ಒಟ್ಟು 7 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರತಿಯ ಬೆಳಗಬನ್ನಿರೆ ಆರತಿಯ ಬೆಳಗಬನ್ನಿರೆ ಪಾರ್ವತಿದೇವಿಯರಿಗೆ ಕೀರುತಿ ಕೊಂಡಾಡುತಲಿ ಪರ್ವತರಾಜನ ಮಗಳಿಗೆ ಆರತಿಯ ಬೆಳಗಬನ್ನಿರೆ ಪ ವಾಲೆ ಕಠಾಣಿ ಚಿಂತಾಕು ಮ್ಯಾಲೆ ಸರಿಗೆ ಸರ ಮುತ್ತುಗಳು ಕಾಲಗೆಜ್ಜೆಸರಪಳಿನಿಟ್ಟ ಫಾಲಾಕ್ಷನ ಮಡದಿಗೆ 1 ರಂಗುಮಾಣಿಕ್ಯದ ಹೆರಳು ಬಂಗಾರದಾಭರಣವಿಟ್ಟು ದುಂಡುಮಲ್ಲಿಗೆ ಮುಡಿದು ಕುಳಿತ ಮಂಗಳಾದೇವಿಯರಿಗೆ 2 ದುಂಡುಮುತ್ತಿನ ಮುಕುರ್ಯವು ಚಂದ್ರ ಬಾಳ್ಯಬುಗುಡಿನಿಟ್ಟು ದುಂಡು ಹರಡಿ ಕಂಕಣಕಮಲ ದ್ವಾರ್ಯನಿಟ್ಟ ವಾರಿಜಾಕ್ಷಿಗೆ 3 ಜಾತಿಮಾಣಿಕ್ಯದ ವಂಕಿ ನೂತನಾದ ನಾಗಮುರಿಗೆ ಪ್ರೀತಿಯಲಿ ಪೀತಾಂಬ್ರನುಟ್ಟು ಜ್ಯೋತಿಯಂತೆ ಹೊಳೆವೊ ಗೌರಿಗೆ 4 ನೀಲವರ್ಣ ಭೀಮೇಶಕೃಷ್ಣ ಧ್ಯಾನಮಾಡುತ ಕೃಷ್ಣನ ನೀಲಕಂಠನ ಸಹಿತ ಕುಳಿತ್ವಿಶಾಲನೇತ್ರೆ ಪಾರ್ವತಿಗೆ5
--------------
ಹರಪನಹಳ್ಳಿಭೀಮವ್ವ
ದೇವಿ ಕಾರುಣ್ಯದಿಂದ ಬಂದು ಎಂದೆಂದು ಬಿಡದೆಂದು ದಯದಿಂದ ಪಾಲಿಸಿ ನಿಂದು ಪ ವಿಮಲಾಬ್ಜ ಸದನೆ ಕೋಕಿಲ ಗಾನೆ ಆನಂದಪೂರ್ಣೆ ನಮೋ ನಮೋ ರಮೆ ಉತ್ತಮೆ ಅನುಪಮೆ ಶಮೆಕ್ಷಮೆ ಹರಿಗಸಮೆ ಸತತಾಗಮೆ ಗಗನಿಜಿತ ಯಮೆ ಪರಮೇಶ್ವರಿ ಅ ಉಮೆ ಈ ಪರಾಕ್ರಮೆ1 ಲೋಕ ತರುವಾತ ತನಯವಾಕು ಇವು ಮೂರು ಬೇಕು ಪರಾಕು ಸಂತಾಪ ನೂಕು ಲೋಕ ಜನನಿಯೆ ವೈದೀಕ ಪ್ರಾರ್ಥನೆ ಇದು ಶೋಕ ಓಡಿಸಿ ಎನ್ನ ಸಾಕು ನೀ ಮನಸು ಹಾಕು2 ರಂಗನ ಅರ್ಧಾಂಗಿ ನೀ ರನ್ನೆ ಕ್ಷೀರಾಬ್ದಿ ಕನ್ಯೆ ಮಂಗಳಾದೇವಿ ಭಾಗ್ಯ ಸಂಪನ್ನೆ ಭಕ್ತ ಸಂಪನ್ನೆ ತುಂಗ ಗುಣಾಬ್ಧೆ ತರಂಗಳೆ ತರುಣ ಪ್ರಕಾಶಿಸು ಸಿರಿ ವಿಜಯವಿಠ್ಠಲನ್ನ ವಕ್ಷಸಾರಿದ ಸಾಕ್ಷಾದ್ದೇವಿ 3
