ಒಟ್ಟು 8 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಗೆಯ ಶಿರದಿ ಪೊತ್ತವಗೆಮಂಗಳಪ್ರದಗೆ ಶಂಕರಗೆಪುಂಗವರಾಜವಾಹನಗೆಮಂಗಳಾರತಿಯನೆತ್ತಿರೆ 1 ಪಾಕಾರಿ ಪೂಜಿತಪಾದಗೆಮಾಕಾಂತನೇತ್ರಾರ್ಚಿತಗೆಶ್ರೀಕರಗೇಕೋರುದ್ರಗೆಏಕಾರತಿಯನೆತ್ತಿರೆ 2 ಪಂಚಬಾಣನ ಗೆಲಿದವಗೆ ತ್ರಿಪಂಚನೇತ್ರಗೆ ಪಂಚಮುಖಿಗೆಪಂಚಕೃತ್ಯಾಧೀಶ್ವರಗೇಪಂಚಾರತಿಯನೆತ್ತಿರೆ3 ಕಮಲಸಂಭವನುತಿ ಪಾತ್ರಗೆಕಮಲಾಪ್ತಕೋಪ್ತಕೋಟಿಭಾಸುರಗೆಕಮಲಾಹಿತ ಭೂಷಣಗೆಕಮಲದಾರತಿಯನೆತ್ತಿರೆ 4 ನಾಗೇಂದ್ರಚರ್ಮಾಂಬರಗೆನಾಗೇಂದ್ರ ಹಾರಶೋಭಿತಗೆನಾಗೇಂದ್ರ ಶಯನಸನ್ನುತಗೆನಾಗಾರತಿಯನೆತ್ತಿರೆ 5 ಸರ್ಪಕಂಕಣ ಸದಾಶಿವಗೆಮುಪ್ಪುರವನು ಗೆಲಿದವಗೆಕಪ್ಪು ಗೊರಲಗೆ ಕಾಮದಗೆಕಪ್ಪುರದಾರತಿಯನೆತ್ತಿರೆ 6 ಜಯ ಜಯ ಕೆಳದಿ ಪುರೇಶಜಯ ಜಯ ಶ್ರೀ ಪಾರ್ವತೀಶಜಯ ಜಯ ಶ್ರೀ ರಾಮೇಶ್ವರಜಯವೆಂದಾರತಿಯನೆತ್ತಿರೆ7
--------------
ಕೆಳದಿ ವೆಂಕಣ್ಣ ಕವಿ
ಧನುರ್ಮಾಸದ ಸೇವೆಯ ಗೀತೆ ಧನುರ್ಮಾಸದ ಸೇವೆಯ ನೋಡುವ ಬನ್ನಿ ದಾನವಾಂತಕ ರಂಗನ ಪ. ಶ್ರೇಯೋನಿಧಿಗಳಿಗೆರಗಿ ಶ್ರೀವೇದಾಂತ ಗುರುಗಳಿಗೆ ವಂದಿಸಿ ಶ್ರೀ ಭಾಷ್ಯಕಾರ ಶಠಗೋಪರಿಗೆ ವಂದಿಸಿ ಶ್ರೀರಂಗೋತ್ಸವವ ಸಂಕ್ಷೇಪದಿಂ ಪೇಳುವೆ 1 ಮಾರ್ಗಶಿರ ಮಾಸದಲಿ ಮಹಾನುಭಾವ ಶ್ರೀರಂಗನಾಥನಿಗೆ ಮಹದುತ್ಸವವನ್ನು ನಡೆಸಬೇಕೆನುತಲೆ ಮಹಾಪುರುಷರು ಸಂಕಲ್ಪವ ಮಾಡಿದರು 2 ಕೇಶವ ಮಾಸದಲಿ ಎದ್ದು ದಾಸರು ಮೂರನೆ ಜಾವದಲಿ ಭೂಸುರರಿಗೆ ಎಚ್ಚರವಾಗಬೇಕೆಂದು ಬಾ ರೀಸಿದರು ಭೇರಿ ದುಂದುಭಿ ವಾದ್ಯಗಳ 3 ಕನಕಿ ಸುಜೋತಿ ಹೇಮಾವತಿಯ ಕಪಿಲೆ ಕಾವೇರಿ ತೀರ್ಥದಲಿ ಸ್ನಾನವ ಮಾಡಿ ತೀರ್ಥವ ತಂದು ನೇಮದಿ ನೀಲವರ್ಣನಿಗಭಿಷೇಕವ ಮಾಡಿದರು 4 ಛಳಿಗೆ ಕುಲಾವಿಯನಿಟ್ಟು ಶಾಲುಗಳ ಹೊದಿಸಿ ನಳಿನನಾಭ ರಂಗಗೆ ಪರಿಪರಿ ಪುಷ್ಪದ ಸರಗಳ ಧರಿಸಿಯೆ ಶ್ರೀಮೂರ್ತಿಯ ಸರವನು ಧರಿಸಿದರಾಗ 5 ತಾಪಹರವಾದ ಸೂಕ್ಷ್ಮದ ದಿವ್ಯ ಧೂಪವನು ಬೆಳಗಿದರು ವ್ಯಾಪಿಸುವ ತಿಮಿರವ ಪರಿಹರಿಸಿ ರಂಜಿಸುವ ದೀಪವ ಬೆಳಗಿದರು ಶ್ರೀಪತಿಗೆ 6 ಋಗ್ವೇದ ಯಜುರ್ವೇದವು ಸಾ ಮವೇದ ಅಥರ್ವಣವೇದಂಗಳು ದ್ರಾವಿಡವೇದ ಪುರಾಣಶಾಸ್ತ್ರಗಳನು ಬಾಗಿ ಲಾ ವೊಳಗೆ ನಿಂತು ಭಕ್ತರು ಪೇಳಿದರು 7 ವಾರಾಂಗನೆಯರಾಗ ವೈಯ್ಯಾರದಿಂದ ಆರತಿಗಳನೆ ತಂದು ವಾರಿಜನಾಭಗೆ ನೇಮದಿಂದಲೆ ಗುಂ ಭಾರತಿಗಳನೆತ್ತಿ ನೈವೇದ್ಯವ ತಂದರು 8 ಮುದ್ಗಾನ್ನ ಘಮಘಮಿಸುವ ಪಾಯಸ ದಧ್ಯೋದನಗಳು ಪರಿಪರಿ ಶಾಕಪಾಕವು ಆ ದಿವ್ಯ ಭಕ್ಷ್ಯನೈವೇದ್ಯವ ಪರಮಪುರುಷಗೆ [ಆದ್ಯರು] ಆರೋಗಣೆ ಮಾಡಿದರು 9 ಕಳಿಯಡಿಕೆ ಬಿಳಿಯೆಲೆಯು ಕರ್ಪೂರದ ಹಿಟ್ಟಿನ ಮಂಗಳಾರತಿಯನೆತ್ತಿದರಾಗ 10 ಆ ಮಹಾ ಶ್ರೀನಿವಾಸ ರಂಗ ನೈವೇದ್ಯವ ಶ್ರೀಮಧ್ರಾಮಾನುಜರ ಮತದಿ ನೇಮದಲಿ ವಿನಿಯೋಗವ ಮಾಡಲು ಪಾವ ನಾಮಾದೆವೆಂದೆನುತ ಪೋದರು ಎಲ್ಲ 11
--------------
ಯದುಗಿರಿಯಮ್ಮ
