ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆ ವಿಜಯೆ ಜಯಮಂಗಳಂ ಪ ಸಾರಸದಳಹಿತೆ ಸಾರಸಮಹಿತೆ ಮಂಗಳಂ1 ಇಂದು ಸುಮಾಕರೆ ಸಹೋದರಿ ಸುಂದರ ಕಬರಿ ಮಂಗಳಂ 2 ರಾಜರಾಜಾರ್ಚಿತೆ ರಾಜಮುಖಾಂಚಿತೆ ರಾಜಗೃಹಾರ್ಚಿತೆ ರಾಜಿತ ವನಿತೆ ಮಂಗಳಂ 3 ಮಾನವ ವಂದಿತೆ ಧೇನುನಗರ ಹರಿಮಾನಿನಿ ಜನನಿ ಮಂಗಳಂ 4
--------------
ಬೇಟೆರಾಯ ದೀಕ್ಷಿತರು
ಮಂಗಳ ಮುಖ್ಯ ಪ್ರಾಣೇಶಗೆ ಪ ಜಯ ಮಂಗಳ ಶುಭಮಂಗಳ ವಾಯುಕುಮಾರನಿಗೆ ಅ.ಪ ಅಂಜನಾದೇವಿಯ ಕಂದಗೆ ಮಂಗಳಕಂಜಾಕ್ಷ ಹನುಮಂತಗೆ ಮಂಗಳಸಂಜೀವನವ ತಂದಾತಗೆ ಮಂಗಳಸಜ್ಜನ ಪರಿಪಾಲಗೆ ಮಂಗಳ1 ಅತಿ ಬಲವಂತ ಶ್ರೀಭೀಮಗೆ ಮಂಗಳಪ್ರತಿಮಲ್ಲರ ಗೆಲಿದಗೆ ಮಂಗಳಸತಿಯ ಸೀರೆಯ ಸೆಳೆದ ದೈತ್ಯನ ಕೊಂದುಪೃಥ್ವಿ ಮೇಲೆ ಚೆಂಡನಾಡಿದಗೆ 2 ಸೀತಾದೇವಿಯ ಬಾಲಗೆ ಮಂಗಳಶ್ರೀರಾಮನ ಭಂಟಗೆ ಮಂಗಳಗೋಪಾಲ ಕೃಷ್ಣನ ಪೂಜೆಯಮಾಡುವಗುರು ಮಧ್ವ ಮುನಿರಾಯಗೆ ಮಂಗಳ3
--------------
ವ್ಯಾಸರಾಯರು
ಮಂಗಳಂಜಯಮಂಗಳಂ ಪ.ವಾತಸುತ ಹನುಮನ ಒಡೆಯಗೆ ಮಂಗಳದಾತ ಶ್ರೀ ರಘುಪತಿಗೆ ಮಂಗಳ ||ಸೇತುವೆಗಟ್ಟಿದ ರಾಯಗೆ ಮಂಗಳಸೀತಾರಮಣಗೆಶುಭಮಂಗಳ1ಬಿಲ್ಲ ಹಿಡಿದು ಬಲು ಬಿಂಕದ ದೈತ್ಯರಹಲ್ಲ ಮುರಿದವಗೆ ಮಂಗಳ |ಕಲ್ಲಾದಹಲ್ಯೆಯನುದ್ಧಾರ ಮಾಡಿದಬಲ್ಲಿದದಾಶರಥಿಗೆ ಮಂಗಳ2ಹರಧನು ಮುರಿದ ವಿನೋದಿಗೆ ಮಂಗಳವರದ ತಿಮ್ಮಪ್ಪಗೆ ಮಂಗಳ ||ಪುರಂದರವಿಠಲರಾಯಗೆ ಮಂಗಳಸರುವೋತ್ತಮನಿಗೆ ಶುಭಮಂಗಳ 3
--------------
ಪುರಂದರದಾಸರು