--------------
ವಿಜಯದಾಸ
ಪಾರ್ವತೀದೇವಿಯ ಸ್ತುತಿ (ಮಂಗಳೂರು ಮಂಗಳಾದೇವಿ) ಮಹಾಮಾಯೆ ದಯದೋರೆಲೆ ತಾಯೆ ಪ. ಸದರದೊಳೆಬ್ಬಿಸುತಿದಿರಾದ ಮದನಾಂಬಾ ಮುದ ದಾಯಿ ಶುಭಪದದಾಯಿ 1 ದೇವತೆಗಳ ಸೇರಿರುವಾ ಮನೋಹರ ತನುವಾಗಿ ನಿಕರ ಮಹಿಷಾಸುರನಾ ಮೃಗಪತಿಗಮನಾ 2 ಖಂಡ್ಯಧಾರೆಯೊಳ್ದಿಂಡರಿದೂ ಖಂಡಿಸುತಾ ರಣ ಮಂಡಲದಿ ಬ್ರಹ್ಮಾಂಡ ನಿದಾನಿ 3 ತ್ರಿಗುಣಜಮಲವು ದಾನವಾರಿಗಳ ಮಾನಿಸಿ ದಿತಿಜರ ಹಾನಿಗೊಳಿಸುವದು ಹರಿಪರವು ಮಹಭರವು ಮನದಿರವೂ 4 ರಕ್ಷಿಸು ಪುರುಕರುಣಿ ಕ್ಷಮೆಯಿಂದಂ ಭರಣಿ ಖೂಳ ವೈರಿಗಳನೇಳದಂತೆ ಪಾತಾಳಕೆ ಕೆಡಹಿಸು ಮಮ ಜನನಿನೀಲ ಮೇಘ ನಿಭ ವೆಂಕಟರಾಜನ ಲೋಲಕಟಾಕ್ಷಸದಾಕರುಣಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಬರತಾರಂತ್ಹೇಳೆ ಬಾಲೆಕರೆಯಲು ಬಾಯಿಮಾತಿನಲೆಬರತಾರಂತ್ಹೇಳೆ ಪ. ರಂಗನ ಪಾದಕಮಲ ಭೃಂಗಳೆ ದ್ರೌಪದಿಮಂಗಳಾದೇವಿ ರುಕ್ಮಿಣಿ ಸಖಿಯೆಮಂಗಳಾದೇವಿ ರುಕ್ಮಿಣಿ ಕರೆಯಲು ಅಂಗಳದೊಳಗೆ ಬರುತಾಳೆ ಸಖಿಯೆ 1 ಇಂದಿರೇಶನೆಂಬೊ ಚಂದ್ರಗೆಚಕೋರ ಕುಂದದಂಥವಳ ಸುಭದ್ರಾ ಸಖಿಯೆಕುಂದದಂಥವಳೆ ಸುಭದ್ರೆ ಕರೆಯಲೆ ಬಂದಳು ಭಾಮೆ ಎದುರಲಿ ಸಖಿಯೆ 2 ನಗ ಧರನ ಮುಖವೆಂಬೊ ಮುಗಿಲಿಗೆನವಿಲಸುಗಣಿರೈವರ ಮಡದಿಯರುಸುಗುಣರೈವರ ಮಡದಿಯರು ಕರೆಯಲುಮೂರ್ಜಗದ ಮೋಹನೆಯರು ಬರ್ತಾರೆ ಸಖಿಯೆ3 ಹರಿಯಾಗ್ರಜ ತನ್ನ ಹಿರಿಯರ ಕೂಡಿಕೊಂಡುಬರುವನು ಪರಮ ಹರುಷದಿ ಸಖಿಯೆಬರುವನು ಪರಮ ಹರುಷದಿ ಈ ಮಾತುದೊರೆಗಳಿಗೆ ಹೇಳೆ ವಿನಯದಿ ಸಖಿಯೆ4 ಎಲ್ಲರೂ ಮುತ್ತುರತ್ನ ಝಲ್ಲಿ ವಸ್ತ್ರಗಳಿಟ್ಟುಚಲುವ ಪ್ರದ್ಯುಮ್ನನ ಒಡಗೂಡಿ ಸಖಿಯೆಚಲುವ ಪ್ರದ್ಯುಮ್ನನ ಒಡಗೂಡಿ ಐವರಿಗೆ ಮಲ್ಲಿಗೆ ತೂರಾಡಿ ಕರೆಯಲಿ ಸಖಿಯೆ5 ಅಷ್ಟೂರು ಬಗೆಬಗೆ ಪಟ್ಟಾವಳಿಯನುಟ್ಟುಧಿಟ್ಟ ಸಾಂಬನ ಒಡಗೂಡಿಧಿಟ್ಟ ಸಾಂಬನ ಒಡಗೂಡಿ ಐವರಿಗೆ ಬುಕ್ಕಿಟ್ಟು ತೊರ್ಯಾಡಿ ಕರೆಯಲಿ ಸಖಿಯೆ6 ಮಾನಿನಿ ಮಾನಿನಿ ಸಹಿತಾಗಿ ರಮಿಅರಸುಮಾನದಲಿ ಐವರನ ಕರೆಸುವ ಸಖಿಯೆ7
--------------
ಗಲಗಲಿಅವ್ವನವರು
ಹೊಳೆವೊ ಮಂದಿರವ ಪ. ರಂಗಗೆ ರಚಿಸಿದ ಶೃಂಗಾರದ ವೈಕುಂಠ ಮಂಗಳಾದೇವಿಯರು ಇಳಿಯಲಿ1 ವೀತದೋಷಗೆ ದಿವ್ಯ ಸೇತು ದ್ವೀಪವ ರಚಿಸಿ ಪ್ರೀತಿ ಮಡದಿಯರು ಇಳಿಯಲಿ2 ರನ್ನಮಾಣಿಕದ ಅರಮನೆ ಪನ್ನಿಯರು ಬಂದು ಇಳಿಯಲಿ 3 ಪಟ್ಟೆ ಮುತ್ತುಗಳ ಬಿಗಿದು ಇಟ್ಟಾವ ಕನ್ನಡಿ ಧಿಟ್ಟ ತೋರೋದೆ ಜನಕೆಲ್ಲ ಅಷ್ಟು ಮಡದಿಯರು ಇಳಿಯಲಿ 4 ಹಸಿರು ಪಚ್ಚವ ಬಿಗಿದ ಕುಸುರಾದ ಗಿಳಿಬೋದು ದೇವಕಿ ವಸುದೇವ ಬಂದು ಇಳಿಯಲಿ5 ಜತ್ತು ತೋರುವುದು ಜನಕೆಲ್ಲ ಜತ್ತು ತೋರುವುದು ಜನಕೆಲ್ಲ ಸರಸ್ವತಿ ಮತ್ತೆ ಚತುರ್ಮುಖನು ಇಳಿಯಲಿ 6 ಎದ್ದು ತೋರುವುದು ಜನಕೆಲ್ಲ ಎದ್ದು ತೋರುವುದು ಜನಕೆಲ್ಲ ಪಾರ್ವತಿ ರುದ್ರಾದಿಗಳೆಲ್ಲ ಇಳಿಯಲಿ 7 ಕುಂದಣ ರತ್ನಗಳಿಂದ ಹೊಂದಿ ಕಟ್ಟಿದರಮನೆ ಅಂಬರಕೆ ಮ್ಯಾಲೆ ತುಳುಕುವ ಶಚಿದೇವಿ ಇಂದ್ರಾದಿಗಳೆಲ್ಲ ಇಳಿಯಲಿ 8 ರೇವತಿ ಬಲರಾಮರು ಬಂದು ಇಳಿಯಲಿ9 ಒಂಭತ್ತು ಬಗೆ ರತ್ನ ತಂಬಿ ರಚಿಸಿದ ಮನೆ ಅಂಬರಕೆ ಮೇಲೆ ತುಳುಕುವ ಅಂಬರಕೆ ಮೇಲೆ ತುಳುಕುವರತಿದೇವಿಸಾಂಬ ಪ್ರದ್ಯುಮ್ನರು ಇಳಿಯಲಿ10 ಚಂದ ತೋರುವುದು ಜನಕೆಲ್ಲ ಚಂದ ತೋರುವುದು ಜನಕೆಲ್ಲಭಾನು ಮಾನು ಬಂದ ಜನರೆಲ್ಲ ಇಳಿಯಲಿ 11
--------------
ಗಲಗಲಿಅವ್ವನವರು
ಅಂಗನಾಕುಲ ಶಿರೋಮಣಿ ಶ್ರೀಮಾ |ಶೃಂಗಾರವನಧಿಗರುಡಧ್ವಜೆಮಂಗಳಾದೇವಿ ಹಸೆಗೇಳು ಪಕ್ಷೀರಸಾಗರಕನ್ಯಾವಿಧಿ|ಮಾರಾಂತಕ ಶಕ್ರಕರಾರ್ಚಿತೆ ||ವಾರಿಜಸದನೆ ಸಿರಿದೇವಿ |ಸಿರಿದೇವಿ ತ್ರೈಲೋಕಕೆ ಜನನೀ ರಕ್ಕಸಾರಿ ಹಸೆಗೇಳು 1ಭಾರತಿಪಾರ್ವತಿ ಶಾಮಲ ಮುಖ |ನೂರು ಸುರರರಸಿಯರೆಲ್ಲರು ||ಮೀರಿಧರುಷದಲಿ ಪದಪಾಡಿ | ಹಸೆಯಬರೆದಿಹರೆಲೆ ನಾರಾಯಣನ ರಾಣೀ || ಹಸೆಗೇಳು 2ಋಷಿಗಳು ವೇದ ಪುರಾಣಗಳುಪ |ನಿಷದ್ವಾಕ್ಯಗಳಿಂದ ತುತಿಸುವರು ||ವಸುಧೆಗಾನಂದ ಪಡಿಸಲು |ಶುಭಕುಂದರದನೆಆಸಿತಕುಂತಲೆಯೇ ಹಸೆಗೇಳು 3ಕಡೆಗಣ್ಣಿನ ನೋಟದಿ ಲೋಕವ |ತಡೆಯದೆ ಪುಟ್ಟಿಸಿ ಪಾಲಿಸಿ ಪುನಃ ||ಕೆಡಿಸುವೆ ಸ್ವೇಚ್ಛೆಯಲಿ ವೈದರ್ಭೆ ಸತ್ರಾಜಿತೆಕೃತಿ|ಯೊಡತಿ ಜಯಮಾಯಾ ಹಸೆಗೇಳು 4ಪ್ರಾಣೇಶ ವಿಠಲನೊಳು ದ್ವೇಷಿಪ |ಹೀನರ ಸಂಹರಕೋಸುಗ ಶರ ||ಪಾಣಿಯಾಗಿಹಳೆಶ್ರುತಿವೇದ್ಯೆ | ಶ್ರುತಿವೇದ್ಯೆ ದೇವದೇವಿಕಅಹಿವೇಣಿಶುಕವಾಣಿ | ಹಸೆಗೇಳು 5
--------------
ಪ್ರಾಣೇಶದಾಸರು