ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪ ಪ ಮುಂದಕೆ ನಿಮ್ಮ ಮನೆಗೆ ಬಾರನಮ್ಮಅ ಮಗುವು ಬಲ್ಲುದೆ ಇಷ್ಟು ಬೆಣ್ಣೆಯ ಕದ್ದರೆಬಿಗಿಯ ಬಹುದೇ ಶ್ರೀ ಚರಣವನುಅಗಣಿತ ಮಹಿಮನ ಅಂಜಿಸಲೇಕಮ್ಮಬಗೆಯ ಬಾರದೆ ನಿಮ್ಮ ಮಕ್ಕಳಂತೆ 1 ಹಸುಮಗುವನು ಕಂಡು ಮುದ್ದಿಸಲೊಲ್ಲದೆಹುಸಿಗ ಕಳ್ಳನೆಂದು ಕಟ್ಟುವಿರಿವಸುಧೆಯೊಳಗೆ ನಾನೊಬ್ಬಳೆ ಪಡೆದೆನೆ ನಿಮ್ಮಹಸು ಮಗುವಿನಂತೆ ಭಾವಿಸಬಾರದೆ 2 ಎಷ್ಟು ಸಾರಿಯು ನಾ ಬೇಡವೆಂದರೆ ಕೇಳದುಷ್ಟ ಮಕ್ಕಳ ಕೂಡೆ ಒಡನಾಟವಕಟ್ಟಿದ ನೆಲುವಿನ ಬೆಣ್ಣೆಯನೀವೆನುಬಿಟ್ಟು ಕಳುಹಿರಮ್ಮ ಆದಿಕೇಶವನ 3
--------------
ಕನಕದಾಸ
ಶ್ರೀ ಇಭರಾಮಪುರ ಕೃಷ್ಣಾಚಾರ್ಯರ ಸ್ತೋತ್ರ (ಅಪ್ಪಾವರು) 140 ಇಭರಾಮಪುರ ಅಪ್ಪ ಸೌಭಾಗ್ಯದಾಯಕರೇ | ಶುಭನಾಮ ಶ್ರೀ ಕೃಷ್ಣಾಚಾರ್ಯರೇ ನಮಸ್ತೇ || ಇಭರಾಜ ವರದನಿಗು ದ್ರುಪದಾತ್ಮಜಾಪತಿಗು | ಶುಭಚರಿತ ರಾಘವೇಂದ್ರಾರ್ಯರಿಗು ಪ್ರಿಯ ಪ ಶ್ರೀರಾಮನರಹರಿ ಶ್ರೀಕರನಾರಾಯಣ | ವರಾಹ ಹಯಶೀರ್ಷ ಶ್ರೀಕೃಷ್ಣನ ಪೂರ್ಣಾ || ನುಗ್ರಹಕೆ ಪೂರ್ಣಪಾತ್ರರೇ ನಿಮ್ಮ ಚರಣ | ಅರವಿಂದದಲಿ ನಾನು ಶರಣು ಶರಣಾದೆ 1 ಪಂಚಮುಖ ಹನುಮಂತ ನರಸಿಂಹ ಗರುಡ ವರಾಹ ಹಯವದನ || ಈ ಅಂಜನಾಸುತನನ್ನು ತತ್ ಅಂತಸ್ಥ | ಪಂಚರೂಪ ಶ್ರೀಶನ್ನ ಪೂಜಿಪಮಹಂತ 2 ಅಪ್ಪಾವರೆಂದು ಪ್ರೇಮದಿ ಕರೆಸಿಕೊಂಡು ಅಪ್ಪಮಕ್ಕಳಂತೆ ಕಾಯ್ದಿರಿ ಜನರ || ಅಪ್ಪಾ ಎಂದೀಗಲೂ ಸ್ಮರಿಸಿದರೂ ನಿಮ್ಮ ಸಹ ಶ್ರೀಪ ತಿಮ್ಮಪ್ಪ ಬಂದೆಮ್ಮನು ಕಾಯ್ವ 3 ಮೇಲಿಂದ ಬಿದ್ದವನ್ನ ದೂರ ಇದ್ದರೂ ಕಾಯ್ದು ತಾಳಿಗೋರೂಪ ಪಾದಜ ಧಾನ್ಯ ಉಂಡು || ಜಲದಿಂದ ವಿಪ್ರತಮ ಭಕ್ತವರನನ್ನ ಕಾಯ್ದು | ಜಲಜನಾಭನ ಗಾಯಕನೆಂದು ಆಶಿಸಿದಿರಿ 4 ಬೊಮ್ಮನ ಪಿತ `ಶ್ರೀ ಪ್ರಸನ್ನ ಶ್ರೀನಿವಾಸನಲಿ' ಪ್ರೇಮ ಅಚ್ಛಿನ್ನ ಭಕ್ತಿ ನಿಮಗೆ ದ್ವಿಜವರರೆ || ನಿಮ್ಮವನು ಭುವಿಯಲ್ಲಿ ತೋರಿಹ ಎನ್ನನ್ನು