ಕರುಣಿಸು ಪ್ರಭುತಂದೆ ತರಳಂಗೆ ದಯವ ಪ
ಹರಿ ನೀನೆ ಅವತರಿಸೀಪರಿಭವಶರಧಿಯ
ಪರಿಹಾರಗೊಳಿಸುವ ಪರಮಪಾವನರೂಪ 1
ಅರಿವಿಟ್ಟು ಭಜಿಸುವೆ ಮರೆಯದೆ ಮಗನ್ವಚನ
ಕರುಣದಿ ಆಲಿಸಿ ವರದಹಸ್ತವ ಶಿರಕೆ 2
ಹಿಂಸೆಬಿಡಿಸು ಮಹ ಸಂಸಾರದುರಿಯನ್ನು
ಧ್ವಂಸಗೈಯುವ ಶರಣರಾಂಶದ ಪ್ರಸನ್ನತೆ 3
ದುರಿತ ದೂರೀಕರಿಸಿ ಪರಮಾನಂದದಲಿರುವ
ಸಿರಿ 4
ಮರೆಯ ನಿನ್ನಡಿಯಿನ್ನು ಸರುವೇಶ ಮೊರೆಕೇಳಿ
ಗುರುವಾಗಿ ಶ್ರೀರಾಮ ಸ್ಥಿರಮೋಕ್ಷ ಸಂಪದವ 5