ಹಿಡಿ ಸಾಧು ಸಂತರಾ ಸಂಗೆನ್ನ ಮನವೆ |
ಹಿಡಿ ಸಾಧು ಸಂತರ ಸಂಗಾ |
ಪೊಡವಿಲಿ ಭವಭಯ ಬಿಡಿಸಿ ಮುಕುಂದನ |
ಅಡಿಗಳ ತೋರಿಸಿ ಕಾವುದು ಹಿಡಿಹಿಡಿ ಪ
ಐದು ವರುಷ ಮಗನೈದಿದ ತಪದಲಿ |
ಸಾಧು ಸಂಗನೇ ಹೊರೆಯಿತು |
ಸಾಧಿಸಿ ಗರ್ಭದಲಿರೆ ಸಾಧು ಸಂಗ | ಪ್ರ |
ಲ್ಹಾದನ ಯಚ್ಚರಿಸಿತು |
ಹಾದಿಯೊಳಗ ರಾಹುಗಳ ರಾಯಾಗಾಗಲು |
ಸಾಧು ಸಂಗುದ್ಧರಿಸಿತು |
ಮೇದಿನಿಪತಿ ಪರೀಕ್ಷಿತಗೇಳು ದಿನದಲ್ಲಿ |
ಬೋಧಿಸಿ ಸದ್ಗತಿ ದೋರಿತು ಹಿಡಿಹಿಡಿ 1
ವನಜಭವನ ಲೋಕದಲಿ ಸಾಧು ಸಂಗವು |
ಸನಕಾದಿಕರ ಹೊರೆಯಿತು |
ವನದಲಿ ಯದುರಾಯಗಾಗಲು ಸತ್ಸಂಗ |
ಅನುಭವ ಸುಖ ದೊರೆಯಿತು |
ವಿನಯದಿ ಸತ್ಸಂಗ ದೇಹೂತಿ ಮೊದಲಾದ |
ಮುನಿಜನರುದ್ಧರಿಸಿತು |
ರಣದಲ್ಲಿ ಅರ್ಜುನಗಾಗಲು ಸತ್ಸಂಗ |
ಅನುಮಾನ ನೀಗಿಸಿ ಕಾಯಿತು ಹಿಡಿಹಿಡಿ 2
ಅಂದಿಗೆಂದಿಗೆ ಸಿದ್ಧ ಸಾಧಕರೆಲ್ಲಾ |
ನಂದನ ಸುಖ ಬಿಡಿಸಿತು |
ಹಿಂದಿನ ಕಥೆಗಳಿರತಿರಲಿನ್ನು ಸತ್ಸಂಗ |
ಇಂದೆನ್ನ ಧನ್ಯಗೈಸಿತು |
ಪಾದ ಪದುಮಸಂಗ |
ನಂದನುದ್ಧರಿಸಿತು |
ಯಂದೆಂದಿಗಗಲದೆ ಮುಕ್ತಿಗೆ ಹೊಣೆಯಾಗಿ |
ಕುಂದದಾ ಸುಖಕೈಯ್ಯ ಗೊಟ್ಟಿತು ಹಿಡಿಹಿಡಿ 3