ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಚಿದಾತ್ಮಕ ಸತ್ಯ ರುಕ್ಮಿಣಿಯರು ಜೊತ್ತಿಲಾಡುತ ತಮ್ಮ ಪತಿಯ ಉತ್ತಮಗುಣಗಣ ವರ್ಣಿಸುವದಕನುವೃತ್ತರಾಗುತ ವಾದಿಸಿದರು ಪ. ಅಕ್ಕ ಕೇಳರಿಗಳ ವಶರಾಗಿ ಸೆರೆಯೊಳು ಸಿಕ್ಕಿದವರ ಮಗನಿವನು ಚಿಕ್ಕತನದಿ ಗೋವ ವಕ್ಕಲಿಗರು ಬಾಯೊ- ಳಿಕ್ಕಿದನ್ನವನುಂಡದೇನು 1 ನಿರಪರಾಧಿಯನೀತ ತರಿದನೆಂಬಕೀರ್ತಿ ಬರದಂತೆ ಸೆರೆಯೊಳುದಿಸಿದ ಸುರರೆಲ್ಲ ಗೋಪರಾಗಿರುವುದರಿತು ಸೇವ- ಕರಿಗೊಲಿವುತ್ತಲಿ ಮೆರೆವ 2 ಪಾಂಡುಕುಮಾರನ ಭಂಡಿ ಹೊಡಲು ಪಾಲ ನುಂಡನು ವಿದುರನ ಗೃಹದಿ ಗಂಡರಾಳುವ ಗರತೇರ ನೆರೆದವನ ಹೆಂಡರಾಗಿರುವದಿನ್ನೆಂತು 3 ಭಕ್ತವತ್ಸಲನೆಂಬ ಬಿರುದ ತೋರುವದತಿ ಶಕ್ತಿ ಹರಿಗೆ ಶೋಭಾಕರವು ತೊತ್ತಿನ ಮಗನಿಂದಲಿತ್ತ ಕೌರವನೆಂಬ ತತ್ವ ತೋರಿದನಲ್ಲವೇನೆ 4 ಧರೆಯನಾಳದೆ ತನ್ನ ಪರಿವಾರ ಸಹಿತಾಗಿ ಶರಧಿಯೊಳಗೆ ವಾಸವಾಗಿ ದುರುಳ ಜರಾಸಂಧ ಬರುವ ಭೀತಿಯ ತಾಳಿ ಲ್ಲಿರುವ ಕಾರಣವೇನೆ ಜಾಣೆ 5 ಈರೆಂಟು ಮತ್ತೊಂದು ಭಾರಿ ಸಮರದಲ್ಲಿ ಬಾರುಹದ್ರಥನನ್ನು ಗೆಲಿದ ಧೀರನೀತನು ಭಕ್ತ ಮಾರುತಿಯಲಿ ಜಯ ತೋರಲಂತಿರುವನು ಕಾಣೆ 6 ಜಾರ ಚೋರರಿಗೆಲ್ಲ ಗುರು ನಿಮ್ಮ ಪತಿಯೆಂದು ವೂರನಾರಿಯರೆಲ್ಲ ನುಡಿವ ಕ್ರೂರ ಮಾತನು ಕೇಳಲಾರೆನಕ್ಕಯ್ಯ ಯಿ ನ್ಯಾರಿಗೆಂದುತ್ತರ ಕೊಡುವೆ 7 ಘತಿತ ಪಾವನ ಪದ್ಮಜಾತಜನಕ ಶ್ರೀ ಪತಿ ಸುಜನಾನಂದದಾಯಿ ವಿತತ ವಿಡಂಬನ ತೋರುವ ವೆಂಕಟ ಪತಿ ದೋಷಹರ ಶೇಷಶಾಯಿ 8 ಹಸೆಗೆ ಕರೆವ ಮತ್ತು ಆರತಿಯ ಹಾಡುಗಳು
--------------
ತುಪಾಕಿ ವೆಂಕಟರಮಣಾಚಾರ್ಯ
