ಬಾರೆ ದೇವಿ ಭಾಗ್ಯವಂತೆ ಬೇಡಿಕೊಂಬೆ ಬೇಗ ಹಸೆಗೆ ಪ
ಸುತ್ತನಾಲ್ಕು ದೀಪಗಳಿಟ್ಟು ಎತ್ತಲೂ ಪ್ರಜ್ವಲಿಸುತಿರ್ಪ
ಮುತ್ತುರತ್ನ ಕೆತ್ತಿಸಿರುವ ಉತ್ತಮ ಮಣಿಪೀಠಕೆ 1
ಜಡೆಯಬಂಗಾರವನು ಹಾಕಿ ಬಿಡದೆ ಕಮಲಮಾಲೆಧರಿಸಿ
ಮುಡಿದು ಮಲ್ಲಿಗೆ ಸಂಪಗೆಯ ಒಡನೆ ಪೀತಾಂಬರವನುಟ್ಟು 2
ಜಾಜಿಪಟ್ಟಣನರಸಿಯೆ ನೀಂ ರಾಜಿಸು ತನುರಾಗದಿಂ
ದೀನ ಜನರಂ ಹರುಷಗೊಳಿಸು ಮಾಜದೇ ನೀ ಮಂಗಳಾಂಗಿ3