ಏಕೆ ಪೋಗುವೆ ರಂಗಾ, ರಂಗಯ್ಯ ರಂಗ ಪ
ಏಕಾಂತದೊಳು ಪೇಳ್ವ ವಾಕ್ಕುಗಳನು ಕೇಳಿ ಅ.ಪ
ಮುನಿಸತಿ ಶಿಲೆಯಾಗಿ ವನಜನಾಭಾಯೆಂದು
ನೆನೆಯುತಲಿಲ್ಲವೋ ಮನ ಮೋಹನಾ
ತನಯ ಪ್ರಹ್ಲಾದ ತಾ ಜನಕಾ ಬಾರೆನಲಿಲ್ಲ 1
ದುರುಳ ಮಕರಿಯಿಂದೆ
ಪರಿತಾಪವಾಂತಿಲ್ಲ ಸ್ಮರಿಸಲಿಲ್ಲ
ದುರುಳ ಕದ್ದೊಯ್ಯಲಿಲ್ಲ
ಸರಸಿಜಾನನನೀಗ ಚರಣಕೆರಗಲಿಲ್ಲ 2
ಹದಿನಾರು ಸಾವಿರ ಸುದತೀ ಮಣಿಯರೆಲ್ಲ
ಮದನಾಂಗ ಬಾರೆಂದು ಕರೆಯಲಿಲ್ಲ
ಉದಧಿ ನಿನ್ನರಸಲಿಲ್ಲ
ಪದುಳದೆ ಬಲಿ ನಿನ್ನ ಚದುರ ಬಾರೆನಲಿಲ್ಲ 3
ಕರದೆ ಕೊಡಲಿಯ ಪಿಡಿದು ಮರದೆ ನಿ[ಲ್ಲೆನುತಲಿ]
ನೂರಾರು ಕೈಯವ ಕರೆಯಲಿಲ್ಲ
ಹರನೀಗ ತ್ರಿಪುರರ ತರಿಯೆ ಬಾರೆನಲಿಲ್ಲ
ವರತುರುಗವೇರಿ ಧುರಕೆ ಬಾರೆಂಬರಿಲ್ಲ4
ಕಾಮಿತವೀಯೆಂದು ಪ್ರೇಮದಿ ಭಜಿಸುವ
ಪಾಮರರಿಲ್ಲಿಗೇ ಬರುತಿರ್ಪರೋ
ಶಾಮನೆ ಮಾಂಗಿರಿಗಾಮಿಯಾಗಿಹೆಯೇಕೆ
ಕಾಮಹರನೆ ಬಾರೊ ರಾಮದಾಸಜೀವ 5