ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಲ್ಲೆ ಸಂಪದವನೆಲ್ಲವನು ತೆಗೆದುಕೊ ಚೆಲ್ವ ವೇಲಾಪುರೀಶಾ ಸ್ವಾಮಿ ಪ ಬಲ್ಲವರು ನಿನಗೆ ಸರಿಯಿಲ್ಲೆಂದು ಪೊಗಳುತಿಹ ಸೊಲ್ಲ ನಾ ಕೇಳಲಾರೆ ಸ್ವಾಮಿ ಅ.ಪ ಪೆತ್ತಯ್ಯ ತಿರುಮಲಾರ್ಯರು ವರ್ಣಕರ ಚಕ್ರ ವರ್ತಿಯೆಂಬಾ ಬಿರುದನು ಒತ್ತಿ ಪೊಗಳಿಸಿಕೊಂಡುದೇನಂದದಲಿ ತಿರು ಗುತ್ತಿರ್ದಡೇನು ಭಾಗ್ಯಾ ಮತ್ತದೆನಗಾರ್ಜಿತವೆ ಸತ್ತವರ ಸಂಪದವ- ನತ್ತಲೇ ಕಳುಹಿಕೊಡದೆ ಇತ್ತಪರೆ ನಿನ್ನ ದಾಸನುದಾಸರಿಗೆ ಸೇ ವ್ಯೋತ್ತಮನೆ ಕೆಡಿಸಬೇಡಾ ಸ್ವಾಮಿ 1 ಹರಿಯೆ ನೀ ಒಲಿದೂಳಿಗವನು ಮಾಡಲು ಬಳಿಕ ಕಿರುನುಡಿಯ ಮೀರದಿರಲು ಕರುಣದಿಂದಾಗಾಗ್ಯೆ ಕರೆದುಡುಗೊರೆಯ ಕೊಡಲು ಬಿರುದುಗಳು ಮೆರೆಯುತಿರಲೂ ಸ್ಥಿರವಿಲ್ಲದಷ್ಟ ಮಹದೈಶ್ವರ್ಯವಿರುತಿರಲು ಪಿರಿಯರೆಲ್ಲರು ಪೊಗಳಲೂ ಮೆರೆಯನೇ ಮಿಗೆ ಅಹಂಕರಿಸನೇ ಬೆರೆಯನೇ ನರಕಕಿಳಿಯನೇ ಮರಳಿ ಜನಿಸನೇ ಸ್ವಾಮಿ 2 ಸುಖವಿಲ್ಲ ಸುಖವಿಲ್ಲ ಸುಖವಿಲ್ಲ ಭಾಗ್ಯದಾ ಸಕರೆಯನು ನಾನೊಲ್ಲೆನೂ ಭಕತವತ್ಸಲನೆ ಭಾಗವತಲೋಲುಪನೆ ದುಃ ಖಕೆ ಕಾರಣವಿಲ್ಲವೆ ಅಕಳಂಕ ಚರಿತನೆ ಆದಿನಾರಾಯಣನೆ ಮಕರಧ್ವಜನ ತಾತನೆ ಸುಖವೀಯೊ ವೈಕುಂಠ ವೇಲಾಪುರಾಧೀಶ ಭಕುತಿಯನು ಕೊಟ್ಟು ಸಲಹೊ ಸ್ವಾಮಿ 3
--------------
ಬೇಲೂರು ವೈಕುಂಠದಾಸರು
