ಏನು ಸುಖವಯ್ಯ ಪ
ಇನ್ನೇನು ಪರಗತಿಯಹುದು ಮುಂದೆಅ.ಪ
ನಾನಾವಿಧ ದುಃಖಗಳಲಿ
ಜ್ಞಾನಶೂನ್ಯನಾಗುತ ವಿಷ-
ಯಾನುಭವದಿ ವ್ಯಥೆ ಪಡುವವಗೆ 1
ಮಾಳಿಗೆ ಮೇಲೋಡಾಟವು
ನಾಳೆಬಹುದು ಕಷ್ಟವು ಎಂ-
ಕೇಳದೆ ಗರ್ವಿಸಿ ಮೆರೆವವಗೆ 2
ಭದ್ರವು ತನಗೆಂದು ತಿಳಿದು
ಕ್ಷುದ್ರ ಮಾರ್ಗದಲಿ ತಿರುಗಿದ ದ-
ರಿದ್ರದಿ ಹಂಬಲಿಸುವವಗೆ 3
ಮಡದಿ ಮಕ್ಕಳೆಂತೆಂಬುವ
ತೊಡರೊಳು ಬಾಯ್ಬಿಡುತಿರುವವಗೆ 4
ಹರಿಕೊಟ್ಟ ಮಹಾಭಾಗ್ಯದಿ
ಪರಮತೃಪ್ತನಾಗಿರದಲೆ
ಗುರುರಾಮವಿಠಲನ ಮರೆದು
ಇರುಳು ಹಗಲು ಚಪಲ ಪಡುವಗೆ 5