ಬೇಡುವೆ ಪರಿಪಾಲಿಸೆನ್ನ ಪ
ಅಗಣಿತ ಮಹಿಮ
ಜಗವನುದ್ಧರಿಸುವ | ಘನ ಗುಣಧಾಮ 1
ಪಶುಪತಿ ಪ್ರೇಮ ||
ಕೌಶಿಕ ಮಖಪರಿ | ಪಾಲಕ ರಾಮ 2
ಪಾವನ ರಾಮ | ಶ್ರೀವರ ರಾಮ ||
ಪವನಜಸೇವಿತ| ರವಿಕುಲಸೋಮ 3
ದಶರಥರಾಮ | ವಸುಧೀಶ ರಾಮ ||
ಋಷಿಪತ್ನಿಯಹಲ್ಯೋ| ದ್ಧಾರಕ ರಾಮ 4
ಅಸುರಾರಿ ರಾಮ | ಬಿಸಜಾಕ್ಷ ರಾಮ ||
ದಶಮುಖಭಂಜನ | ಕೋದಂಡರಾಮ5