ಪಕ್ಷಿ ಬಂದಿದೆ ಗಂಡಭೇರುಂಡ - ತನ್ನಕುಕ್ಷಿಯೊಳು ಈರೇಳು ಜಗವನಿಂಬಿಟ್ಟಂಥ ಪ
ಜಾತಿ ಸೂತಕವೆಂಬ ತ್ರಿಮಲಕ್ಕೆ ಶೂಲದಂತಿಹ ಪರವಸ್ತು ಅ
ತಿರುಮಂತ್ರೋದಯವೆಂಬಾಸನವನೆ ಪೊತ್ತು ತಾಹರುಷದಿಂದ ವೈಷ್ಣವರೆಡೆಯ ಪಾಡಿಪರವ ತೋರುವೆನೆಂದು ಪಾಕವನೆತ್ತುತಾಹರಿಹರ ಬ್ರಹ್ಮಾದಿಗಳ ಪುಟ್ಟಿಸಿದಂಥ1
ಅಕಾರ ಉಕಾರ ಮಕಾರ ಸಾಕಾರದಿಂದಪರಮ ರೂಪವ ತಾಳಿಆಕಾರ ಕ್ರಿಯಾ ನಾಮ ಮಕಾರವನುಓಂಕಾರದಿಂದ ಪುಟ್ಟಿಸಿದಂಥ ಪರವಸ್ತು 2
ಪತಿ ತಿರುವಕೋವಲೂರಿನೊಳಿರುವಂಥಾದಿಕೇಶವರಾಯ ತಾನಾದ ಪರವಸ್ತು 3