ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಶ್ರೀ ವಿಷ್ಣುತೀರ್ಥರು) ಮೋದ ಬೀರುತ ತಾ ಮೋದಪುರಕೆ ಬಂದವನ್ಯಾರೆಪೇಳಮ್ಮಯ್ಯಾ ಪ ಶುಕಮುನಿ ಪೇಳಿದ ಶಾಸ್ತ್ರದ ಸಾರವ ಸುರಿಸಿದ ಧೀರ ಶ್ರೀ ವಿಷ್ಣುತೀರ್ಥಾರ್ಯ ಕಾಣಮ್ಮಾಅ.ಪ. ಶುದ್ಧವೃತ್ತಿಗಳಿಂದನುಭೋಗಿಪನ್ಯಾರೆ ಪೇಳಮ್ಮಯ್ಯಾ ಶುದ್ಧ ಜೀವರತಾ ಬುದ್ಧಿ ಭೇದಿಪನ್ಯಾರೆ ಪೇಳಮ್ಮಯ್ಯಾ ಶುದ್ಧ ಶೂನ್ಯರುಪದ್ರವ ಬಿಡಿಸುವನ್ಯಾರೆ ಪೇಳಮ್ಮಯ್ಯಾ ಶುದ್ಧ ಶೃತಿ ಸ್ಮøತಿ ಪದ್ಧತಿ ತಪ್ಪದೆ ಇರುವೋ ಯತೀಶ್ವರರೇ 1 ಮರೆಪೊಕ್ಕವರನು ಮರೆಯದೆ ಪೊರೆವನದಾರೆ ಪೇಳಮ್ಮಯ್ಯಾ ಮೋರೆಯ ತೋರೆಂದು ಮಾರನಯ್ಯ ಮುರಾರಿಗೆ ಪೇಳ್ವವನಾರೆ ಪೇಳಮ್ಮಯ್ಯಾ ಮೋರೆ ಮೋಹಿಸಿ ಮೂಲೋಕವ ಸುತ್ತಿದನ್ಯಾರೆ ಪೇಳಮ್ಮಯ್ಯಾ ಮೋರೆ ಒಂದು ಮೂರು ಕಣ್ಣುಳ್ಳ ಬೊಮ್ಮನ ಪ್ರೀತಿಯ ಮಗನಮ್ಮ 2 ಬಂದು ಸೇವಿಸೆ ಘನ ಬಂಧನ ಬಿಡಿಸುವನ್ಯಾರೆ ಪೇಳಮ್ಮಯ್ಯಾ ಹಿಂದು ಮುಂದು ತನ್ನ ನಂಬಿದವರ ಮನಮಂದಿರ ದಿಪ್ಪುವನ್ಯಾರೆ ಪೇಳಮ್ಮಯ್ಯಾ ಇಂದುಧರ ಖಳವೃಂದ ಮೋಹನ ಗುರು ನಂದಿವಾಹನನೇ ಪೇಳಮ್ಮಯ್ಯಾ ಇಂದಿರೇಶ ತಂದೆವರದಗೋಪಾಲವಿಠಲನ ಸೇವಿಪ ನೀಲಕಂಠ ಕಾಣಮ್ಮಾ 3
--------------
ತಂದೆವರದಗೋಪಾಲವಿಠಲರು
ಈ) ರುದ್ರದೇವರು ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ ಪ ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದಜಟಾಮಂಡಲಧಾರಿ ಕಾಣಮ್ಮ ಅ.ಪ. ಕೈಲಾಸಗಿರಿಯ ದೊರೆಯಿವನಮ್ಮ-ಅದು ಅಲ್ಲದೆ ಕೇಳೆಬೈಲು ಸ್ಮಶಾನದಿ ಮನೆಯಿವಗಮ್ಮ-ಸಂಕರ್ಷಣನೆಂದುಕೇಳೆ ಮಹಿಯೊಳು ಜನ ಪೊಗಳುವರಮ್ಮ-ಇದು ನಿಜವಮ್ಮನಾಲಿಗೆ ಸಾಸಿರ ಫಣಿಭೂಷಣ ನಮ್ಮರಮೆಯರಸಗೆ ಇವ ಮೊಮ್ಮಗನಮ್ಮ 1 ಪತಿ ಇವನಮ್ಮ-ಮಾವನ ಯಾಗದಲಿಬ್ಹಾಳ ಕೃತ್ಯಗಳನು ನಡೆಸಿದನಮ್ಮ-ಸಾಗರದಲಿ ಹುಟ್ಟಿದಕಾಳಕೂಟವ ಭಕ್ಷಿಸಿದನಮ್ಮ-ರಾಮನ ದಯವಮ್ಮಮೇಲೆ ಉಳಿಯಲು ಶೇಷಗರಳವುನೀಲಕಂಠನೆಂದೆನಿಸಿದನಮ್ಮ2 ಹರನೊಂದಿಗೆ ವೈಕುಂಠಕೆ ಬರಲು-ತಾತಗೆ ವಂದಿಸುತತರುಣೀರೂಪವ ನೋಡ್ವೆನೆನಲು-ಹರಿ ತಾ ನಸುನಗುತಕರೆದು ಸೈರಿಸಲಾರೆ ನೀ ಎನಲು-ಹಠದಿ ಕುಳ್ಳಿರಲುಕರುಣೆಗಳರಸನು ಹರನ ಮೊಗವ ನೋಡಿಅರುಣೋದಯಕೆ ಬಾರೆಂದು ಕಳುಹಿದ 3 ಅರುಣೋದಯಕೆ ಗಂಗಾಧರ ಬರಲು-ಹದಿನಾರು ವರುಷದ ತರುಣೀರೂಪದಿ ಹರಿ ವನದೊಳಗಿರಲು-ಚರಣನಖಾಗ್ರದಿಧರಣೀ ಬರೆಯುತ್ತ ನಿಂತಿರಲು-ಸೆರಗ ಪಿಡಿಯೆ ಬರಲುಕರದಿ ಶಂಖ ಗದೆ ಚಕ್ರವ ತೋರಲುಹರನು ನಾಚಿ ತಲೆತಗ್ಗಿಸಿ ನಿಂತ4 ಮಂಗಳಾಂಗನೆ ಮಾರಜನಕ-ನಾ ಮಾಡಿದ ತಪ್ಪಹಿಂಗದೆ ಕ್ಷಮಿಸೊ ಯದುಕುಲ ತಿಲಕ-ವಕ್ಷದಲೊಪ್ಪುವ ನಿನ್ನಂಗನೆ ಅರಿಯಳು ನಖಮಹಿಮಾಂಕ-ಹೀಗೆನುತಲಿ ತವಕರಂಗವಿಠಲನ ಪದಂಗಳ ಪಿಡಿದು ಸಾಷ್ಟಾಂಗವೆರಗಿ ಕೈಲಾಸಕೆ ನಡೆದ 5
--------------
ಶ್ರೀಪಾದರಾಜರು
ಲೋಕನಾಯಕಿ ಹೆಣ್ಣಾ ನೋಡಮ್ಮ ಸತ್ಯ ಲೋಕೇಶ ಬೊಮ್ಮನೀಕೆ ಮಗನಮ್ಮ ಪ. ಶೋಣಿತ ಶುಕ್ಲ ಸಂಮ್ಮಂಧಗಳಿಲ್ಲ ಇಂಥಾ ಜಾಣತನವು ಬೇರೊಬ್ಬಗಿಲ್ಲ ವಾಣೀಶ ಶಂಭು ಮುಖ್ಯ ಸುರರೆಲ್ಲ ತತ್ವ ಕಾಣದೆ ನಿತ್ಯಮೆಣೀಸುವವರಲ್ಲ 1 ಮೂಢ ದೈತ್ಯರ ಮೋಹಿಸಲಿಕಂದು ಒಳ್ಳೆ ಪಾಡಾದ ಸಮಯಕೊದಗಿ ಬಂದು ಮೂಡಿ ಸುಧೆಯ ಕಲಶ ತಂದು ತಡ ಮಾಡದೆ ಸುರರಿಗಿಕ್ಕಿದಳಂದು 2 ಶಿವನು ಮರಳುಗೊಂಡ ಶೃಂಗಾರಸಾರ ಭುವನೈಕರಕ್ಷ ದೀನಮಂದಾರ ಪವನವಂದಿತೆ ಪದ್ಮೆಗಾಧಾರ ನಿತ್ಯ ನವಯವ್ವನೆಗೆ ನಾವು ಪರಿವಾರ 3 ಭಸ್ಮೋದ್ಧೂಳಿತ ದೇಹಭವನಂದು ವರವ ಭಸ್ಮಾಸುರನಿಗಿತ್ತೋಡುವ ಬಂದು ವಿಸ್ಮಯಗೊಂಡು ನೀನೆ ಗತಿಯೆಂದು ಪೇಳೆ ಭಸ್ಮಗೈದಳು ದೈತ್ಯಾಧಮನಂದು 4 ನಾಗಗಿರಿಯ ಶಿಖರದ ಮೇಲೆ ನೆಲೆ ಯಾಗಿ ಶೋಭಿಪಳತ್ಯದ್ಭುತ ಬಾಲೆ ಶ್ರೀಗುರು ಶಿವಮುಖ್ಯ ಸುರಪಾಲೆ ದಯ ವಾಗಿ ತೋರ್ಪಳು ತನ್ನ ಶುಭಲೀಲೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ನೋಡೆ ಅಮ್ಮ ಯಶೋದಮ್ಮಆಡಬಾರದಾಟವಾಡುವನಮ್ಮಕಾಡುವ ನಿನ್ನ ಮಗನಮ್ಮ ಪ.ಬುದ್ಧಿ ಹೇಳೆ ತಿದ್ದಿ ಹೇಳೆ ನಮ್ಮಮುದ್ದು ಮಕ್ಕಳನೆಲ್ಲ ಗುದ್ದಿ ಅಂಜಿಸಿ ಕಾಲಿಲೊದ್ದೋಡಿ ಬರುತಾನೆ ಕೇಳೆ 1ಕ್ಷೀರಕೊಡವ ಸುರುವಿ ಬಿಡುವಸಾರಿ ಸಾರಿಗೆ ಬೆಣ್ಣೆ ಬಿಸಳಿಗೆನೊಡೆವ ಮಂದಿರದೊಳಗೆ ಕುಣಿದಾಡುವ 2ಹರಿದು ಬರುವ ಚಾರುವರಿವ ಎಳೆಗರುವನೋಡುವೆನೆಂದು ಅಳುತಲುಸುರುವಹರವಿ ಮೊಸರು ಕೆನೆ ಸುರಿವ 3ಲೀಲೆ ನೋಡಲಳವಲ್ಲ ನಿನ್ನಬಾಲಕನಲೌಕಿಕಹೊಲ್ಲನಮ್ಮೆಲ್ಲರಆಲಯದಿ ನಿಲ್ಲಗೊಡಸಿರಿನಲ್ಲ4ಗುಣಹೇಳಲೆಣಿಕಿಲ್ಲ ಚಿನ್ಮಯ ಪ್ರಸನ್ವೆಂಕಟೇಶ ತಾ ನಂಬದರ್ಗಿಲ್ಲಬಿನಗುಮಾತಿಗೆ ಸಿಗನಲ್ಲ5
--------------
ಪ್ರಸನ್ನವೆಂಕಟದಾಸರು