ಲಾಲಿ ಲಾಲಿ ನಮ್ಮ ಹರಿಯೆ ಲಾಲಿ ಪ
ಶ್ರೀಲತಾಂಗಿಯೊಡನೆ ಮೆರೆವದೊರೆಯೆ ಲಾಲಿ ಅ.ಪ
ನಂದಲಾಲಿ ಗೋವಿಂದ ಲಾಲಿ
ಕಂದನಾಗಿ ಲೋಕ ತಂದೆ ಲಾಲಿ 1
ಬಾಲಲಾಲಿ ತುಲಸಿಮಾಲ ಲಾಲಿ
ಕಾಲಕಾಲವಂದ್ಯ ಗೋಪೀಲೀಲ ಲಾಲಿ 2
ವಾಸುದೇವ ಲಾಲಿ
ದೇವಕೀತನಯ ಸದ್ಭಾವಲಾಲಿ 3
ರಂಗಲಾಲಿ ಮಂಗಳಾಂಗಲಾಲಿ
ಗಂಗಾತಾತ ಲೋಕೋತ್ತುಂಗ ಲಾಲಿ4
ರಾಮಲಾಲೀ ಭಕ್ತಪ್ರೇಮ ಲಾಲಿ
ಶ್ಯಾಮಸುಂದರಾಂಗ ನಮ್ಮ ಸ್ವಾಮಿ ಲಾಲಿ 5
ಸತ್ಯ ಲಾಲಿ ಮೌನಿಸ್ತುತ್ಯ ಲಾಲಿ
ನಿತ್ಯ ನಿಗಮವೇದ್ಯ ಅನ್ಯುಕ್ತಲಾಲಿ6
ರಾಜಲಾಲಿ ರತ್ನತೇಜ ಲಾಲಿ
ರಾಜರಾಜಪೂಜ್ಯ ಜಾಜಿಶ್ರೀಶ ಲಾಲಿ 7