ಮಾಧವಾನಂತ ಗೋವಿಂದಗೆ ಮಂಗಳಸಾಧು ಜನರ ಆನಂದಗೆ ಮಂಗಳಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ನೂತನ ಜಲಧರಗಾತ್ರಗೆ ಮಂಗಳ |ಪೀತಾಂಬರಧರ ನಿಜಸೂತ್ರಗೆ ಮಂಗಳ1ಅಂಬುಜನಾಥ ದಾಮೋದರಗೆ ಮಂಗಳಕಂಬುಚಕ್ರಾಬ್ಜ ಗದಾಧರಗೆ ಮಂಗಳ2ಮಂದಹಾಸನ ಲಕ್ಷ್ಮೀಲೋಲಗೆ ಮಂಗಳ |ಕಂದ ಗಿರೀಶ ಪೋಷಿಸುವಗೆ ಮಂಗಳ3
--------------
ಜಕ್ಕಪ್ಪಯ್ಯನವರು
ಶ್ರೀ ಮಹಾಲಕ್ಷ್ಮಿಗೆ ಮಂಗಳಸೋಮಶೇಖರಿ ಬಗಳೆಗೆ ಮಂಗಳಪಭದ್ರಕಾಳಿ ಭವಾನಿ ಶಕ್ತಿಗೆ ಮಂಗಳ ಅತಿಶುಭ್ರ ಕಾಂತಿ ಭುವನೇಶ್ವರಿ ಮಂಗಳಕ್ಷುದ್ರ ಸಂಹಾರಿಣಿ ಶಂಕರಿ ಮಂಗಳ ಅತಿಭದ್ರ ಸುಂದರಿ ಶೋಡಸಿ ಮಂಗಳ1ಶುಂಭಮರ್ದಿನಿ ಭೈರವಿ ಮಂಗಳವಿಶ್ವಕು-ಟುಂಬಿನಿ ಸುರನಂತೆ ಮಂಗಳಕುಂಭಕುಚೇ ಪೀತಾಂಬರಿ ಮಂಗಳ ಶ್ರೀ ವಿ-ಜೃಂಭಿಣಿ ಶಂಕರಿ ಮಂಗಳ2ಆನಂದ ರೂಪಿಣಿ ರೌದ್ರಿಣಿ ಮಂಗಳ ಪೂರ್ಣಜ್ಞಾನ ರೂಪಿಣಿ ಸುಧಾರಸೆ ಮಂಗಳಮೌನಿಯೋಗಿನಿ ಕರಾರ್ಚಿತೆ ಮಂಗಳ ಬಗಳಜ್ಞಾನಿಚಿದಾನಂದಾವಧೂತೇ ಮಂಗಳ3
--------------
ಚಿದಾನಂದ ಅವಧೂತರು
ಸದ್ಗುರುನಾಥಗೆ ಮಂಗಳ ಭಾಸಶತಸೂರ್ಯತೇಜಗೆ ಮಂಗಳನಿರ್ಗುಣ ನಿರ್ವಿಕಾರಗೆ ಮಂಗಳ ಸ್ವಪ್ನಜಾಗೃತಿ ಸುಷುಪ್ತಿ ನಿಗ್ರಹಗೆ ಮಂಗಳಭರ್ಗೋ ದೇವಗೆ ಭಯಂಕರನಿಗೆ ಮಂಗಳ ಅತಿಶೀಘ್ರ ಭಕ್ತರ ಪಾಲಿಪಗೆ ಮಂಗಳ1ನಿತ್ಯನಿರ್ಮಲ ನಿಜಬೋಧಗೆ ಮಂಗಳಘನವಸ್ತು ಸಾಕ್ಷಾತ್ಕಾರನಿಗೆ ಮಂಗಳಸತ್ಯ ಸನಾಥ ಸಾಕ್ಷಿಗೆ ಮಂಗಳಶುದ್ಧ ಚಿತ್ಪ್ರಭಾಗಮ್ಯಗೆ ಮಂಗಳ2ಪರಮಚೈತನ್ಯ ಪರಮೇಶಗೆ ಮಂಗಳ ಸತ್ಯಶರಣ ರಕ್ಷಕ ಯೋಗಿಗೆ ಮಂಗಳಪರಮಆರೂಢಪರಮೇಶಗೆ ಮಂಗಳ ನಿಜಗುರುಚಿದಾನಂದಾವಧೂತಗೆ ಮಂಗಳ3
--------------
ಚಿದಾನಂದ ಅವಧೂತರು