ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(3) ನದಿಗಳು ಯಾತ್ರೆ ಮಾಡಿಕೊಂಡೈದೆ ಜಾಹ್ನವಿಗೆ ಹೋಗಿ ತೀರ್ಥ ಪ ಸೂತ್ರಧಾರಿ ತಾನಿಹ ದಿವ್ಯ ಕ್ಷೇತ್ರೋದ್ಭವೆ ಶ್ರೀ ಕಾವೇರಿ ಧಾತ್ರಿಪಾವನೆಜಯಮಂಗಳೆನೇತ್ರೋಂ ಮಧ್ಯಾ ಭಾಗೀರಥಿ 1 ಹರಿಪಾದ ರಜೋರಿ ಝೇಂಕಾರಿ ತರಂಗಧಾರಿ ಗಿರಿಜಾರ ಗುಹಾವಿಹಾರಿತರುಣಿ ಜಯ ಭಾಗಮಂಡಲೆ 2 ಗಂಗೆ ಮತ್ಕಲುಷಾಭಂಗ ಸ್ವರ್ಗಸೋಪಾನಸಂಗ ಮಂಗಳಾಂಗಿಯೆ ತರಳತರಂಗೆ ಯೆನ್ನುತಾ ಕಂಚೀ 3 ಲಲನೆ ನಿನ್ನಯ ಸುದರುಶನ ಫಲಿಸಿದಾಕ್ಷಣವೆ ದು:ಖ ಮಳಿದುಹೋಗುವ ಚಂದಾ ಕಲಿತು ಗುರುಮುಖದಿಂ ಕಾಶೀ4 ಮದನಾರಿಮೌಳಿಯ ತಂ ಘೃತಂಪೂರ್ಣ ಅಸ್ಮಾದಯನೀ ಮದಾಚಾರ್ಯನೆ ಶ್ರೀ ತುಲಶೀಮಧುರಾಮೃತ ಸುರಿಯುವ ದ್ವಾರಕಾ5
--------------
ಚನ್ನಪಟ್ಟಣದ ಅಹೋಬಲದಾಸರು
ಕರುಣಿಸೆ ಕೋಮಲ ಗಾತ್ರೆ ಕಂಜಜಮಾತೆ ಪ ಸುರರು ನಲಿಯುತ ಶಿರವ ಬಾಗಿ ಕರವ ಮುಗಿಯಲು ಪರಮ ಹರುಷದಿ ವರವ ಕೊಡುತಿಹ ಹರಿಯ ಮಡದಿಯೆ ಅ.ಪ. ಕ್ಷೀರವಾರಿಧಿ ತನಯೆ ನಿನ್ನಯ ದೇಹ ಬೀರುತಿದೆ ವಿದ್ಯುಛ್ಛವಿಯೆ ಶ್ರೀ ಹರಿಜಾಯೆ ವರ ಸುದರ್ಶನ ಶಂಖಹಸ್ತದಿ ಮೆರೆಯುತಿರೆ ಭಕುತರನು ಸಲಹಲು ಕರವೀರಪುರ ನಿಲಯದಿ ನೆಲಸಿ ವರದಭಯ ಹಸ್ತವ ತೋರುತಿರ್ಪೆ 1 ಮನಸಿಜಕೋಟಿ ಸುರೂಪಿಣಿ ಮೃದುಮಧುರ ವಾಣಿ ಧನಕನಕಾದಿಗಳಭಿಮಾನಿ ಕೈವಲ್ಯದಾಯಿನಿ ವನಜಸಂಭವೆ ನಿನ್ನ ಒಂದರೆ- ಕ್ಷಣವು ಬಿಡದಲೆ ತನ್ನ ಉರದೊಳು ದನುಜಮರ್ಧನ ಧರಿಸಿಕೊಂಡು ತನುವು ಮನವನು ನಿನಗೆ ತೆತ್ತಿಹ 2 ರಂಗೇಶವಿಠಲನ ರಾಣಿ ಪಂಕಜಪಾಣಿ ಡಿಂಗರೀಕರ ಪೊರೆವ ಕರುಣಿ ಕಾಳಾಹಿವೇಣಿ ಮಂಗಳಾಂಗಿಯೆ ಖೂಳ ಕುಜನರ ಸಂಗಬಿಡಿಸುತ ತವ ಪದ ಸರೋ ಜಂಗಳಲಿ ನಾ ನಲಿದು ವಿಹರಿಪಭೃಂಗನಾಗುವ ಪರಿಯ ತೋರೆ 3