ಪ್ರೇಮಾನುಗ್ರಹದಯದಿ ಪಾಲಿಪುದು ಶರಣು 5 ಪ || ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಕೃಷ್ಣಸಂಕೀರ್ತನೆ ಅಕ್ಕ ನಂದಗೋಪನ ಅರಮನೆಯೊಳಗೊಬ್ಬಅಕ್ರೂರ ಬಂದನಂತೆಹೊಕ್ಕು ಬಳಸಲಿಲ್ಲ ಹುಸಿಯನಾಡುವಳಲ್ಲಇಕ್ಕೋ ಬಾಗಿಲಮುಂದೆ ಈಗ ರಥವ ಕಂಡೆಪ. ಮಧುರಾಪಟ್ಟಣವಂತೆ ಮಾವನ ಮನೆಯಂತೆನದಿಯ ದಾಟಲಿಬೇಕಂತೆಎದುರು ದಾರಿಲ್ಲವಂತೆ ಏನೆಂಬೆ ಏಣಾಕ್ಷಿಉದಯದಲ್ಲಿ ಪಯಣವಂತೆ ಒಳ್ಳೆಯ ವೇಳೆಯಂತೆ1 ಮಲ್ಲರ ಕೂಟವಂತೆ ಮತ್ತೆ ಕಾಳಗವಂತೆಬಲ್ಲಿದ ಗಜಗಳಂತೆಬಿಲ್ಲಹಬ್ಬವಂತೆ ಬೀದಿ ಶೃಂಗಾರವಂತೆಅಲ್ಲಿ ತಾಯಿ[ತಂದೆಯರ]ಕಾಲಿಗೆ ನಿಗಡವಂತೆ 2 ಅಲ್ಲಿ ಹುಟ್ಟಿದನಂತೆ ಅರಸಿನ ಮಗನಂತೆಇಲ್ಲಿಗೆ ಬಂದನಂತೆಎಲ್ಲ ಕಪಟವಂತೆ ಎಂದೂ ಹೀಗಿಲ್ಲವಂತೆನಿಲ್ಲದೆ ಯಶೋದೆಯ ಕಣ್ಣಲುದಕವಂತೆ3 ಮತ್ತೆ ಪಾಂಡವರಂತೆ ಮೋಹದ ಸೋದರರಂತೆಅತ್ತೆಯ ಮಕ್ಕಳಂತೆಸುತ್ತ ಶತ್ರುಗಳಂತೆ ಸಕಲ ಕಾರ್ಯಗಳಂತೆಚಿತ್ತಜನಯ್ಯನ ಚಿತ್ತವೆರಡಾದುವಂತೆ4 ತಾಳಲಾರೆವು ನಾವು ತಾಟಂಕ ಹಯವದನಬಾಲಕನಗಲಿದನೆನೀಲವೇಣಿಯರೆಲ್ಲ ನಾಳೆ ಉದಯದಲ್ಲಿಆಲೋಚನೆ ಮಾಡದೆ ಆಣೆಯಿಕ್ಕಿ ತಡೆವ 5 * ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ಇದೆ.
--------------
ವಾದಿರಾಜ
ಕೃಷ್ಣಲೀಲೆಅಕ್ಕ ನಂದಗೋಪನ ಅರಮನೆಯೊಳಗೊಬ್ಬ |ಅಕ್ರೂರ ಬಂದನಂತೆ ಪಹೊಕ್ಕು ಬಳಕೆಯಿಲ್ಲ ಹೊಸಬನು ಇವನಂತೆ |ಇಕ್ಕೋ ಬಾಗಿಲ ಮುಂದೆ ಈಗ ರಥವ ಕಂಡೆ ಅ.ಪಮಧುರಾ ಪಟ್ಟಣವಂತೆ ಮಾವನ ಮನೆಯಂತೆ |ನದಿಯ ದಾಟಲುಬೇಕಂತೆ ||ಎದುರು ಅರಿವಿಲ್ಲದಂತೆ ಏನೆಂಬೆ ಏಣಾಕ್ಷಿ |ಉದಯದಿ ಪಯಣವಂತೆ 1ಒಳ್ಳೆ ವೇಳೆಗಳಂತೆ ಬಿಲ್ಲುಹಬ್ಬಗಳಂತೆ |ಎಲ್ಲಾ ಬೀದಿ ಸಿಂಗರವಂತೆ ||ಮಲ್ಲರ ಕೂಟವಂತೆ ಮತ್ತೆ ಕಾಳಗವಂತೆ |ಅಲ್ಲೆ ತಾಯ್ತಂದೆಗಳ ಕಾಲಿಗೆ ನಿಗಳವಂತೆ 2ಮತ್ತೆ ಪಾಂಡವರಂತೆ ಮೋಹದ ಸೋದರರಂತೆ |ಅತ್ತೆಯ ಮಕ್ಕಳಂತೆ ||ಸುತ್ತ ಶತ್ರುಗಳಂತೆ ಸಕಲ ಕಾರ್ಯಗಳಂತೆ |ಚಿತ್ತಜನಯ್ಯನ ಚಿತ್ತ ಎರಡಾಯ್ತಂತೆ 3ಅಲ್ಲಿ ಪುಟ್ಟಿದನಂತೆ ಅರಸನಳಿಯನಂತೆ |ಇಲ್ಲಿಗೆ ಬಂದನಂತೆ ||ಕಳ್ಳಕಪಟನಂತೆ ಎಂದಿಗೂ ಹೀಗಂತೆ |ನಿಲ್ಲದೆ ಯಶೋದೆಗೆ ಕಣ್ಣ ನೀರಂತೆ 4ತಾಳಲಾರೆವು ನಾವು ಪುರಂದರವಿಠಲನ |ಕಾಣದೆ ನಿಲಲಾರೆವೆ ||ಕಾಲದಲೊಂದಾಗಿ ಕಾಮಿನಿಯರು ಕೂಡಿ |ಆಲಸ್ಯವಿಲ್ಲದೆ ಆಣೆಯಿಡುವ ಬನ್ನಿ
--------------
ಪುರಂದರದಾಸರು
ಗೋಪಿಹೇಳೆ ರಂಗಗೆ ಬುದ್ಧಿ ಪಗೋಪಿಹೇಳೆ ರಂಗಯ್ಯಗೆ ಬುದ್ಧಿ ಪುರದೊಳು |ರಾಪು ಮಾಡುವದು ವೆಗ್ಗಳವಮ್ಮ ಅ.ಪ.ಪೋರರ ಒಡಗೂಡಿ ಬಂದು ಎಲ್ಲರು ನೋಡಸೀರೆಯಸೆರಗುಪಿಡಿವರೇನೇ ||ಜಾರೆ ಹೆಂಗಳೆರಾದರೊಳ್ಳತು ತಾಂ ತಡವಲುಈ ರೀತಿಯೆ ಪತಿಯಿದ್ದವರ ಕೂಡ 1ಹಿರಿಯಣ್ಣಗಿಟ್ಟಿದ್ದ ಮೀಸಲ ತುಪ್ಪವಸುರಿದು ಗಡಿಗೆ ವಡದೋಡಿದ |ಗೋಪಿ||ಥರವೆ ನಿಮ್ಮಮ್ಮನಲ್ಲಿಗೆ ಬಾರೋ ಎಂದರೆಸೆರಗ ಕೊಸರಿಮಾನಕೊಂಬನೆ | ಗೋಪಿ 2ಕತ್ತಲೊಳಗೆ ಮಕ್ಕಳಂತೆ ಸಣ್ಣವನಾಗಿಹತ್ತಿಲಿ ಬಂದೊರಗುವನಮ್ಮ |ಗೋಪಿ||ಇತ್ತತ್ತ ಬಾ ಕಂದಯೆಂದಪ್ಪಿಕೊಳಲವಕೃತ್ಯವ ಮಾಡಿ ಓಡುವನಮ್ಮ | ಗೋಪಿ 3ಆಕಳ ಮೊಲೆಯುಂಡು ತರುವಾಯ ಕರುಬಿಟ್ಟುತಾ ಕೂಗುವನೆ ಕರಕೊಳಿರೆಂದು |ಗೋಪಿ||ಗೋಕುಲದೊಳು ಬಹು ದಿವಸವಾಯಿತು ದುಡ್ಡುತೂಕ ಕ್ಷೀರವಮಾರಕಾಣೆವೇ | ಗೋಪಿ 4ಬಚ್ಚಲೊಳಗೆ ಪ್ರಾಯದವಳು ಕುಳಿತು ಎಣ್ಣೆಹಚ್ಚಿಕೊಂಡೆರಕೊಳ್ಳುತಿದ್ದೆವೆ |ಗೋಪಿ||ಎಚ್ಚರಿಸದೆ ಬಂದು ಎದುರಿಗೆ ನಿಲ್ಲುವಹುಚ್ಚನೆ ಬಹು ಜಾಲಗಾರನು | ಗೋಪಿ 5ಪುರುಷಗೆ ಸಂಶಯ ನಮ್ಮ ಮನೆಗೆ ಕೃಷ್ಣಬರುವನೆಂಬು ಮಜ್ಜನಕೆ ಜಲ |ಗೋಪಿ||ಬೆರಸಿಟ್ಟರೆಲ್ಲವು ಚೆಲ್ಲಿ ಪೋಗುವಗಂಡಕರೆಕರೆಮಾಡುವ ಪರಿಪರಿ | ಗೋಪಿ 6ಪೋಗಲಿನಿತೂ ಮುಂದೆ ಪ್ರಾಣೇಶ ವಿಠಲಗೆಹೀಗಿರುಯೆಂದು ನೀ ಪೇಳಮ್ಮಾ |ಗೋಪಿ||ಈಗುಸುರಿದ ಮಾತು ಸರಿಬಾರದಿದ್ದರೆಸಾಗಿರೆಂದಪ್ಪಣೆ ಕೊಡಿರೆಮ್ಮ | ಗೋಪಿ 7
--------------
ಪ್ರಾಣೇಶದಾಸರು