ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಳು ತಾಳೆಲೊ ರಂಗಯ್ಯ- ನೀ |ತಾಳು ತಾಳೆಲೊ ಕೃಷ್ಣಯ್ಯ ಪನಾಳೆ ನೀನು ನಮ್ಮ ಮನೆಗೆ ಬಂದರೆ |ಕಾಲಕಂಬಕೆಕಟ್ಟಿಪೇಳುವೆ ಗೋಪಿಗೆಅ.ಪದೊರೆಗಳ ಮಗನೆಂಬುದಕೇನೊ-ಬಹು |ಧುರದಿ ಮನೆಯ ಪೊಕ್ಕ ಪರಿಯೇನೊ ||ದುರುಳತನದ ಬುದ್ಧಿ ಸರಿಯೇನೊ-ನೀನು |ತಿರಿದು ಬೇಡುಂಡದ್ದು ಮರೆತೆಯೇನೊ 1ಚಿಕ್ಕಮಕ್ಕಳು ಇಲ್ಲವಂತೇನೊ-ನಿನಗೆ |ಕಕ್ಕೂಲಾತಿಯಿಂದಲಿ ನಿನ್ನ ||ಸಿಕ್ಕಿದ ಶ್ರೀಲೋಲ ಹಿಡಿಹಿಡಿಯೆಂದರೆ |ಬಿಕ್ಕಿ ಬಿಕ್ಕಿ ಅತ್ತರೆ ಬಿಡುವರೇನೊ 2ಕಟ್ಟಿದ ತುರುಗಳ ಮೊಲೆಯುಂಡು-ಕರು |ಬಿಟ್ಟ ಕಾರಣವೇನು ಹೇಳೊ ||ಸೃಷ್ಟೀಶ ಪುರಂದರವಿಠಲರಾಯನೆ |ಇಟ್ಟಿಗೆಯ ಮೇಲೆ ಬಂದು ನಿಂತ ಕಾರಣವೇನೊ? 3
--------------
ಪುರಂದರದಾಸರು