ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಕ್ಷುಮಿ ನಾರಾಯಣ ಸಂರಕ್ಷಿಸು ಎನ್ನನು ಬೇಗ ಪ. ಪಕ್ಷ್ಮ(?)ಗಳಕ್ಷಿಗಳನು ಕಾವಂದದೊಳಕ್ಷಯ ನಿಧಿಯ ಸ- ಮಕ್ಷದಿ ತೋರುತ ಅ.ಪ. ಅರ್ಭಕನಾ ಮೋರೆ ಕೇಳಿ ಕರ್ಬುರ ಚರ್ಮನ ಸೀಳಿ ಗರ್ಭೀತ ಕರುಳ ಮಹಾರ್ಭಟದಿಂ ತೆಗದುರ್ಬಿಗೆ ಬೀರಿದ ನಿರ್ಭಯಕಾರಿ 1 ಮಣಿಗರ್ಭ ಮೂರ್ತಿಗೆ ನೀ ಎಣೆಯಾಗಿಲ್ಲಿಗೆ ಬಂದು ಕುಣಿಯಲು ನಿಧಿ ಸಂದಣಿಗೊಳದಿರೆ ಲಕ್ಷಣಕೆ ಕೊರತೆಯಂ- ದೆಣಿಸರೆ ಸುಜನರು 2 ಶಕ್ರ ಚತುಷ್ಕರ ಸಿರಿಯು ಚಕ್ರಗದಾಬ್ಜರ ಪರಿಯು ವಕ್ರ ಮತಿಯ ರಿಪುಚಕ್ರವ ತರಿವ ಪರಾಕ್ರಮ ಕರುಣೋ- ಪಕ್ರಮ ತೋರುತ 3 ಅಂಬುಜನಾಭನೆ ನಿನ್ನ ನಂಬಿದ ಭಾವನೆಯೆನ್ನ ತುಂಬಿದ ಜಗದೊಳಗಿಂಬುಗೊಂಡಿಹ ನಿನಗೆಂಬುದೇನು ಪೀ- ತಾಂಬರ ಧಾರಿ4 ಎರಡೊಂದು ಋಣಬಂಧ ಪರಿಹರಿಸೊ ಗೋವಿಂದ ಸುರತರು ಕರುಣಾರಸವಿರಿಸು ಶೇಷಗಿರಿ- ವರ ತ್ವರೆಯಿಂದ 5
--------------
ತುಪಾಕಿ ವೆಂಕಟರಮಣಾಚಾರ್ಯ