--------------
ರಂಗೇಶವಿಠಲದಾಸರು
ಚಿನ್ನದ ಚಾವಡಿ ಮ್ಯಾಲೆ ಪನ್ನಂಗಶಯನರು ಮಾನ್ಯ ಮಾನ್ಯರು ಮುಕ್ತರು ಮುಕ್ತರನೆ ನೋಡುತಲಿಇನ್ಯಾರ ಭಯವು ನಮಗಿಲ್ಲ 1 ಮುತ್ತಿನ ಚಾವಡಿ ಮ್ಯಾಲೆ ಮುಕ್ತರನೆ ನೋಡುತಲಿ ಲಕ್ಷ್ಮಿನಾರಾಯಣರು ಕುಳಿತಾರೆ ಕುಳಿತು ನೋಡುತಲಿರಲು ಮತ್ಯಾರ ಭಯವೂ ನಮಗಿಲ್ಲ 2 ಯಮಧರ್ಮರಾಯಗೆ ನಮೋ ನಮೋ ನಾನೆಂಬೆ ಘನ ಗುಣ ಮಹಿಮ ನೀನೆಂದು ನೀನೆಂದು ಸ್ತುತಿಪೆನೊ ಅನುಮಾನವೇಕೆ ಸಲಹೆನ್ನ 3 ರಂಗ ರಂಗಾಯೆಂದು ರಂಗನ್ನ ನೆನೆದರೆ ಹಿಂಗೋದು ಸಕಲ ದಾರಿದ್ರ್ಯ ದಾರಿದ್ರ್ಯ ಕಳೆವಂಥ ಮಂಗಳಾಂಗಿಯೆ ಶ್ರೀ ಮಾಲಕ್ಷ್ಮಿ 4 ಸಾಮಜವರದನು ಭೀಮೇಶಕೃಷ್ಣನು ಕಾಮಿತಾರ್ಥಗಳ ಕೊಡುವೋನು ಕೊಡುವಂಥ ಶ್ರೀಹರಿಯೆ ಪ್ರೇಮದಲಿ ಎನ್ನ ಸಲಹಲಿ 5
--------------
ಹರಪನಹಳ್ಳಿಭೀಮವ್ವ
ನದೀದೇವತೆಗಳು ಕಂಗಳಿಂದಲಿ ನಿನ್ನ ಕಂಡೆ ನಾನೀಗ ಹಿಂಗಿತೇ ಎನ್ನ ಅಘದ್ಹಿಂಡು ಕಾವೇರಿ ಪ. ಮಂಗಳಾಂಗಿಯೆ ಶ್ರೀ ರಂಗನಾಥನ ಪದ ಭೃಂಗಳೆನಿಸಿ ಜನರ ಪಾವನಗೈವೆ ತುಂಗವಿಕ್ರಮ ಹರಿಗೆ ಮೂಲರೂಪಳಾಗಿ ಅಂಗ ಶುದ್ಧಿಯಗೈವೆ ಪಾಪಿಗಳ ಸತತ 1 ಎಲ್ಲೆಲ್ಲಿ ನೋಡೆ ಶ್ರೀರಂಗನ್ನ ಸೇವಿಸುವೆ ಪುಲ್ಲಲೋಚನೆ ನಿನ್ನ ಬಗೆಯರಿವೆನೆ ಬಲ್ಲ ಭಕ್ತರು ಬಂದು ನಿನ್ನಲ್ಲಿ ಸ್ನಾನವಗೈದು ಉಲ್ಲಾಸದಿಂದ ಆನಂದಪಡುತಿಹರೆ 2 ನೊರೆಸುಳಿಗಳಿಂದ ಭೋರ್ಗರೆಯುತ್ತ ಹರಿ ಇರುವ ಅರಮನೆಯೆ ವೈಕುಂಠವೆಂದು ಸೂಚಿಸುತ ಹರಿಸದನ ಸುತ್ತಿರುವೆ ವಿರಜೆ ನಾನೆಂದೆನುತ ಅರುಹುವಾ ತೆರದಿ ಬಹು ರಭಸದಿಂ ಪರಿವೆ 3 ನಿನ್ನ ಧ್ವನಿ ಇಂಪೆಂದು ಆನಂದದಿಂದಾಲಿಸುತ ಚನ್ನ ಶ್ರೀರಂಗ ತಾ ಪವಡಿಸಿಹನೆ ಘನ್ನ ಮಹಿಮಳೆ ಸಕಲ ಜೀವರಾಶಿಯ ಪೊರೆವೆ ಎನ್ನ ಮನ ಹರಿಪದದಿ ನಲಿವಂತೆ ಮಾಡೆ 4 ನಿನ್ನನೇ ವಿರಜೆ ಎಂತೆಂದು ಭಾವಿಸಿ ಈಗ ಎನ್ನ ಗುರುಗಳ ದಯದಿ ಸ್ನಾನಗೈದೆ ಇನ್ನು ಶ್ರೀ ವೈಕುಂಠದೊಡೆಯನಾ ತೋರಮ್ಮ ಘನ್ನ ಶ್ರೀ ಗೋಪಾಲವಿಠ್ಠಲನ 5
--------------
ಅಂಬಾಬಾಯಿ
ಪರಿಪಾಲಿಸುವುದು ಎಮ್ಮನು ಪರಮಾತ್ಮನ ರಾಣಿ ಕರುಣಾಕರನ ಪಾದಸ್ಮರಣೆಯನೆ ಕೊಟ್ಟು ಪ ಅಮರೇಶ ವಂದ್ಯಳೆ ಕಮಲಾಲಯೆ ನೀಬಂದು ಶ್ರಮವಿಲ್ಲದೆಯನ್ನೆಯ ಮಮತೆಯನು ಬಿಡಿಸು 1 ವಸುದೇವಸುತನ ರಾಣಿ ಅಸುರ ಸಂಹಾರಳೇ ನಿನ್ನ ವಶವಾದ ಮೇಲೆ ಅಂಭ್ರಣಿಯೆ ನಸುನಗುತ ಈಗ 2 ಮಂದರೋದ್ಧಾರಎನ್ನ ಸಂದುಸಂದಲಿ ಕಾರ್ಯವ ನಿಂದುಮಾಡಿಸುವಂಥದನ್ನು ಚಂದದೀಬೋಧವಕೊಟ್ಟು 3 ಮಂಗಳಾಂಗಿಯೆ ನಿನ್ನ ಮುಂಗಾಣದೆಸೊರಗಿದೆ ಅಂಗಜಪಿತನ ಜಾಯೇ ಭಂಗಪಡಿಸದೆಬೇಗಾ 4 ಪದ್ಮಸಂಭವನಮಾತೆ ಮುದ್ದುಮೋಹನವಿಠಲ ಪದ ಪದ್ಮಗಳನೀನೊಲಿದು ಹೃತ್ಪದ್ಮದಲಿ ಕಾಣಿಸುತ 5
--------------
ಮುದ್ದುಮೋಹನವಿಠಲದಾಸರು