ಮಗನಿಂದೆ ಗತಿಯುಂಟೆ ಜಗದೊಳಗೆನಿಗಮಾರ್ಥ ತತ್ತ್ವವಿಚಾರದಿಂದಲ್ಲದೆ ? ಪ ತ್ರಿಗುಣರಹಿತ ಪರಮಾತ್ಮನ ಧ್ಯಾನದಿಹಗಲಿರುಳು ನಿತ್ಯಾನಂದದಿಂದತೆಗೆದು ಪ್ರಪಂಚವಾಸನೆಯ ಬಿಟ್ಟವರಿಗೆಮಗನಿದ್ದರೇನು ಇಲ್ಲದಿದ್ದರೇನು ?1 ಶೋಣಿತ ಶುಕ್ಲದಿಮಿಳಿತವಾದ ಪಿಂಡ ತನ್ನ ಪೂರ್ವಕರ್ಮದಿಂದನೆಲಕೆ ಬೀಳಲು ಅದು ಸಲಹಿ ರಕ್ಷಿಪುದೆ ? 2 ಪರಮ ದುಷ್ಟನಾಗಿ ಮರೆತು ಸ್ವಧರ್ಮವಗುರು ಹಿರಿಯರ ಸಾಧುಗಳ ನಿಂದಿಸಿಬೆರೆದನ್ಯ ಜಾತಿಯ ಪರನಾರಿಯ ಕೂಡಿಸುರೆ ಕುಡಿದು ಜೂಜಾಡಿ ನರಕಕ್ಕೆ ಬೀಳುವ 3 ಸತ್ಯನೊಬ್ಬ ಮಗ ಶಾಂತನೊಬ್ಬ ಮಗ ದು-ರ್ವೃತ್ತಿ ನಿಗ್ರಹನೊಬ್ಬ ಸಮಚಿತ್ತನೊಬ್ಬನುಉತ್ತಮರೀ ನಾಲ್ಕು ಮಕ್ಕಳಿದ್ದ ಮೇಲೆಹೆತ್ತರೇನು ಇನ್ನು ಹೆರದಿದ್ದರೇನಯ್ಯ ? 4 ಸುತರಿಲ್ಲದವಗೆ ಸದ್ಗತಿ ಇಲ್ಲವೆಂತೆಂಬಕೃತಕ ಶಾಸ್ತ್ರವು ಲೌಕಿಕಭಾವಕೆಕ್ಷಿತಿಯೊಳು ಕಾಗಿನೆಲೆಯಾದಿಕೇಶವ ಜಗ-ತ್ಪತಿಯ ಭಜಿಪಗೆ ಸದ್ಗತಿಯಿರದೆ ಹೋಹುದೆ ? 5
--------------
ಕನಕದಾಸ
ನಮೋ ನಮೋ ಶ್ರೀ ಭೀಮ | ನಮೋ ನಮೋ ಜಿತಕಾಮ |ಕಮಲಾಕ್ಷ ದಾಸ | ಪೊರೆಯಬ್ಜಾಪ್ತ ಭಾಸ ಪಘನಗಿರಿಯೊಳಗೆ ಕುಂತಿ ನಿನ್ನೆತ್ತಿಕೊಂಡಿರಲು |ಧ್ವನಿ ಮಾಡೆ ಹುಲಿ ತಾಯಿ ನಡುಗಿ ಬಿಸುಟೀ ||ತನುವು ನಿನ್ನದು ಸೋಂಕೆ ನಗವೊಡೆದು ಶತಶೃಂಗ- |ವೆನಿಸಿಕೊಂಡಿತೋ ದ್ವಾಪರದಿ ಬಲವಂತ 1ಲೋಕದೊಳು ಮನುಜರಾ ಶಿಶುಗಳಂದದಿ ಬೆಳೆದು |ಪಾಕಶಾಸನಿ ಯಮಜ ಯಮಳರ ಜನನೀ |ಯಾ ಕೂಡಿಕೊಂಡು ಇಭಪುರಿಗೈದಿ ಮೋದದಲಿ |ಸಾಕಿಕೊಂಡೆಯಂಬಿಕೆಯ ಮಗನಿಂದಾ 2ಚಿಕ್ಕವರೊಡನೆ ಚಂಡು ಬುಗುರಿ ಈಸಿರೆ ಓಟ |ತೆಕ್ಕೆ ಮುಷ್ಟಿ ಮರಗಳನೇರುವಲ್ಲಿ ||ಸೊಕ್ಕಿದವನಿವನೆಂದು ಆವಾಗಲೆಲ್ಲರಿಗೆ |ಬಿಕ್ಕಿ ಬಾಯ್ದೆರೆವಂತೆ ಮಾಡಿ ತೋರಿಸಿದೆ 3ಅಹಿತರಾದವರು ನೀರೊಳಗೆ ಕೆಡಹಲು ಎದ್ದೆ |ಅಹಿಗಳಿಂ ಕಟ್ಟಿಸಲು ನೋಯದಿದ್ದೆ ||ಸಹಿಸದಲೇ ವಿಷಹಾಕಿ ಬದುಕಲ್ಕೆ ಹೊರಘಾಕೆ |ಮಹಮೋಸ ಮಾಡೆ ಗೆದ್ದು ಧರಿಯೊಳು ಮೆರೆದೆ 4ಸೋಕಿಯಸುರಿಯ ಮಗನ ಪಡೆದು ಖಲನನು ತರಿದು |ಏಕಚಕ್ರ ನಗರದಲ್ಲಿದ್ದು |ಬೇಕೆಂದು ನೀನಾಗಿ ಪೋಗಿ ಬಕನನು ಕೊಂದೆ |ಈ ಕುಂಭಿಣೀಯೊಳು ನಿನಗಿದಿರಾರು ದೇವಾ 5ಪಾಂಚಾಲಿಯನು ಗಳಿಸೆ ಕೋಪದಿಂ ಬಂದಹರಿ|ವಂಚಕರ ದರ್ಪವ ಭಂಗಿಸಿ ಲೀಲೆಯಿಂ |ಮಿಂಚುವಾ ಗದೆಲಿಹ ನಿಶ್ಚಿಂತ ಬಲವಂತ |ಮುಂಚಿನಜ ಪ್ರಣತ ಸುರಭೂಜ ರವಿತೇಜ 6ಈ ಪರಿಯಿಂದ ಕೆಲಕಾಲವಲ್ಲೆಲ್ಲ |ಕಾಪಾಡಿ ವಜ್ರಿಪ್ರಸ್ಥಕೈ ತಂದು ||ಪಾಪಿ ಜರಿಜನ ಕೊಂದು ರಾಜಸೂಯವ ಮಾಡಿ |ನೀಂ ಪಾಲಿಸಿದೆಯವನಿ ಸದ್ಧರ್ಮದಿಂದ 7ದ್ಯೂತವಾಡಿದ ಸಮಯದಲ್ಲಿ ದ್ರೌಪದಿಯಳನು |ಪಾತಕಿವಸವೆಳೆಯೆ ಕೋಪದಿಂದ ||ಘಾತಿಸುವೆನೆಂದಬ್ಬರಿಸಿ ಪಲ್ಗಡಿದು ಲಕ್ಷ್ಮೀ |ನಾಥನಿಚ್ಛೆಂಗೆ ಈಗೇಂದು ಕೈಮರೆದೇ 8ತಮೋ ಯೋಗ್ಯನಾ ಪಾಪಪೂರ್ಣದಾಹದಕೆ ಬ- |ಹು ಮಿತಿಯಿಂದ ವನವಾಸ ಪತ್ಕರಿಸಿದೆ ||ಸಮರಾಂಗಣದೊಳಿವರ ಹೀಗೆ ಸವರುವೆನೆಂದು |ಸುಮನಸಾರಾಧ್ಯ ಬಾಹುಗಳೆತ್ತಿ ನಡೆದೆ 9ಕಾನನದಿ ಕಿರ್ಮೀರನಂ ಕೊಂದು ಋಷಿಯಿಂದ |ಮಾನವಂ ಕೈಕೊಂಡು ಮತ್ತೆ ಮುಂದೆ ||ಆ ನಗದಿ ಬಹುಕಾಲ ಸೇರಿಕೊಂಡಿದ್ದಂಥ |ದಾನವರ ಮಡುಹಿ ಸೌಗಂಧಿಕವ ತಂದೆ 10ನಿನ್ನೊಳಗೆ ನೀಂ ಲೀಲೆ ಮಾಡಿದ್ಯಾ ಸಮಯದಲಿ |ಚಿನ್ನದೋಪಮ ಪುಷ್ಪವೊಂದು ಬೀಳೆ ||ನಿನ್ನರಸಿಯಿದು ಎನಗೆ ಇಷ್ಟವೆನಲವಳ ನುಡಿ |ಮನ್ನಿಸುತೆ ಪೋಗಿ ಮಣಿಮಂತನೊಂಚಿಸಿದೆ 11ದ್ವೈತ ವನದೊಳು ಬಂದುಮೃಗಬೇಟೆಯಾಡೆ ಪುರು |ಹೂತ ಪದವಾಳ್ದವನು ಮೆಯ್ಯ ಸುತ್ತಲ್ ||ನೀತವಕಬೀಳದೆ ಅವನ ಪುನೀತನ ಮಾಡಿ |ಖ್ಯಾತಿ ತಂದಿತ್ತೆಯಂತಕನ ಸುತಗಂದು 12ಮತ್ಸ್ಯ ದೇಶಾಧಿಪನ ಮನೆಯಲ್ಲಿ ಇದ್ದಾಗ |ಹೆಚ್ಚಿನಾ ಬಲದ ಮಲ್ಲನ ಕೆಡಹಿದೆ ||ಅಚ್ಚ ಪಾಪಾತ್ಮ ಕೀಚಕನನ್ವಯ ತಂದೆ |ಅಚ್ಯುತನ ನಿಜದಾಸ ಭಕ್ತರಘನಾಶ 13ಎಂಟೈದು ವರುಷ ಈ ರೀತಿಯಲಿ ಕಳೆದು ವೈ- |ಕುಂಠಪತಿ ದಯದಿಂದ ಉಪಪ್ಲಾವ್ಯದಿ ||ಗಂಟು ಹಾಕಿದಿ ದುರಾತ್ಮನ ಕೂಡ ಸಂಗರಕೆ |ಕಂಠೀರವರವದಿಂ ತಲೆದೂಗಿ ನಡೆದೆ 14ಮುತ್ತೆ ಭೀಷ್ಮಗೆ ವಂದು ಸ್ವಲ್ಪಮಾತ್ರಕೆಮಾನ|ವಿತ್ತಂತೆ ತೋರಿ ಎಲ್ಲರ ರಥವನೂ |ಕತ್ತರಿಸಿ ಹಿಂದಕ್ಕೋಡಿಸಿದೆ ನಿನ್ನಾರ್ಭಟಕೆ |ಹತ್ತು ದಿಕ್ಕಿನೊಳೊಬ್ಬರಿದಿರಾಗಲಿಲ್ಲ 15ಪ್ರಹ್ಲಾದನವತಾರ ಬಾಹ್ಲೀಕನನು ಗೆದ್ದು |ಮಹೀಜಸುತನಾನಿಮಸ್ತಕಶೀಳಿದೆ ||ಬಹುಖೋಡಿಧಾರ್ತರಾಷ್ಟ್ರರ ಕೊಂದು ಹರೆಬಿಟ್ಟ |ಅಹಿಯಂತೆ ರಣರಂಗದಲ್ಲಿ ಸಂಚರಿಸಿದೆ 16ಕಡು ಕೋಪದಿಂದ ಹೂಂಕರಿಸಿಯುರಿಯುಗುಳುತಲಿ |ಪೊಡವಿ ನಡುಗಿಸಿನಭಬೇಯಿಸುತ್ತಲಿ ||ಪಿಡಿದು ದುಶ್ಶಾಸನನ ತೊಡೆಯಲ್ಲಿ ನೆರೆಗೆಡಹಿ |ಒಡಲ ಛೇದಿಸಿ ರಕ್ತಮಜ್ಜನವಗೈದೆ 17ಕರುಳ ದಂಡೆಯ ಮಾಡಿ ಅರಸಿ ಮಂಡೆಗೆ ಮುಡಿಸಿ |ಖರೆಯ ಮಾಡಿದೆ ಉಭಯತರ ಶಪಥವ ||ಕರೆದೆ ಕುರು ಪಾಂಡವರ ಬಿಡಿಸ ಬನ್ನೀರೆಂದು |ಮರುಳಗೊಂಡರೆಲ್ಲ ನಿನ್ನರೂಪನೋಡುತಲಿ 18ಸ್ವಾಮಿ ಪ್ರಾಣೇಶ ವಿಠಲನ ಆಜೆÕಯ ವಹಿಸಿ |ಭೂಮಿ ಭಾರಿಳುಹುದಕೆ ಅವತರಿಸಿದೆ ||ನಾ ಮಾಡುವೆನೆ ಪೂರ್ತಿ ನಿನ್ನ ಮಹಿಮೆಯ ಸಮರ |ಭೀಮಕರಪಿಡಿದು ಸಲಹುವದೋ ಪ್ರತಿದಿನದಿ 19
