ಸಾರಿ ಸಾರಿ ಹೇಳು ತೀನಿ ಕಡ್ಡಿ ಮುರಿದು ನಾನು
ಬಾರಿ ಬಾರಿಗೆ ಸತ್ತು ಹುಟ್ಟತಲಿಹೆ ನೀನು ಪ
ಇರುಳು ವಿಷಯದೊಳಗೆ
ಮನವ ನಿರಿಸಿ ಮಡದಿ ಮಕ್ಕಳೆಂಬಲೆಯಲಿ
ಪರಿಯನರಿಯದಿದು
ಇನ ಸುತನ ದೂತರೊಡನೆ ಕೊಲಿಸಿ ಕೊಳದಿರು 1
ನೀನು ಹುಟ್ಟಿ ಬರುವ ಮುನ್ನ ಇವರಿಗೆಲ್ಲ ವಾಸವೆಲ್ಲಿ
ನೀನದೆಲ್ಲಿ ನಟ್ಟನಡುವೆ ಬಂದ ಸಿರಿಯಿದು
ಕಾನ ಕಪಿಗಳಂತೆ ನೆರೆದು ಮಡದಿ ಮಕ್ಕಳೆಂದು ಈಗ
ಪ್ರಾಣವನ್ನು ತಿನಲು ಬಂದ ನರಿಗಳಿವದಿರು 2
ದಾರಿ ಹೋಕರಿವರು ನಿನ್ನ ಋಣವು ತೀರಿ ಹೋದ ಬಳಿಕ
ಯಾರಿಗಾರು ಇಲ್ಲ ನಿನಗೆ ನೀನದಲ್ಲದೆ
ವೈರಿ ಕೋಣೆಲಕ್ಷ್ಮೀಪತಿಯ
ಸೇರಿ ನಾಮ ಸ್ಮರಣೆಯಿಂದ ಮುಕ್ತಿ ಪಡೆದಿರು 3