ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಯೆ ಕೇಳೆನ್ನ ಬಿನ್ನಪವ ಬಲು ಮಾಯ ಕಾರನು ಕೃಷ್ಣ ಮಾಡಿದೊಳಿಗವ ಪ ಮಕ್ಕಳೂಳಿಗವ ತಾಯ್ಗಳಿಗೆ ಹೇಳ ತಕ್ಕುದು ನೀತಿ ಕೇಳವ್ವ ನಿಮ್ಮಡಿಗೆ ಠಕ್ಕನ ದೆಸೆಯಿಂದ ದಣುಕೊಂಬುದೆಮಗೆ 1 ಬೆಳಗು ದೋರದ ಮುನ್ನ ಬರುವ ಕೃಷ್ಣ ನೆಲುವಿನ ಪಾಲ್ಬೆಣ್ಣೆಗಳ ಕದ್ದು ಮೆಲುವ ನಿಲುಕದಿದ್ದರೆ ಕಲ್ಲಲಿಡುವ ಒಳ ಹೊರಗೆಲ್ಲ ಕ್ಷೀರ ಸಮುದ್ರವ ಕರೆವ 2 ಉಂಡುದ ಕಳಲುವರಲ್ಲ ನೆಲನುಂಡು ಕೆಟುದು ಪಾಲು ಬೆಣ್ಣೆಗಳೆಲ್ಲ ಮೊಸರ ಬಾಂಢವೆಂದರೆ ಬರಲೊಲ್ಲ ಇವನ ಕಂಡೆನೆಂದರೆ ಸುಳುಹನೆ ಕಾಣಲಿಲ್ಲ 3 ಹೆಣ್ಣ ಮಕ್ಕಳನಿರಗೊಡನು ಬಲು ಬಣ್ಣಿಸಿ ಕರೆದು ಮುದ್ದಿಸಿ ಆಡುತಿಹನು ಚಿಣ್ಣರಂದದಿ ಕಾಣುತಿಹನು ತೊಂಡೆ ವೆಣ್ದಟಿಯ ನಗಲಿಸಿ ನೋಡಿ ನಸುನಗುತಿಹನು 4 ಆಸೆ ನಮಗೆ ಊರೊಳಿಲ್ಲ ಪರ ದೇಶಕ್ಕಾದರೂ ಹೋಗಿ ಜೀವಿಪೆವೆಲ್ಲ ಬೇಸರಾಯಿತು ನಿಮಗೆಲ್ಲ ನಮ್ಮ ಪೋಕ್ಷಿಸುತಿಹ ಲಕ್ಷ್ಮೀರಮಣನೆ ಬಲ್ಲ 5
--------------
ಕವಿ ಪರಮದೇವದಾಸರು