ಇನ್ನೇನ ಮಾಡುವೆ ಇನ್ನಾರ ಬೇಡುವೆ ಪ್ರ-ಸನ್ನ ಚೆನ್ನಕೇಶವ ಎನ್ನ ಬಿನ್ನಪವಮನ್ನಿಸಿ ದಿನದಿನದಲ್ಲಿನಿನ್ನನರ್ಚಿಪಂತೆ ಮಾಡು ಪ.
ಮೊಲೆಯುಂಬ ಹಸುಗೂಸು ಮಾತನಾಡಿ ತನ್ನಮನದಭೀಷ್ಟವ ಪೇಳ್ವುದೆಚೀರಿ ಅಳುವದೈಸೆ ಅದನರಿತು ಅದರ ತಾಯಿಅಪ್ಪ್ಪಿಮುದ್ದಾಡಿಸುತ್ತಬಳಲಿಕೆÀ ಪೋಪಂತೆ ನಸುಬಿಸಿಪಾಲನುಬಾಯೆಂದು ಕುಡಿಸುವಳುಸಿರಿಲಲನೆಯರಸ ನಮ್ಮ ಈ ಪರಿಯಲಿನೀನು ಲಾಲಿಸಿ ಸಲಹಬೇಕು 1
ಕರಿ ಕರೆಯಲುಪೊರೆದಂತೆ ಪೊರೆಯೆನ್ನನುಮಕರಿಯ ಕೊಂದು ಪೊರೆದಂತೆ2
ಹುಲಿಯ ಕಂಡೋಡುವ ಹುಲ್ಲೆಯ ಮರಿಯಂತೆಭವದ ಬೇಗೆಯಲಿ ಬೆಂದೆ ವಿಘಳಿಗೆ ಘಳಿಗೆಯೊಳು ಅಲಸದೆ ಪಾಪವಗÀಳಿಸುವ ಗÀಸಣೆಗಂಜೆತುಳಸಿಯ ದಳದಿಂದ ಸಂತುಷ್ಟನಹ ನಿನ್ನಒಲಿಸುವ ಭಾಗ್ಯದಲ್ಲೆ ಈ ಇಳೆಗೆ ಭಾರವಾದೆಇಹಪರ ದುಃಖದ ಹಂಬಲಿಕೆ ಎಳ್ಳಷ್ಟು ಇಲ್ಲಸನ್ಮಾರ್ಗದ ಹಂಬಲಿಕೆ ಎಳ್ಳಷ್ಟು ಇಲ್ಲ ಅಪವರ್ಗದ ಹಂಬಲಿಕೆ ಎಳ್ಳಷ್ಟು ಇಲ್ಲ3
ಹೆಂಡಿರ ಸಾಕಲಾರದೆ ಹೆಣ್ಣು ಮಕ್ಕಳುಗಳಕಂಡ ಕಂಡವಗೆರ್À ಮಾರಿ ಜಗಭಂಡನೆನಿಸಿಕೊಂಡೆ ಬಡತನ ಹಿಂಗದೆಕೊಂಡೆಯಗಳ ಪೇಳುವೆಉಂಡುಡುವರ ಕಂಡು ಮತ್ಸರ ಮಾಡುವೆತಂಡ ತಂಡÀದವರಿಂದ ಕಡಗೊಂಡರ್ಧನ ಕೊಡದೆ ಕಲ್ಲಪೊರುವೆನು ಕೋ-ದಂಡವೇರಿಸಿ ಕೊಂಡೆನು 4
ದಂಡವಿಡಿದು ವೇಷಧಾರಿಯೆಂಬುದ ಕೈಕೊಂಡು ರಾವಣನಂತೆ ಚರಿಸಿ ಎನ್ನಮಂಡೆ ಬೋಳು ಮಾಡಿ-ಕೊಂಡು ಇಳೆಯೊಳು ಪರಸತಿಯರ ಮೋಹಿಪೆಪುಂಡರೀಕಾಕ್ಷ ಈ ಪರಿಯ ಕ್ಲೇಶಗಳನುಉಂಡರೆÀ ವೈರಾಗ್ಯ ಬಾರದು ಎಲೆಪಾಂಡವಪ್ರಿಯ ಇನ್ನಾರಿ ಗುಸುರುವೆನು ಉ-ದ್ದಂಡಭಕ್ತರ ಸೇರಿಸೊ ಕೈ-ಕೊಂಡು ನಿನ್ನುದ್ದಂಡಭಕ್ತರ ಸೇರಿಸೊ5
ತಪ್ಪಿದರೆ ತಾಯಿ ತನ್ನ ಮಕ್ಕಳುಗಳತಕ್ಕೈಸಿಕೊಂಬವೊಲು ಕಾಮ-ನಪ್ಪ ಎನ್ನಪ್ಪ ಒಂದು ಕೊರತೆಯ ಕಾಣದೆಕರುಣದಿ ಕಾಯಬೇಕುಅಪಾರಮಹಿಮ ನೀನಾಶ್ರಿತ ಜನರನುಅತ್ತ ಹೋಗೆನ್ನೆ ಗಡ ನೀನ-ಪ್ರತಿಮಹಿಮನೆನಿಸಿಕೊಂಡೆ ಅದರಿಂದಅಮರರ ಶಿರೋರನ್ನವೆ ಅರ್ಜುನಸಖಅಮರರ ಶಿರೋರನ್ನವೆ 6
ಸರಿಮಿಗಿಲಿಲ್ಲದ ಸರ್ವೇಶ ಹರಿಯೆಂದುಸಿರಿಹಯವದನರಾಯ ನಿನ್ನಪರಮ ಮುನಿಗಳೆಲ್ಲಪರೀಕ್ಷೆಮಾಡಿ ನೋಡಿಮುನ್ನ ನಿರ್ಣೈಸಿದರುಹಿರಿಯರ ಮಾತನು ಪಾಟಿಮಾಡದನಗೋತ್ರ ಸೂತ್ರಗಳು ಪೋಕುಪ್ರವರ ಗೋತ್ರ ಋಷಿಮೂಲಯೆಂದು ಪ್ರಸಿದ್ಧ ಇನ್ನಾರು ನಿನ್ನಂಥವರು 7