ಮಲಗು ಮಲಗಮ್ಮ ತಾಯೆ ಶ್ರೀಹರಿಯ ಜಾಯೆ ಮಲಗು ದುಗ್ಧಾಬ್ಧಿನಿಲಯೆ ಸಾಗರನ ತನಯೆ ಜೋ ಜೋ ಪ ಇಂದಿರೆಯೆ ಹರಿ ನಿನ್ನ ಅಂದವನು ನೋಡಿ ಮಂದರಧರ ತನ ವಕ್ಷದಿ ಮಂದಿರವ ಮಾಡಿ ಚಂದದಿ ಮುದ್ದಿಪನು ಗೋವಿಂದ ನಲಿದಾಡಿ ಮಂದಸ್ಮಿತನಾಗಿ ತಾ ನಿಂದಿರುವ ನಿನ ಕೂಡಿ 1 ಮೂರುಕಣ್ಣ ಮೋಹಿಸಿದನೇನೆಂಬೆನಾಗ ಮಾರಮಣನು ಸ್ತ್ರೀ ವೇಷಧರಿಸಿದಾಗ ಆ ರಮೇಶ ಮರುಳಾದನಮ್ಮ ನಿನಗೀಗ ನೀರೆ ನೀ ಮಲಗು ನಿಶ್ಚಿಂತಳಾಗಿ ಬೇಗ 2 ಪನ್ನಗಾರಿಧ್ವಜಗೆ ಛತ್ರ ಚಾಮರವಾದಿ ಉನ್ನಂಥ ವಸ್ತ್ರ ಆಭರಣಗಳು ನೀನಾದಿ ಅನ್ನಪಾನಾದಿಗಳಿತ್ತು ತೃಪ್ತಿಪಡಿಪಳಾದಿ ನಿನ್ನಂತೆ ಸೇವಿಪರ್ಯಾರು ಮೂರು ಭುವನದಿ 3 ಏನು ಸುಕೃತಗೈದಿದ್ದೆ ನಾ ಕಾಣೆನಮ್ಮಾ ಜಾಣೆ ನಿನಗೆಣೆಯ ಕಾಣೆ ಜನನಿ ಕೇಳಮ್ಮಾ ತಾನೆ ತನ್ನಲ್ಲಿ ರಮಿಪನಲ್ಲವೇನಮ್ಮಾ ದಾನವಾಂತಕನು ನಿನ್ನ ಕೈಪಿಡಿದನಮ್ಮಾ 4 ಮಂಗಳಾಂಗಿಯೆ ನಿನಗೆ ಸರಿಸಮರ್ಯಾರಿಲ್ಲ ಭೃಂಗಕುಂತಳೆ ಕೈ ಜೋಡಿಪರು ಸುರರೆಲ್ಲ ಬಂಗಾರದ ಮಂಚವಣಿಯಾಗಿಹುದಲ್ಲ ರಂಗೇಶವಿಠಲ ತಾ ಪವಡಿಸಿರ್ಪನಲ್ಲ 5
--------------
ರಂಗೇಶವಿಠಲದಾಸರು
ಭಾರತಿಭಕುತಿಯನು ಕೊಡೆನಗೆಮಾರುತಿಸತಿನೀನು ಪ.ಮೂರು ಲೋಕದೊಳು ಯಾರು ನಿನಗೆಸರಿ ಮಾರಾರಿಗಳಿಂದಾರಾಧಿತಳೆ ಅ.ಪ.ಸುಂದರಿ ಶುಭಕಾರಿ ಸುಮನಸ-ವೃಂದಶೋಭಿತಕಬರಿಮಂದಹಾಸ ಮುಖದಿಂದಲಿ ನೋಡಿ ನಿನ್ನಕಂದನೆಂದು ಎನ್ನ ಮುಂದಕೆ ಕರೆಯೆ 1ವಾಣಿ ಎನ್ನ ವದನದಲ್ಲಿಡುಮಾಣದೆಹರಿಸ್ತವನವೀಣಾಧೃತ ಸುಜ್ಞಾನಿಯೆ ಪಂಕಜ-ಪಾಣಿಯೆ ಕೋಕಿಲವಾಣಿಯೆ ಎನ್ನಯ 2ಮಂಗಳಾಂಗಿಯೆ ಎನ್ನಅಂತರಂಗದಲ್ಲಿ ಮುನ್ನತುಂಗವಿಕ್ರಮ ಗೋಪಾಲವಿಠಲನ್ನಹಿಂಗದೆ ನೆನೆವ ಸುಖಂಗಳನು ಕೊಡೆ 3
--------------
ಗೋಪಾಲದಾಸರು