ಮನವೇ ನೀ ಬರಿದೆಜನ್ಮ ವ್ಯರ್ಥಗಳೆವರೆ ಬಂಗಾರದಥಾ ಪ
ಮನವೇ ನೀ ಬರಿದೇ ಜನ್ಮ ವ್ಯರ್ಥಗಳೆವರೆ ಬಂಗಾರದಂಥಾ |
ಮರೆವ ದಿನಗಳ ಜರಿವರೇ ನರದೇಹವಿದು ಅ.ಪ
ದೊರೆಯದಿನ್ನು ಮತ್ತ ತರುವರ ಏನಾದರೇನೀ |
ಹರಿಯ ಸ್ಮರಣೆಯ ಬಿಡುವರೇ |
ಅರಿವ ಪಂಥ ವಿಡಿದು ಜನ್ಮ ಮರಣ ಬಲಿಯಾ ತಪ್ಪಿಸದೇ |
ತಿಗಳಿ ಹುಳುವಿನಂತೆ ಸಿಕ್ಕ ತನ್ನ ತಾ ಮರೆವರೇ 1
ಕೇಳೆಲೋ ನೀ ಪೊಡವಿಯೊಳಗಿದ್ದ ಸಾಯಸಾ |
ಉದಯದಲೆದ್ದು ಬಿಡುವದೆ ಮಲಮೂತ್ರ ಕೆಲಸಾ |
ಮಧ್ಯಾನ್ಹದಲಿ ವಡಲ ತುಂಬುವ ಕೆಲಸಾ |
ನಿಶಿಕಾಲದಲ್ಲಿ ವಡನೆ ಮಲಗುವ ಕೆಲಸಾ |
ಪಡೆದ ತಾಯಿಯವ್ವನೆಂಬ ದೃಢವನವಾ ಕಡಿಯಲು |
ಕೊಡಲಿಯಂತೆ ಹುಟ್ಟಿ ಬಂದೆ ಮಡದಿ ಮಕ್ಕಳುದ್ದೇಶಾ 2
ಮನವೇ ನೀ ಹಿಂದಿನವ ಗುಣ ಜರಿದು ಸದ್ಭಾವ ಭಕು |
ತಿಂದ ನಡುವಳಿ ಬಿರಿದು | ಸದ್ಗುರುವೀನ |
ದ್ವಂದ್ವ ಪಾದಗಳ ವಿಡಿದು | ಅವರ ದಯ |
ದಿಂದ ಗತಿ ಮುಕ್ತಿ ಪಡೆದು |
ಇಂದು ಧನ್ಯನಾಗೆಲೋ ಮುಕುಂದ ನಾಮ ನೆನೆದು ನೀ |
ತಂದೆ ಮಹಿಪತಿ ನಿಜನಂದನುಸುರಿದನು 3