ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿಕ್ಕವನೇನೆ ಮಿಕ್ಕಾದಂಥ | ಮಕ್ಕಳಿಲ್ಲೇನೆ, ನಿಮ್ಮವರೊಳು ||ದಿಕ್ಕಿಲ್ಲವೇನೆ, ಇವಗೆ ತಕ್ಕ |ಬುದ್ಧಿಯ ಕಲಿಸುವವರಿನ್ನು ಪ ತಂಡ ತಂಡದಿ ಬರುತಿಹ ನಮ್ಮನ |ಕಂಡು ಆಡುವ ಆಟಕಿಯ ಬಿಟ್ಟು ||ಚೆಂಡು ಪುಟಿದು ಬಂತು ಬಚ್ಚಿಟ್ಟಿರ್ಯಾಕೆಂದು |ದುಂಡ ತೋಳಗಳೆತ್ತಿ ಭಂಡು ಮಾಡುವನಿವ 1 ಶಿಶುವೆಂದು ಎತ್ತಪ್ಪಿಕೊಂಡು ಮುದ್ದಿಡಲು |ದಶನಗಳಿಂದಧರ ನೋಯಿಸಲು ||ಆಶೆಯಲಸುವ ಪೀರಿದವನಿವನೆಂದಂಜಿ |ಸೊಸಿಯನ್ನಬ್ಬರಿಸಿ ಬೀದಿಯೊಳಂದು 2 ಆರಿಲ್ಲದಾಗೊಬ್ಬವನನ್ನು ಬಾಲಕನೆಂದು |ದ್ವಾರವಿಕ್ಕಿ ನೀರೆ ಮೇಲಿರಿಸಿ ||ಬಾರಯ್ಯ ಮುದ್ದು ಕೊಡಯ್ಯ ಎನೆ ಹದಿ- |ನಾರು ವರುಷದವನಾದ ರುಕ್ಮಭೂಷಾ 3
--------------
ರುಕ್ಮಾಂಗದರು