ಶ್ರೀಕೃಷ್ಣಸಂಕೀರ್ತನೆ
ಅಕ್ಕ ನಂದಗೋಪನ ಅರಮನೆಯೊಳಗೊಬ್ಬಅಕ್ರೂರ ಬಂದನಂತೆಹೊಕ್ಕು ಬಳಸಲಿಲ್ಲ ಹುಸಿಯನಾಡುವಳಲ್ಲಇಕ್ಕೋ ಬಾಗಿಲಮುಂದೆ ಈಗ ರಥವ ಕಂಡೆಪ.
ಮಧುರಾಪಟ್ಟಣವಂತೆ ಮಾವನ ಮನೆಯಂತೆನದಿಯ ದಾಟಲಿಬೇಕಂತೆಎದುರು ದಾರಿಲ್ಲವಂತೆ ಏನೆಂಬೆ ಏಣಾಕ್ಷಿಉದಯದಲ್ಲಿ ಪಯಣವಂತೆ ಒಳ್ಳೆಯ ವೇಳೆಯಂತೆ1
ಮಲ್ಲರ ಕೂಟವಂತೆ ಮತ್ತೆ ಕಾಳಗವಂತೆಬಲ್ಲಿದ ಗಜಗಳಂತೆಬಿಲ್ಲಹಬ್ಬವಂತೆ ಬೀದಿ ಶೃಂಗಾರವಂತೆಅಲ್ಲಿ ತಾಯಿ[ತಂದೆಯರ]ಕಾಲಿಗೆ ನಿಗಡವಂತೆ 2
ಅಲ್ಲಿ ಹುಟ್ಟಿದನಂತೆ ಅರಸಿನ ಮಗನಂತೆಇಲ್ಲಿಗೆ ಬಂದನಂತೆಎಲ್ಲ ಕಪಟವಂತೆ ಎಂದೂ ಹೀಗಿಲ್ಲವಂತೆನಿಲ್ಲದೆ ಯಶೋದೆಯ ಕಣ್ಣಲುದಕವಂತೆ3
ಮತ್ತೆ ಪಾಂಡವರಂತೆ ಮೋಹದ ಸೋದರರಂತೆಅತ್ತೆಯ ಮಕ್ಕಳಂತೆಸುತ್ತ ಶತ್ರುಗಳಂತೆ ಸಕಲ ಕಾರ್ಯಗಳಂತೆಚಿತ್ತಜನಯ್ಯನ ಚಿತ್ತವೆರಡಾದುವಂತೆ4
ತಾಳಲಾರೆವು ನಾವು ತಾಟಂಕ ಹಯವದನಬಾಲಕನಗಲಿದನೆನೀಲವೇಣಿಯರೆಲ್ಲ ನಾಳೆ ಉದಯದಲ್ಲಿಆಲೋಚನೆ ಮಾಡದೆ ಆಣೆಯಿಕ್ಕಿ ತಡೆವ 5
* ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ಇದೆ.