ಬಾಗಿಲನು ತೆಗಿಸಿ ದರುಶನವ ಕರುಣಿಸಿದೆಯೋ ಭೋಗ ನರಸಿಂಹಸ್ವಾಮಿ ಪ. ನಾಗಶಯನನೆ ದೇವ ಕರಿಗಿರಿ ನಿಲಯ ಹರಿ ಯೋಗಿ ಶ್ರೀಗುರು ಹೃದಯ ನಿಲಯ ಅ.ಪ. ಸಿರಿಯನ್ನೆ ತೊಡೆಯ ಮೇಲೆರಿಸಿಕೊಂಡು ನಗುತ ಪರಿಪರೀ ಸೇವೆಯನು ಭಕ್ತರಿಂ ಕೊಳುತ ಪರಮಾತ್ಮ ಪಂಚಾಮೃತದ ಅಭಿಷೇಕವನು ಎರೆಯುತಿರೆ ಕಂಡು ನಾ ಹರುಷಪಟ್ಟೆನೊ ಸ್ವಾಮಿ 1 ಸುರನದಿಯ ಜಲ ತಂದು ನಿನಗಭಿಷೇಕವನೆ ಎರೆದು ಪರಿಪರಿಯ ಪೂಜೆ ಅಲಂಕಾರವನೆ ಮಾಡಿ ತರತರದ ಷಡ್ರಸವ ಭೋಜನವಗೈಸುತಲಿ ವರ ಮಂಗಳಾರತಿಯನೆತ್ತಿದುದ ಕಂಡೆ 2 ಘನ್ನ ಮಹಿಮೆನೆ ಸ್ವಾಮಿ ಎನ್ನ ಬಿನ್ನಪ ಕೇಳಿ ಮನ್ನಿಸಿ ದರುಶನವ ಇನ್ನು ಕರುಣಿಸಿದೆ ನಿನ್ನ ಸಮರಿನ್ಯಾರೊ ಪನ್ನಗಶಯನನೆ ಧನ್ಯರೋ ನಿನ್ನ ಪದವ ನಂಬಿದವರು3 ಶಾಂತರೂಪವ ಧರಿಸಿ ಶಾಂತ ಮೂರುತಿ ಎನಿಸಿ ಅಂತರಂಗದಿ ನಿನ್ನ ಧ್ಯಾನಿಸುವರ ಸಂತೋಷಪಡಿಸುತಲಿ ಕಾಯ್ವ ಕಮಲಾಕಾಂತ ಅಂತರಂಗವ ತಿಳಿದು ಸಂತೈಸೊ ಎನ್ನ 4 ಪಾಪಿ ದೈತ್ಯನ ಕೊಂದು ಕೋಪಿಸದೆ ಭಕ್ತನೊಳು ಕಾಪಾಡಿದೆಯೊ ಪರಮಪ್ರೇಮದಿಂದ ಗೋಪಾಲಕೃಷ್ಣವಿಠ್ಠಲನೆ ಅದರಂದದಲಿ ಕಾಪಾಡೊ ಭಕ್ತರನು ಹೃದಯದಲಿ ನೆಲಸಿ 5
--------------
ಅಂಬಾಬಾಯಿ
ಮಂಗಳದೇವಿಯರರಸಗೆ ತುಂಗಮಹಿಮ ತ್ರಿವಿಕ್ರಮಗೆ ಅಂಗನೆಯರು ಸಿರಿರಂಗಗಾರತಿಯನೆತ್ತಿದರೆ ಪ. ಶ್ರೀರುಕುಮಿಣಿ ಮೊದಲಾದ ನಾರಿಯರೆಲ್ಲರು ನೆರೆದು ವಾರಿಜದಳಲೋಚನಗಾರತಿಯನೆತ್ತಿದರೆ 1 ಮುತ್ತಿನ ಹರಿವಾಣದಲಿ ರತ್ನದ ಸಾಲ್ಗಳ ನೆರಪಿ ಚಿತ್ತಜನಯ್ಯಗೆ ಮುತ್ತ್ತಿನಾರತಿಯನೆತ್ತಿದÀರೆ 2 ಚಿನ್ನದ ಹರಿವಾಣದಲಿ ರನ್ನದ ಸಾಲ್ಗಳ ನೆರಪಿ ಚೆನ್ನಕೇಶವನಿಗೆ ಚಿನ್ನದಾರತಿಯನೆತ್ತಿದರೆ 3 ಹೃದಯದ ತಮವ ಗೆಲುವಗೆ ಸದುಗತಿಪಥವ ತೋರುವಗೆ ಸುದತಿಯರೆಲ್ಲರು ಮಂಗಳಾರತಿಯನೆತ್ತಿದರೆ 4 ಚಂದದ ಭೂಷಣಮಣಿಯೊಳು ನಂದಾದೀಪಗಳೆಲ್ಲ ಹೊಳೆಯೆ ಒಂದನಂತವ ಮಾಡಿಕೊಂಬಗಾರತಿಯನೆತ್ತಿದರೆ 5 ಕಂದರ್ಪಕೋಟಿಲಾವಣ್ಯಗೆ ಸೌಂದರ್ಯವಾದ ಮೂರುತಿಗೆ ಇಂದುಮುಖಿಯರೆಲ್ಲ ಮಂಗಳಾರತಿಯನೆತ್ತಿದರೆ 6 ಅಗಣಿತ ಗುಣಸಾಗರಗೆ ನಿಗಮವಂದಿತ ವೈಭವಗೆ ಅಘಕುಲದೂರಗೆ ಮಂಗಳಾರತಿಯೆನೆತ್ತಿದರೆ 7 ನಳಿತೋಳ್ಗಳ ನಸುನಗೆಯ ಹೊಳೆವ ಕಡಗ ಕಂಕಣದ ಸುಲಲಿತ ಕಾಂತಿಗೆ ಮಂಗಳಾರತಿಯೆತ್ತಿದರೆ 8 ಶೇಷವಂದಿತಪದಗೆ ಸುರೇಖಾದಿಗಳೊಡೆಯನಿಗೆ ಭಾಸುರಸುರಮಯಪೀಠಗಾರತಿಯನೆತ್ತಿದರೆ9 ಶ್ರೀಸತಿಯಪ್ಪಿಕೊಂಡಿಪ್ಪಗೆ ವಾಸುದೇವಾದಿವಿಗ್ರಹಗೆ ಕೇಶವ ನಾರಾಯಣಗಾರತಿಯನೆತ್ತಿದರೆ 10 ನಿಖಿಳ ಖಳರ ಸೀಳ್ದನಿಗೆ ಅಕುತೋಭಯನಿಗೆ ಮಂಗಳಾರತಿಯನೆತ್ತಿದರೆ 11 ಕೂರ್ಮ ವರಾಹನಿಗೆ ಕುತ್ಸಿತರೊಲ್ಲದ ಹರಿಗೆ ಚಿತ್ಸುಖರೂಪಗೆ ಮಂಗಳಾರತಿಯನೆತ್ತಿದರೆ12 ಶಂಕೆಯಿಲ್ಲದ ಹಯವದನಗೆ ಕಿಂಕರವರದ ಶ್ರೀಹರಿಗೆ ಪಂಕಜಮುಖಿಯರು ಮಂಗಳಾರತಿಯೆತ್ತಿದರೆ 13
--------------
ವಾದಿರಾಜ
ಶ್ರೀದೇವಿಯಂ ಭಕ್ತರೊಡನೆ ಶುಭಕಾಯವೊಲಿದು ಆಡಿದನುಯ್ಯಾಲ ಪ ನೀಲಿಮಾಣಿಕದ ಮಂಟಪವ ಕಟ್ಟಿ ಮುತ್ತಿನ ಸರಪಣಿಗಳನೆ ಬಿಗಿಸಿ ಮೇಲುಕಟ್ಟುಗಳ ಹಾಸಿ ಮಲ್ಲಿಗೆಮಾಲೆಗಳ ಶೃಂಗರಿಸಿ 1 ಪಟಹ ನಿಸ್ಸಾಳ ಭೇರಿ ಕೊಳಲು ತಮಟವಾದ್ಯ ಮೊಳಗುತಿರಲು ಕುಟಿಲಕುಂತಲೆಯರೊಡನೆ ಆದಿಪತಿ ವಿಠಲನಾಡಿದ 2 ಚಂದ್ರಮನ ಪೋಲ್ವ ಮುಖದಿ ಫಣಿಯೊಳು ಶೌನಕಾದಿಗಳು ಸೇರಿ [ಅಂದದಿ] ಸ್ತುತಿಸೆ ಕ್ಷೀರಾಬ್ಧಿಶಯನನಾಡಿದ3 ಭೇರಿ ಶಂಖಗಳ ದ್ವನಿಯ ದುಂದುಭಿಯ ಭೋರಿಡುವ ಜಯರವಗಳ ನಾರಿಯರು ಶೋಭನಗಳ ಪಾಡುತ್ತಿರೆ ಧೀರನಾಡಿದ 4 ವೇದಚೋರನ ತರಿದು ಆದಿಮೂರುತಿ ವರದನ ವಿ- ನೋದದಿ ತೂಗಿದರು ರವಿಸೌಂದರಿಯನಾಡಿದ 5 ನೀಲವೇಣಿಯರು ಪಾಡುತ ತೂಗಿದರು ಗೋಪಾಲನಾಡಿದ 6 ಪರಶುಧರನೆನಿಸಿ ಹರನ ಶ್ರೀರಾಮಚಂದ್ರ ಕರುಣಾ ವಾರಿಧಿ ಕೃಷ್ಣನ ತೂಗಿದರು ವರಸತಿಯರು 7 ಚೋಜಿಗದಮತ್ಪುರದಸತಿಯರನುವೋಜಿಗಲಿಸಿದಭೌದ್ಧನಾ ತೇಜಿವಾಹನಕಲ್ಕ್ಯನಾ ತೂಗಿದರು ರಾಜೀವನೇತ್ರೆಯರು ಪಾಡುತ 8 ಚಿತ್ತಜೌಘ ಮನಮನದ ಚದುರೆಯರು ಮುತ್ತು ಸರಗಳನೆ ಧರಿಸಿ ದತ್ಯಂತ ಮೋಹದಿಂದ ತೂಗಿದರು ಹಸ್ತಿನೀಕಾಮಿನಿಯರು9 ಮತ್ತೆಸಾರಂಗವೆನಲುನಡೆಯುತಲಿವಿಸ್ತರಿಸಿಕುಚಯುಗಳದಿ ಕಸ್ತೂರಿಯ ಗಂಧವೆಸೆಯೆ ತೂಗಿದರು ಚಿತ್ತಿನೀಜಾತದವರು 10 ಕುಂಕುಮಾಂಕಿತ ಚದುರೆಯರಲಂಕರಿಸಿ ಭೂಷಣಗಳ ಶಂಕರನಸಖನ ಪಾಡಿ ತೂಗಿದರು ಶಂಖಿನೀಕಾಮಿನಿಯರು 11 ಕದಪುಗಳ ಕಾಂತಿಹೊಳೆಯೆ ಮೊಗಸಿರಿಯಪದುಮವನು ಪೋಲ್ವಂದ ಯದುವೀರನನು ಪಾಡುತತೂಗಿದರು ಕುಮುದಿನೀಕಾಮಿನಿಯರು 12 ಅಂಗನಮಣಿ ಪಾರ್ವತಿ ಸರಸ್ವತಿಯರು ರಂಗುಮಾಣಿಕರತ್ನದ ಮಂಗಳಾರತಿಯನೆತ್ತಿ ತೂಗಿದರು ಗಂಗೆಯನು ಪಡೆದಯ್ಯನ 13 ಚಿಂತಿತಾರ್ಥವ ಸಲಿಸುವ ಮುದ್ದುವೆಂಕಟೇಶನು ತಾನೆನಿಸುವ ಪಿತ ದೇವಪುರದ ಶ್ರೀಲಕ್ಷ್ಮೀಕಾಂತನಾಡಿದನುಯ್ಯಾಲಾ 14
--------------
ಕವಿ ಲಕ್ಷ್ಮೀಶ