ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಯಿ ಲಕುಮಿ ತಂದೆ ನಾರಾಯಣ ನಿ- ಮ್ಮ ನೆಚ್ಚಿನ ಮಗನಾನಣ್ಣ ಪ ಪಕ್ಕ ದಾಯಿಗರು ಎನಗೆ ಇಬ್ಬರಿಹರು ರಕ್ಕಸರು ಇಹರು ನಾಲ್ಕು ಮಂದಿ ಮಿಕ್ಕವರ ಬಲವುಂಟು ಬಹು ಮಂದಿ ಯಾ- ತಕ್ಕೆ ಇರುವನೆನಗೊಬ್ಬನೆ ಮಾರುತಿ1 ಮಾರುತಿಯ ನಂಬಿದರೆ ಮಹಾಬಲವುಂಟಣ್ಣ ಊರ ಹರಿಭಕ್ತರಿಗೆ ಸರಿ-ಸಾಟಿಯಾರಣ್ಣ ಆರಿಹ-ಪರಗಳಲ್ಲೂ ವಿರೋಧಿಗಳಿರರಣ್ಣ ಶ್ರೀರಾಮಸಖ ಭಾಗ್ಯ ಇಂತಿದೆ ನೋಡಣ್ಣ 2 ನಿನ್ನನೆ ಹಾಡುವೆ ನಿನ್ನನೆ ಹೊಗಳುವೆ ನಿನ್ನನೆ ಬೇಡಿ ಕಾಡಿಸುವೆನಯ್ಯ ನಿನ್ನ ಪಾದದಲಿ ತಲೆ ಇಡುವೆ ರಂಗಯ್ಯ ನಿನ್ನ ಬಲವೊಂದಿರೆ ಅಂಜೆನು ಅಳುಕೆನಯ್ಯ 3 ನಿನ್ನಂತೆ ಸಾಕುವರ ನಂಬಿದರೆ ಕಾಪಾಡುವರ ನಿನ್ನಾಣೆ ನಾಕಾಣೆ ಜಾಜಿಪುರೀಶ ವಿಠಲರಾಯ 4
--------------
ನಾರಾಯಣಶರ್ಮರು