ಕಾಣದೆ ನಿಲ್ಲಲಾರೆ, ಕಮನೀಯ ಮೂರುತಿಯಪ್ರಾಣೇಶನ ತೋರೆ ಗಿಣಿಯೆ ಪ ಮಾಣಿಕ್ಯ ಪದಕವ ಮನ್ನಿಸಿ ನಿನಗೀವೆಜಾಣೆ ಕೃಷ್ಣನ ತೋರೆ ಗಿಣಿಯೆ ಅ.ಪ. ಮಕರಕುಂಡಲಧರನ ಮಕರಧ್ವಜನ ಪಿತನಮಕುಟ ಭೂಷಣನ ತೋರೆ ಗಿಣಿಯೆಮಕರಾಕ್ಷ ಸಂಹರನ ಮಕರಾರಿ ರಕ್ಷಕನಮಕರ ಶಿಕ್ಷಕನ ತೋರೆ ಗಿಣಿಯೆ 1 ಇಂದು ರವಿಲೋಚನನಇಂದು ನೀ ಕರೆತಾರೆ ಗಿಣಿಯೆಇಂದುಶೇಖರನುತನ ಇಂದಿರೆಯರಸನತಂದು ತೋರೆ ಮುದ್ದುಗಿಣಿಯೆ2 ಒಂದು ನಿಮಿಷವೊಂದು ಯುಗವಾಗಿ ತೋರಿತೆಸೌಂದರ್ಯನ ತೋರೆ ಗಿಣಿಯೆಮಂದಮಾರುತ ಸೋಕೆ ಮರುಳುಗೊಂಡೆನೆ ಎನ್ನಮಂದಿರಕೆ ಕರೆತಾರೆ ಗಿಣಿಯೆ 3 ಕಾಯಜನ ಬಾಣದಲಿ ಕಾಯವೆಲ್ಲವು ಬಹಳಘಾಯವಾಯಿತು ನೋಡೆ ಗಿಣಿಯೆಮಾಯೆಗಳ ಮಾಡದೆ ಮಮತೆಯಿಂದಲಿ ಎನ್ನನಾಯಕನ ಕರೆತಾರೆ ಗಿಣಿಯೆ 4 ಪಂಕಜೋದ್ಭವ ಪಿತನ ಪಂಕಜನಯನನಪಂಕಜನಾಭನ ತೋರೆ ಗಿಣಿಯೆಪಂಕಜಾಕ್ಷ ಸಿರಿಕೃಷ್ಣನ ಪದಪದ್ಮಶಂಕೆಯಿಲ್ಲದೆ ತೋರೆ ಗಿಣಿಯೆ 5
--------------
ವ್ಯಾಸರಾಯರು
ವಾರಿಧಿ ಸುತಿಗೆ ಸಾರ ಸಂಗೀತದಿಂದಲಿ ಪ ಸಕಲ ವಸ್ತುವೆನಿಸಿ ಮುಕುತಿದಾಯಕ ಹರಿಗೆ ಭಕುತಿಯಿಂದಲಿ ಬಿಡದೆ | ಸದಾಪೂಜಿಪ ಸಿರಿಗೆ ವಿಖನ ಸಾದ್ಯಮರ ಗಣಕೆ | ಸುಖ ಕೊಡುವಳಿಗೆ ಮಕರಧ್ವಜನ ಮಾಲೆಯಾದ ರುಕುಮನನುಜಗೆ 1 ಚಾರುಶ್ರಾವಣ ಭಾರ್ಗವ ಶುಭವಾರದ ದಿನದಿ ಭೂರಿ ಭಕ್ತಿ ಭರಿತಳಾಗಿ ನಮಿಸುತ ಮನದಿ ನೀ ಆರಾಧಿಸೆ ಘೋಡಶ ಉಪಚಾರದಿ ಮುದದಿ ಕೋರಿಕೆಯನು ಗರೆಯುವ ವರಲಕ್ಷ್ಮಿಗೆ ಜಯದಿ2 ತಾಮರಸ ಸುಧಾಮಳಾದ ಸೋಮವದನಿಗೆ ಗೋಮಿನಿ ಸೌದಾಮಿನಿ ಸಮ ಕೋಮಲಾಂಗಿಗೆ ಶಾಮಸುಂದರ ಸ್ವಾಮಿಯ ಸುಪ್ರೇಮದ ಸತಿಗೆ ಕಾಮಿತ ಫಲದಾಯಿನಿ ಶ್ರೀ ಭೂಮಿಜೆ ರಮಗೆ3
--------------
ಶಾಮಸುಂದರ ವಿಠಲ