--------------
ಪ್ರಾಣೇಶದಾಸರು
ಹರಿಯ ನಂಬದ ನರನು ಗೂಡರಿತು ಇರದ ವಾನರನು ಶ್ರೀಹರಿಯ ಹೊಗಳದ ಕವಿಯು ಭೂಸುರರುಣ್ಣಿಸದ ಹವಿಯು ಪ.ಕರುಣವಿಲ್ಲದ ಅರಸ ಕಾಳೋರಗನಾಡುವ ಸರಸಮಾನಕಿಲ್ಲದ ಮಂತ್ರಿ ತಾ ಗರಹೊಡಕ ಕುಮಂತ್ರಿ 1ಮೆಚ್ಚು ನುಂಗುವ ದೊರೆಯು ಮೀವ ಬಚ್ಚಲಿನ ದೊಡ್ಡಹರಿಯು ಕೈಮುಚ್ಚಿ ನೀಡದ ದಾನ ಹುಸಿರಚನೆ ನಿಧಾನ 2ಧರುಮಕೆ ಕೂಡದ ಸತಿಯು ಯಮಪುರದಾರಿ ಸಂಗತಿಯು ಬಲುಚರಿಗ ಮತ್ಸರಿತನಯಅವ ಅರಗದ ಅಗ್ಗಣಿಯ3ಮೂರ್ಖನ ಗೆಳೆತನ ಜರ್ಜರಿತ ತಂತುವಿತಾನ ಒಣಕರಕರಿ ಕಲಹದ ನೆರೆಯು ಸಾಸಿರ ತೇಳಗಗಚ್ಚಿದ ಸರಿಯು 4ವಂಚಿತವಾದಿ ಬಂಧು ಪ್ರಾಣ ಮುಂಚಿಸುವ ವಿಷಬಿಂದು ಬಹುಕಾಂಚನದಾಸೆ ಬಳಗ ಪ್ರಪಂಚದಳತೆಕೊಳಗ5ಕೊಡದಿಟ್ಟ ಕೊಡಹಣವು ಸುಡುವ ಅಡವಿಲಿ ಬಿದ್ದ ಹೆಣವು ಬಾಯಿಬಡಕನ ಒಡಂಬಡಿಕೆ ಛಿದ್ರಿಡಿದ ಮಣ್ಣಿನ ಮಡಿಕೆ 6ಬ್ರಾಹ್ಮರಿಗುಣಿಸದಸದನದುರ್ಬೊಮ್ಮ ರಕ್ಕಸನ್ವದನಮದ್ಹಮ್ಮಿನಣ್ಣಗಳ ವಿದ್ಯಾ ಮಾಯಮ್ಮನ ಮಹನೈವೇದ್ಯ 7ಓದಿ ಮಲತ ಗುರುಶಿಷ್ಯ ಸದ್ಭೋಧಾಮೃತಪರಿಹೇಯ ಆಪ್ತಾಧಾರಿಲ್ಲದ ಅರಸೆ ಗ್ರಾಮಾದರಿಸುವ ಆಳರಸೆ 8ವೇತ್ತøವಿವರ್ಜಿತ ಸಭೆಯು ಲೋಕತ್ರಯದಲ್ಲಿ ಅಶುಭವು ಕಂಠತ್ರಾಣಿಲ್ಲದ ಗಾನ ಮುದಿ ಎತ್ತೆಳೆದಾಡುವಗಾಣ9ಹುಸಿನುಡಿವ ದೈವಜÕ ತಾ ಹಡದ ಮಗನಿಂದ ಅವಜÕ ದುರ್ವಸುಕಾಂಕ್ಷೆಯ ಭೇಷಜನು ಮಾನಿಸರ ಉಂಬ ಮಾಯಿ ದನುಜನು10ಶ್ರವಣ ಮನನ ಧ್ಯಾನವನು ಬಿಟ್ಟವನೆ ಜೀವಚ್ಛವನುಮಾಧವಪ್ರಸನ್ವೆಂಕಟಮೂರ್ತಿತನ್ನವರಿಗೆ ಕೊಡುವನುಅರ್ಥಿ11
--------------
ಪ್ರಸನ್ನವೆಂಕಟದಾಸರು