮಾಡಲು ಮುಂದಲೆ ಹಿಡಿದೊಯ್ವರು ಕೇಳೆಲೆ ಮಹಾದೇವಿ9ಎನ್ನ ಪ್ರಾರಬ್ಧವು ಇದ್ದಂತೆ ಆಗುವುದು ಕೇಳೆಲೋ ಸುಗ್ರೀವನಿನ್ನ ಮೇಲೇನು ಮಾತಿಲ್ಲವೋ ಕೇಳೆಲೋ ಸುಗ್ರೀವಎನಗೆ ಹಿತಕಾರಿ ನೀನು ಅಹಿತ ನಾನೇ ಕೇಳೆಲೋ ಸುಗ್ರೀವಇನ್ನು ಮಾತಾಡಬೇಡವೋ ಕರೆತಾನಡಿ ಕೇಳೆಲೋ ಸುಗ್ರೀವ10ಇಂತು ವಿಳಾಸ ಮಾತನಾಡಿಯೆ ಖಳನನು ಕಳುಹಿದಳು ಪರಾಂಬೆಎಂತು ಹೇಳ್ವನೋ ಶುಂಭನಾವಾಗ ಬರುವನೋ ಎನುತಲಿ ಜಗದಂಬೆಚಿಂತೆ ಹರಿಪೆ ಸುರರನು ಶುಂಭನನುಕಟ್ಟಿಎನುತಲಿ ಸರ್ವಾಂಬಚಿಂತಯಕ ತಾನಾದ ಚಿದಾನಂದ ಕರುಣೆಯು ಬಗಳಾಂಬ11
--------------
ಚಿದಾನಂದ ಅವಧೂತರು