ಮಗಟಖಾನ ಹುಬ್ಬಳ್ಳಿ ಶ್ರೀಯಾದವಾರ್ಯರ ಕರಾರ್ಚಿತ ಶ್ರೀನರಸಿಂಹ ಸ್ತೋತ್ರ
ಕರುಣವೆಂತುಂಟೋ ನಿನಗೆ | ಶ್ರೀನಾರಸಿಂಹಾ ಪ
ವರತಟನಿ ಮಲಪ್ರಭೆಯ | ತೀರಸ್ಥನೆನಿಸೀ ಅ.ಪ.
ಪೂರ್ವದಲಿ ಋಷಿ ಚ್ಯವನ | ರಿಂದರ್ಚಿತವು ಎನೆಓರ್ವ ಶಿಲೆಯಲಿ ನಿಂದು ಯಾದವಾರ್ಯಾ |ಪಾರ್ವ ಯೋಗೀಶ ರಚಿ | ತಾಕಾರ ಗಂಧದಲಿಆಹ್ವಾನಿತನು ಆಗಿ ನೀನಿಲ್ಲಿ ಇರುವೇ 1
ಆದಿ ವ್ಯಾಧಿಲಿನೊಂದ | ಬುಧರಿಂದ ಬಹುಸೇವ್ಯಯಾದವಾರ್ಯಾಂತಸ್ಥ | ಶ್ರೀ ನಾರಸಿಂಹಾ |ಬಧಿರ ಮೂಕರು ತಮ್ಮ | ವ್ಯಾಕುಲವ ಕಳೆಯುತ್ತಮುದವಾಂತು ತವ ಮಹಿತಿ ಕೀರ್ತಿಸುತ್ತಿಹರೋ 2
ಮಾಸ ನಿಶಿ ಜೇಷ್ಠದಲಿಮತ್ತೆ ಹರಿದಿನದಲ್ಲಿ | ಮಂದವಾರದಲೀ |ಮತ್ಸರಾದ್ವಿರಹಿತರು | ಸತ್ಸುಜನರಿಂದ ಕೂಡಿಉತ್ಸಹದ ಜಾಗರವ | ನೀ ಮಾಡಿ ಮಾಡಿಸಿದ್ಯೊ 3
ಬೆಟ್ಟದಾಚಾರ್ಯರೆನೆ | ಸುಷ್ಠು ಕೀರ್ತನೆಗೊಂಡಶ್ರೇಷ್ಠ ಹುಚ್ಚಾಚಾರ್ಯ | ರಿಲ್ಲಿ ನೆಲೆಸುತಲೀಇಷ್ಟ ಸಿದ್ಧಿಗಾಗಿ ಶ್ರೇಷ್ಟ | ತಪವನೆ ಗೈದುಇಷ್ಟಾರ್ಥ ಪೊಂದಿತಾ | ಬೆಟ್ಟಕ್ಕೆ ತೆರಳಿದರೋ 4
ಮೋದ ಪಡಿಸುತ ಬುಧರಯಾದವೇಶನ ನೊಲುಮೆ | ಸಂಧಿಸುತ ಮೆರೆದೂ |ಆದರಿಸಿ ಮಂಗಳ ಸು | ಭೋದಗಳ ಬೀರುತಲಿಮೋದ ಬಡಿಸಿದ ಹರಿಯ | ಭೂದೇವ ಆರ್ಯ 5
ಪ್ರೇರ್ಯ ಪ್ರೇರಕರಾಗಿ | ಬೆಳಗಾವ್ಕರು ಎಂಬಪಾರ್ವನಲಿ ನೀ ನಿಂತು | ಅಚ್ಚರಿಯನೆಸಗೀಭಾರ್ಯೆ ತವ ಕೊಲ್ಲಾಪುರ | ಮ್ಮ ಸತ್ಯವ್ರತರಆರ್ಯಗೊಡ ದರ್ಶಿಸುವ | ಯೋಗ ನೀನಿತ್ತೇ 6
ಸೃಷ್ಠ್ಯಾದಿ ಅಷ್ಟಕವ | ದೃಷ್ಟಿ ಮಾತ್ರದಿಗೈವಇಷ್ಟ ಭಕುತಿಗೆ ಮೆಚ್ಚಿ | ಘಟ್ಟಿ ಕಂಬದಿ ಜಿಗಿದೂದುಷ್ಟನ್ನ ಸಂಹರಿಸಿ | ಕಷ್ಟಗಳ ಕಳೆದಂಥಕೃಷ್ಣ ಗುರು ಗೋವಿಂದ ವಿಠಲಾ ಗಾನಮಿಪೇ 7