ಇವರರುವರ ಹಿಡಿದು ಬಂಧಿಸಿ ನೀವು ಬೇಗ ಪ
ಬಿಮ್ಮನೆ ಬಿಗಿದು ಕಾಮನ ಕಟ್ಟೆ ಅವನ
ತಮ್ಮನ ಹಿಡಿದು ತಲೆಯ ಕುಟ್ಟಿ
ಸುಮ್ಮನೆ ಲೋಭನ ಕೈ ಕೆಟ್ಟಿ ಗುಮ್ಮಿ
ಜಮ್ಮನೆ ಮೋಹನ ದವಡೆಗೆ ತಟ್ಟಿ 1
ದಂಡಿಸಿರೈ ಮದವೆಂಬುವನ ತಲೆಯ
ಚಂಡ ಹಾರಿಸಿ ಮತ್ತೆ ತುಡಿಗೆ ಮತ್ಸರನ
ಬಿಡದೆ ಹೆಂಡಿರು ಮಕ್ಕಳಸೆರೆಯೊಳಗಿಕ್ಕಿ 2
ಅರಿಗಳನರುವರ ಜಯಿಸಿ ಸದ್ಗುರುವಿನ
ಕರುಣ ಕಟಾಕ್ಷವ ಧರಿಸಿ
ಪರಮಾತ್ಮ ಪರಿಪೂರ್ಣನೆನಿಸಿ
ಹರಿಸೂನು ಕೋಣೆ ಲಕ್ಷ್ಮೀಶನ ಸ್ಮರಿಸಿ 3