ಒಟ್ಟು 7 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಸುದೇವಸುತನಿಗೆ ನಮೋ ನಮೋ ನಮ್ಮ ವಸುಧೆ ಪಾಲಕನಿಗೆ ನಮೋ ನಮೋ ಪ ಮಚ್ಚಾವತಾರಗೆ ಮೊದಲೆ ಮಂಗಳವೆಂದು ಸಾಕ್ಷಾತ ಕೂರ್ಮಗೆ ನಮೋ ನಮೋ ಸುತ್ತಿ ಸುರುಳಿ ಭೂಮಿ ಒಯ್ದಿ ್ಹರಣ್ಯಾಕ್ಷಕನ ವರಾಹ ನಮೋ ನಮೋ1 ಕೂಸು ಕರೆಯೆ ಕಂಬದಿಂದ ಬಂದ್ಹಿರಣ್ಯ- ಕಶ್ಯಪನ ಕೊಂದ್ಹರಿಗೆ ನಮೋ ನಮೋ ಆಕಾಶವ್ಹಿಡಿಯದೆ ಬೆಳದು ಬಲಿಯ ಭಾಗ್ಯ ಆಕ್ರಮಿಸಿದಾತಗೆ ನಮೋ ನಮೋ 2 ಪೊತ್ತು ಕೊಡಲಿ ಕ್ಷತ್ರಿಯರ ಕಡಿದ ಸ- ಮರ್ಥ ಭಾರ್ಗವ ನಮೋ ನಮೋ ಹತ್ತು ಶಿರಗಳ ಕೊಂದು ಸೀತಾಸಮೇತನಾದ ಪೃಥಿವಿ ಪಾಲಕ ರಾಮ ನಮೋ ನಮೋ 3 ಬೆರಳಲಿ ಗೋವರ್ಧನ ಎತ್ತ್ಯಾಕಳಕಾಯ್ದ ಕೊಳಲನೂದುವ ಕೃಷ್ಣ ನಮೋ ನಮೋ ತರಳರೂಪದಿ ತ್ರಿಪುರದ ದುರುಳರನೆಲ್ಲ ಮರುಳು ಮಾಡಿದ ಬೌದ್ಧ ನಮೋ ನಮೋ 4 ಮುದ್ದು ತೇಜಿಯನೇರಿ ಕಲಿಗಳ ಕಡಿದಂಥ ಕಲ್ಕ್ಯಾವತಾರಗೆ ನಮೋ ನಮೋ ಶುದ್ಧ ವೈಷ್ಣವರಿಗೆ ಸುಲಭದಿಂದೊಲಿದು ಮುಕ್ತಿ ಕೊಡುವೊ ಭೀಮೇಶ ಕೃಷ್ಣಗೆ ನಮೋ ನಮೋ 5
--------------
ಹರಪನಹಳ್ಳಿಭೀಮವ್ವ
ಅಂಗನೇರು ಕೂಡಿ ಸ್ವರ ಸಂಗೀತದಿಂದಲೀಗ ಚಾರು ಚರಣಕೆ ಹರುಷದಿಂ ಬೇಗ ಮಂಗಳಾತ್ಮಕನಾದ ಶ್ರೀ ನರಶಿಂಗ ರಾಯನಿಗೆ ಶೃಂಗಾರದಿಂ ಜಯಮಂಗಳವೆಂದು ಪಾಡಿರೆ 1 ನೀನೆ ಗತಿಯೆಂದ ಮಾನಿನಿಯಳ ಮಾನ ಕಾಯ್ದವಗೆ ಸಾನುರಾಗದಿ ಧ್ಯಾನಿಸುತಲಿ ಶ್ರೀನಿವಾಸನಿಗೆ ಬಲು ಛಂದದಿ ಜಯ ಮಂಗಳವೆಂದು ಪಾಡಿರೆÉ 2 ಪೊಂದಿದ ಜನರನು ತ್ವರದಿ ಪೊರೆಯುವ ನಂದಕಂದನಿಗೆ | ವಂದಿಸಿ ಕರುಣದಿ ಸಿಂಧು ಶಯನಗೆ | ಆನಂದದಿಂದಲಿ ಶ್ರೀ ಶಾಮಸುಂದರಗೆ ಘನ ಮೋದದಿಂ ಜಯ ಮಂಗಳವೆಂದು ಪಾಡಿರೆÉ 3
--------------
ಶಾಮಸುಂದರ ವಿಠಲ
ಪೊಂದಿದ ಭಕುತರ ತ್ವರದಿ ಪೊರೆಯುವವನಿಗೆ | ನಂದಕಂದ ವಂದಿಸಿ ಕರುