ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ಮಂಗಳಾರತಿಯನ್ನು ಬೆಳಗಿರೆ - ಮಂಗಳಾಂಗಿಯರೆಲ್ಲರು ಪ ಅಂಗನಾಮಣಿ ಗೌರಿದೇವಿ-ಶುಭಾಂಗ ಮೃದ್ಛವ ಗಣಪಗೆ ಅ.ಪ ದಾಸರೀಪ್ಸಿತವನ್ನು ಸಲಿಸುವ ಈಶನಂದನ ಗಣಪಗೇ ಪಾಶ ಅಂಕುಶ ಧರಿಸಿಹ ವಿಘ್ನೇಶ ವಿಘ್ನ ವಿನಾಶಗೇ1 ವಿದ್ಯವೀವಗೆ ಬುದ್ಧಿ ಕೊಡುವಗೆ ಸಿದ್ಧಿದಾಯಕ ಗಣಪಗೇ ಶುದ್ಧಮನದಲಿ ಶರಣುಹೊದ್ದಲು ಉದ್ಧರಿಪ ಸದ್ದಯನಿಗೇ 2 ಇಕ್ಷುಚಾಪನ ಲಕ್ಷ್ಯಮಾಡದೆ ದಕ್ಷನಾಗಿಹ ಗಣಪಗೇ ಕುಕ್ಷಿಯೊಳು ಜಗವಿಟ್ಟು ರಕ್ಷಿಪ ಲಕ್ಷ್ಮೀಕಾಂತನ ಭಜಕಗೇ 3
--------------
ಲಕ್ಷ್ಮೀನಾರಯಣರಾಯರು
ಏಳು ನಾರಾಯಣ ಏಳು ಲಕ್ಷ್ಮೀರಮಣಏಳು ಬೆಳಗಾಯ್ತರುಣ ಬೀರುತಿದೆ ಕಿರಣ ಪ ರಂಗ ಬರುತಿಹನೆಂದು ಮಂಗಳಾಂಗಿಯರೆಲ್ಲಅಂಗಳ ಸಾರಿಸಿಸುತೆ ಮಂಗಳವ ಪಾಡುತ್ತೆರಂಗೋಲಿಯೊಳು ನಿನ್ನ ಚಿತ್ರವನು ರೇಖಿಸುತೆಶೃಂಗರಿಸುತಿಹರು ನೋಡೆದ್ದು ಬಾರೋ 1 ಹಿಂಡಿ ನೊರೆ ಹಾಲ್ಗಳನು ಗಿಂಡಿಯೊಳು ತಂದಿಟ್ಟುಕೊಂಡು ವದನವ ತೊಳೆಯ ಬಿಸಿ ನೀರು ತಂದಿಟ್ಟುತಂಡತಂಡದಿ ಭಕುತ ಮಂಡಲಿಯು ಕಾದಿಹುದು ಹೆಂಡತಿಯನೊಡಗೂಡಿಯುಂಡು ತಣಿಯು ಬಾರೋ2 ವೆಳ್ಳೆ ತುಂಬಿಗಳಾಡೆ ಮಂಗಳಾರತಿ ಮಾಡಿಬೆಳ್ಳಿ ಕಳಶಗಳೆನಲು ಅಮೃತವನು ತುಂಬಿಬೆಳ್ಳನೆಯ ಹೂಗಳನು ಮಡಿ ತಳಿಗೆಯೊಳು ಹಿಡಿದುಬಳ್ಳಿ ಮಲ್ಲಿಗೆ ತಾವು ಆತುರದಿ ನಿಂತಿಹವು 3 ಚಿಕ್ಕೆಗಳು ಬಾಡುತಿವೆ ಚೊಕ್ಕೆಲರು ತೀಡುತಿದೆಮಕ್ಕಳಾಡುಲೆವೆ ಕಕ್ಕುಲತೆಯೊಲಿ ನಮ್ಮ ರಕ್ಷಿಸಲು ನೀನೇಳು 4 ಕರ ಮಕದು ಭಕುತಿಯಿಂದಲಿ ಬೇಡುವರುಪಾವು ಮಂಚವ ಬಿಟ್ಟು ಬೇಗೆದ್ದು ಬಾರೋ 5 ಕಂಜದೆಲೆಯಲಿ ಬಿದ್ದ ಮಂಜುವನಿಗಳ ಮೇಲೆಕೆಂಜೆಡೆಯನಾಂಶುಗಳು ರಂಜಿಸಲು ದೀಪದೊಳುಕಂಜನಾಭ ನಿರಾಂಜನವ ಬೆಳಗಲಿಕೆಮುಂಜಾಮದಲೆ ಕಾಯುತಿಹಳೊ 6 ಶಿರಬಾಗಿ ನಿನ್ನ ಚರಣಗಳಿಗೆ ಬಂದಿದೆ ಶರಣನಿರುತ ಧನವಾರೋಗ್ಯವಿತ್ತು ದುರಿತಾಪಹರಣಪರಿಕಿಸದೆ ರಕ್ಷಿಸಲು ಬಾರೋ ಕರುಣಾಭರಣವರ ಗದುಗಿನಲಿ ಮೆರೆವ ವೀರನಾರಾಯಣ 7
--------------
ವೀರನಾರಾಯಣ
ರಾಘವೇಂದ್ರ ಸ್ವಾಮಿಗಳು ಅಂತರಂಗದಿ ಹರುಷವಾಂತೆವೈ ಗುರುವೆ ಪ ಸಂತಸದಿ ಸೇವೆಗಳ ಸ್ವೀಕರಿಸು ಪ್ರಭುವೆ ಅ.ಪ ಮಂಗಳಾಂಗಿಯರೆಲ್ಲ ಮಿಂದು ಮಡಿಗಳನ್ನುಟ್ಟು | ಮಂಗಳಾತ್ಮಕ ನಿನಗೆ ಮಜ್ಜನವ ಗೈಸೆ || ಅಂಗಳದಿ ದಧಿಕ್ಷೀರ ಘೃತಕುಂಭಗಳಧರಿಸಿ | ಸಿಂಗರದಿ ನಿಂದಿಹರೊ ಗುರುರಾಘವೇಂದ್ರ 1 ಧಾರುಣೀಸುರರೆಲ್ಲ ಧೀರಯತಿವರ ನಿನಗೆ | ಚಾರುವಿಭವದಿ ಕವಚ ಧಾರಣೆಯ ಗೈಸೆ || ಸೇರಿ ನುತಿಸುತೆ ನಿನ್ನ ಸಾರಗುಣ ಸಂಪನ್ನ | ಸಾರಿಹರೊ ನಿನ್ನಡಿಗೆ ಗುರುರಾಘವೇಂದ್ರ 2 ನಿಂದು ಭೂಸುರರೆಲ್ಲಾ ಜಯಜಯ ಜಯವೆನಲು| ಮಂದಹಾಸದಲವರ ಸೇವೆಯನು ಕೊಂಡೆ || ಇಂದು ಬೃಂದಾವನದಿ ನಿಂದು ದರ್ಶನವಿತ್ತೆ | ಕುಂದದಿಷ್ಟವ ಸಲಿಸೊ ಗುರುರಾಘವೇಂದ್ರ 3 ಉಡುರಾಶಿಗಳ ಮಧ್ಯೆ ಉಡುಪ ಮೆರೆಯುವ ತೆರದಿ | ಉಡುಗಣಿಕ್ಷೇತ್ರದೊಳು ನಿಂದು ಮೆರೆದೆ || ಕಡುಮಮತೆಯಲಿ ನಿನ್ನ ಸಡಗರದಿ ಸೇವಿಪರ | ಎಡರುಗಳ ಪರಿಹರಿಸೊ ಗುರುರಾಘವೇಂದ್ರ4 ನರಹರಿಯ ಮೆಚ್ಚಿಸಿದೆ ಪ್ರಹ್ಲಾದನೆನಿಸುತಲೆ | ಸಿರಿಕೃಷ್ಣನೊಲಿಸಿದಿಯೊ ವ್ಯಾಸಮುನಿ || ಸಿರಿರಾಮಚಂದ್ರಪ್ರಿಯ ಗುರುರಾಘವೇಂದ್ರನೆ | ಕರುಣದಲಿ ತೋರೀಗ ಶ್ರೀಶಕೇಶವನ5
--------------
ಶ್ರೀಶ ಕೇಶವದಾಸರು