ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಪುರುಷರೇ ಮರಳುವುದಾದ ಬಳಿಕಿನ್ನು ಕಾಪುರುಷರುನರರಿಗೆಮೋಕ್ಷವುಂಟೆ ಪ ಕ್ರಮದಿಂದ ಪಕ್ಷ ಮಾಸಂಗಳು ಸಂಧಿ ಕರಣ ಲಗ್ನವಮೃತ ವಿಷಗಳೆಂದು 1 ಬಟ್ಟೆ ಗಾಣೆನು ಜಗದೀಶನೊಬ್ಬನೇ ಬಲ್ಲ 2 ಜನಿಸುತಿಹವು ಮಗಧನಂತರ ಕೋಣೆ ಲಕ್ಷ್ಮೀರಮಣ ನೆನಿಸುವ ನೋರ್ವ ಸದಾಶಿವ ನುಳಿದಿರ್ದು 3
--------------
ಕವಿ ಪರಮದೇವದಾಸರು
ಏಳು ರಂಗಯ್ಯ ನೀನೇಳು ಕೃಷ್ಣಯ್ಯ ಏಳಯ್ಯ ದೊರೆ ಬೆಳಗಾಯಿತೇಳೆಂದು ಪಾಲ್ಗಡಲೊಡೆಯ ಹರಿಯನೆಬ್ಬಿಸಿದಳಂದು ಬಾಲೆ ಯಶೋದೆಯು ಬಹು ಸಂಭ್ರಮದಿಂದ ಪ ಶಕ್ರನುಪಟಳವ ನೀ ಪರಿಹರಿಸಬೇಕು ವಿಕ್ರಮದಿ ಗೋವರ್ಧನ ಎತ್ತಬೇಕು ಚಕ್ರಧರ ನಿನ್ನ ಮಧುರೆಗೆ ಕರೆದೊಯ್ಯೆ 1 ಮಾವ ಕಂಸನು ನಿನ್ನ ಬಾ ಎಂದನಂತೆ ಸಾವು ಅವನಿಗೆ ಸಮೀಪದಲಿದೆಯಂತೆ ದೇವಕಿ ವಸುದೇವ ಸೆರೆಯಲಿರುವರಂತೆ ಕಾವುದಕೆ ನೀ ಪೋಗಲೇಬೇಕಂತೆ 2 ಬಿಲ್ಲ್ಹಬ್ಬದಲಿ ಜಯಶೀಲನಾಗಬೇಕು ಖುಲ್ಲ ರಕ್ಕಸ ದಲ್ಲಣನೆನಿಸಬೇಕು ಬಲ್ಲಿದ ಮಗಧನ ಕೊಲ್ಲಿಸಲುಬೇಕು 3 ದೇವಿ ದ್ರೌಪದಿಗೆ ಸುಚೇಲವೀಯಬೇಕು ಭಾವಮೈದುಗೆ ಬೋವÀನಾಗಬೇಕು ಪಾವಿನ ಶರದಿಂದವನ ಪೊರೆಯಬೇಕು ಯಾವತ್ತು ಭೂ ಭಾರವನಿಳುಹಬೇಕು 4 ಮಧ್ವರಾಯರ ಹೃತ್ಪದ್ಮದಿ ನಿಲಬೇಕು ಇದ್ದು ಉಡುಪಿಯೊಳು ಪೂಜೆಗೊಳಲುಬೇಕು ಶುದ್ಧ ವೈಷ್ಣವರಿಷ್ಟಗಳ ಸಲಿಸಬೇಕು ಮುದ್ದು ರಂಗೇಶವಿಠಲನೆನಿಸಬೇಕು 5
--------------
ರಂಗೇಶವಿಠಲದಾಸರು
ವಿಜಯವಿಠ್ಠಲ ಶ್ರೀ ವಿಜಯವಿಠ್ಠಲ ಪ ವನಚರ ನಗಧರ ಅವನಿಯ ಉದ್ಧಾರ ಕಾನನ ವೇಗದಿ ಭು- ವನ ದಾನದ ನೆವನನು ಮಾಡಿ ಗಂಗೆಯ ಹ - ವಣದಿ ಪಡದೋ ಶ್ರೀ ವಿಜಯವಿಠ್ಠಲಾ 1 ಛಲದಿಂದ ಕುಲ ಕೋಲಾಹಲ ಮಾಡಿಸಿ ನೀ ತರಿದೆ ಬಾಲೆಯರ ಬಾಲರ ಬಿಡದೆ ಸುಲಭದಿ ಕರ್ಣಗೆ ಒಲಿದು ಪೇಳಿದೆ ಆ ಸುಲಲಿತಾ ಭಾರ್ಗವ ವಿಜಯವಿಠ್ಠಲ2 ಶತಮಖರಿಪು ಲೋಕಪಿತನೊರವಿನಿಂದಲಿ ಖತಿ ಸಕಲರಿಗೆ ನೀವು ತರಿದಿರಲು ಪತಿತಪಾವನ ರಾಮ ಅತಿ ವೇಗ ದನುಜನ ಹತವ ಮಾಡಿದೆಯೊ ಶ್ರೀ ವಿಜಯವಿಠ್ಠಲ3 ಬಕಮುಖ ದನುಜರ ಹಕ್ಕಲಗೊಳಿಸಿ ಬಲು ಯುಕುತಿಯಿಂದಲಿ ಭಕುತರ ಪೊರದೆ ವಿಕಸಿತ ಕಮಲನಯನ ಕಂಜನಾಭನೆ ಸಕಲ ಸುರರ ಪಾಲ ವಿಜಯವಿಠ್ಠಲಾ 4 ರಕ್ಕಸ ಮರ್ದನ ದಿಕ್ಕು ಮೋಹಿಪ ಕೃಷ್ಣ ರುಕ್ಮಿಣಿ ಪತಿಯಾದಾ ಚಕ್ರಪಾಣಿ ಉಕ್ಕಿದ ಮಗಧನ ಸೊಕ್ಕು ಮುರಿದು ಕಪಿ ರೆಕ್ಕ ಆಳ್ವನಿಗೆ ಒಲಿದೆ ವಿಜಯವಿಠ್ಠಲಾ 5 ಘನವಾದ ವಿಶ್ವರೂಪವ ತೋರಿದೆ ದಿನಮಣಿ ಕೋಟಿ ಅಧಿಕ ಕಾಂತಿ ನರಹರಿ ವನಜ ಸಂಭವನಯ್ಯ ವಿಜಯವಿಠ್ಠಲಾ 6 ವನಿತೆಯರ ವ್ರತ ಭಂಗವ ಮಾಡಿ ದಾನವರ ಮೋಹಿಸಿದೆಯೊ ಪವನನೊಡಿಯಾ ಉನುಮತ ಜನ ಕುಲ ಸನುಮತ ಶಾಸ್ತ್ರವ ವ- ದನದಲಿ ಮೆದ್ದಿಯೊ ವಿಜಯವಿಠ್ಠಲಾ 7 ರಜೋತಮ ಗುಣವನು ಭುಂಜಿಸುತ ವ್ರಜ ಭೂಮಿ ನಿಜವಾಗಿ ವ್ಯಾಪಿಸಿರೆ ಸುಜನಪಾಲ ನೀನು ವದಗಿ ವಾಜಿಯನೇರಿ ಭಜನಗೈಸಿದ ವೇಗ ವಿಜಯವಿಠ್ಠಲಾ 8 ಗೋಕುಲದಲಿ ಅನೇಕ ಲೀಲೆಯ ತೋರಿ ಬೇಕಾದ ವರ ಪುಂಡರೀಕಗಿತ್ತೆ ಸಾಕಾರ ಗುಣ ಪೂರ್ಣ ವೇಣುಗೋಪಾಲ ವಿ ವೇಕವ ಕೊಟ್ಟ ಕಾಯನ್ನ ವಿಜಯವಿಠ್ಠಲಾ9
--------------
ವಿಜಯದಾಸ
ಶ್ರೀಹರಿಸ್ತುತಿಗಳು ಕಂಡು ನಾ ಧನ್ಯನಾದೆನೋ ಶ್ರೀ ಪುರುಷೋತ್ತಮ ಪುಂಡರೀಕಾಕ್ಷ ವಿಷ್ಣುಪಾದವ ಪ ಮಗಧನಾ ದೇಶದಲ್ಲಿ ಚಂಪಕಾರಣ್ಯದಲ್ಲಿ ಮಧುವನದ ಮಧ್ಯದಿನಿಂದ ಮದನನಯ್ಯನ ಪಾದವ 1 ಶ್ರೇಷ್ಠ ಗಯಾಸುರನ ಶಿರವ ಮೆಟ್ಟಿ ಅವನ ದರ್ಪವ ನಷ್ಟವನ್ನು ಮಾಡಿದ ಸೃಷ್ಟಿಗೀಶ್ವರನ ಪಾದವ 2 ಮಂಡೆಯನ್ನು ತುಳಿದ ಭೂಮಂಡಲಾಧಿಪನ ಪಾದವ 3 ಪಿಂಡವಿಟ್ಟವರ ಪಿತೃಗಳಿಗೆ ಆನಂದಲೋಕವೀವ ಪಾದವ 4 ಹರಿಗೆ ಅಭಿಷೇಕ ಮಾಡಿ ಭರದಿ ಭಜನೆ ಮಾಳ್ಪ ಪಾದವ 5 ಸಾಸಿರನಾಮದಿಂದ ಉಲ್ಲಾಸದಿ ಪೂಜಿಸಿ ಜನರು ಲೇಸಾಯಿತೆಂದು ಪೋಪ ಈಶನ ಪಾದವ 6 ಸಂಧ್ಯಕಾಲದಲ್ಲಿ ಹರಿಗೆ ಗಂಧಮಾಲೆಯನ್ನು ಧರಿಸೀ ಸು ಗಂಧವಾದ ತುಳಸಿ ಸುತ್ತಲು ಗೋವಿಂದನ ಶ್ರೀಪಾದವ 7 ಪಾದ ಪಾದ ಪಾದ ಪಾದ 8 ಪಾದ [ಸಜ್ಜನರಿಗೆ ] ಮುಕ್ತಿಯನ್ನು ಕೊಡುವ ಪಾದವ 9
--------------
ಯದುಗಿರಿಯಮ್ಮ