ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧನವಗಳಿಸಬೇಕೆಂಥಾದು | ಈ | ಜನರಿಗೆ ಕಾಣಿಸದಂಥಾದು ಪ ಹರಿಹರ ಬ್ರಹ್ಮಾದಿಗಳೆಲ್ಲ | ಹೌದಹುದಹುದೆಂಬಂಥಾದು ಅ.ಪ ಕೊಟ್ಟರೆ ಹತ್ತಿರದಂಥಾದು | ತನ್ನ ಬಿಟ್ಟು ಹೊರ ಹೋಗದಂಥಾದು || ಬಿಚ್ಚಿದ ಗಂಟನು ಬಯಲೊಳಗಿಟ್ಟರೆ | ಮುಟ್ಟಬಾರದಾರಿಂಥಾದು 1 ಕರ್ಮವು ಬಾರದಂಥಾದು | ಜನರೋರ್ವರು ತೋರಿಸದಂಥಾದು | ನಿರ್ಮಲವಾದ ಮನಸಿಗೆ ದಾನ | ಧರ್ಮವ ಮಾಡಿಸುವಂಥಾದು 2 ಮರವನು ತಾರದಂಥಾದು | ನಿಜದರಿವಿನೊಳಗೆ ಇರುವಂಥಾದು |ಗುರು ಭವತಾರಕ ಭಜಕರ ಕಣ್ಣಿಗೆ | ತೊರಹಿಲ್ಲದೆ ತುಂಬಿದಂಥಾದು 3
--------------
ಭಾವತರಕರು
ಪರಿಪಾಲಿಸುವುದು ಎಮ್ಮನು ಪರಮಾತ್ಮನ ರಾಣಿ ಕರುಣಾಕರನ ಪಾದಸ್ಮರಣೆಯನೆ ಕೊಟ್ಟು ಪ ಅಮರೇಶ ವಂದ್ಯಳೆ ಕಮಲಾಲಯೆ ನೀಬಂದು ಶ್ರಮವಿಲ್ಲದೆಯನ್ನೆಯ ಮಮತೆಯನು ಬಿಡಿಸು 1 ವಸುದೇವಸುತನ ರಾಣಿ ಅಸುರ ಸಂಹಾರಳೇ ನಿನ್ನ ವಶವಾದ ಮೇಲೆ ಅಂಭ್ರಣಿಯೆ ನಸುನಗುತ ಈಗ 2 ಮಂದರೋದ್ಧಾರಎನ್ನ ಸಂದುಸಂದಲಿ ಕಾರ್ಯವ ನಿಂದುಮಾಡಿಸುವಂಥದನ್ನು ಚಂದದೀಬೋಧವಕೊಟ್ಟು 3 ಮಂಗಳಾಂಗಿಯೆ ನಿನ್ನ ಮುಂಗಾಣದೆಸೊರಗಿದೆ ಅಂಗಜಪಿತನ ಜಾಯೇ ಭಂಗಪಡಿಸದೆಬೇಗಾ 4 ಪದ್ಮಸಂಭವನಮಾತೆ ಮುದ್ದುಮೋಹನವಿಠಲ ಪದ ಪದ್ಮಗಳನೀನೊಲಿದು ಹೃತ್ಪದ್ಮದಲಿ ಕಾಣಿಸುತ 5
--------------
ಮುದ್ದುಮೋಹನವಿಠಲದಾಸರು
ವಿಶ್ವ 50 ವಿಶ್ವ ರಮೇಶ | ಪಾಲಿಸೆನ್ನನು ದಕ್ಷಿಣಾಕ್ಷಿನಿವಾಸ | ರೂಪಾಂತರದಿ ನೀ | ವಾಮನಯನದಿ ಕಾಶ | ಶರಣು ಶರಣು | ಸರ್ವೇಶ | ಜಾಗೃತ ಕಾಲದಿ ಸರ್ವ ವ್ಯಾಪಾರಗಳ ಮಾಡಿಸುವಂಥ ಸೌಭಾಗ್ಯ ದಾತನೇ ಪ ಯಾಜ್ಯ ಸ್ವರೂಪದಿಂದ ನೀ ಯರ್ಜು ನಾಮ | ಉತ್ಥಾಪಕೊತ್ತ ನಾಮ ಸರ್ವಪಾಪೋಜ್ಜಿತ ಉನ್ನಾಮನೇ ದೀಪ್ತ ಇಂಧನ ವಾಮ ಮಂಗಳ | ಸರ್ವ ವೇದಗಳಿಂದ ಸರ್ವದಾ ವಾಣಿ ಪ್ರಾಣ ಸಂಸ್ತುತ್ಯ ಶ್ರೀಶನೇ ದಿವ್ಯದೃಷ್ಟಿ ಗೋಚರ ವಿರಾಜನೇ ಶ್ರೀ ರಮಾ ಸಮೇತನಾಗಿಹ ಅಮೃತ ಜಯ ಜಯ 1 ಭಯ ವಿವರ್ಜಿತ ಅಭಯ | ಗುಣಪೂರ್ಣ ಬ್ರಹ್ಮ ಪುರುಷ ಸರ್ವ ಉದಕಾದ್ಯ ಅಖಿಳವಸ್ತು ಅಸಂಗವಾಗಿವೆ ಎನ್ನ ಕಂಣ್ಗಳು | ಸರ್ವದಾ ಸೌಂದರ್ಯ ರೂಪ ಶ್ರೀವಾಮನನೆ ಎನ್ನ ಎಡದ ಕಣ್ಣಲಿ ಸರ್ವ ನಿಜ ಸದ್ಭÀ್ಭಕ್ತಭಾಮನ ದಕ್ಷಿಣಾಕ್ಷಿಗತ ನಿಯಾಮಕ | 2 ವಿಶ್ವ ಶರಣು ಶುಭಾಂಗ | ಎರಡು ಪಾದವು ನಾಲ್ಕು ಹಸ್ತವು ಏಕ | ಕುಂಡಾದಂಡ ಹೀಗೆ ಜ್ಞಾನ ಸುಖ ಸಪ್ತಾಂಗ ಪಾಹಿಮಾಂ ಮಂಗಳಾಂಗ ಹತ್ತು ಮೇಲೊಂಬತ್ತು ಮುಖಗಳು ಮಧ್ಯ ಗಜಮುಖ ಮಂಗಳಪ್ರದ | ಮೋದಮಯ ನರಮುಖ ಒಂಬತ್ತು ಬಲದ ಪಾಶ್ರ್ವದಿ ಹಾಗೂ ಎಡದಿ | ವಿಶ್ವ ಚಕ್ಷುಸ | ಪದ್ಮಜನ ಪಿತ ಶ್ರೀ ಪ್ರಸನ್ನ ಶ್ರೀನಿವಾಸ ವಿಶ್ವನೇ ಶರಣು ಸಂತತ | 3
--------------
ಪ್ರಸನ್ನ ಶ್ರೀನಿವಾಸದಾಸರು