ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಮಗನೇನೇ ನಂದಗೋಪರಾಣಿ |ಇನ್ನು ಇಂಥ ಚಪಲ ಚಿಕ್ಕವನ ಕಾಣೆ ಪ ಗೊಲ್ಲರಿಗೆ ತಕ್ಕ ತನಯನಿವನಲ್ಲ |ಎಲ್ಲೆಲ್ಲಿಲ್ಲದಂಥ ನಡೆನುಡಿಯ ಬಲ್ಲ 1 ಭಂಗ ಮಳೆ ನಮ್ಮ |ನಾವಿಲ್ಲಿಹುದಿನ್ನು ನಿತ್ಯಲ್ಲ ಕಾಣಮ್ಮ 2 ಕಣ್ಣಲೆ ಎಲ್ಲರ ಮನವ ಕದ್ದು ಕದಡುವನು |ಕಣ್ಣಲಿಳ್ಳೀ ಕಟ್ಟಿಸಿ ಮೊಗವನು ಗಿರುವವನು 3 ದರ ದೂರಾಗಿಹನು 4 ನಕ್ಕು ಮುದ್ದಿಸಿ ನಮ್ಮ ಸೊಕ್ಕು ತಗ್ಗಿಸುವನು |ರುಕ್ಮದಂತೆ ನಾನಾಕಾರ ಧರಿಸುವವನು 5
--------------
ರುಕ್ಮಾಂಗದರು
ನಿನ್ನ ಮಗನೇನೇ ಗೋಪಿ-ಗೋಪಮ್ಮ |ನಿನ್ನ ಮಗನೇನೆ ಗೋಪಿ? ಪಚೆನ್ನಾರ ಚೆಲುವ ಉಡುಪಿಯ ಕೃಷ್ಣ ಬಾಲ |ನಿನ್ನ ಮಗನೇನೆ ಗೋಪಿ? ಅ.ಪಕಟವಾಯ ಬೆಣ್ಣೆ ಕಾಡಿಗೆಗಣ್ಣುಕಟಿಸೂತ್ರ|ಪಟವಾಳಿಕೈಪಕೊರಳೊಳು ಪದಕ ||ಸಟೆಯಲ್ಲ ಬ್ರಹ್ಮಾಂಢ ಹೃದಯದೊಳಿರುತಿರಲು |ಮಿಟಿಮಿಟಿ ನೋಡುವ ಈ ಮುದ್ದು ಕೃಷ್ಣ 1ಮುಂಗುರುಳ ಮುಂಜೆಡೆ ಬಂಗಾರದರಳೆಲೆ |ರಂಗಮಾಣಿಕದ ಉಂಗುರವಿಟ್ಟು ||ಪೊಂಗೆಜ್ಜೆ ಕಾಲಲಂದುಗೆ ಘಿಲ್ಲುಘಿಲ್ಲೆನುತ |ಅಂಗಳದೊಳಗಾಡುತಿಹ ಮುದ್ದು ಕೃಷ್ಣ 2ಹರಿವ ಹಾವನೆ ಕಂಡು ಹೆಡೆಹಿಡಿದು ಆಡುವ |ಕರುವಾಗಿ ಆಕಳ ಮೊಲೆಯುಣ್ಣುವ ||ಅರಿಯದಾಟವ ಬಲ್ಲ ಅಂತರಂಗದ ಸ್ವಾಮಿ |ಧರೆಯೊಳಧಿಕನಾದ ಪುರಂದರವಿಠಲಯ್ಯ 3
--------------
ಪುರಂದರದಾಸರು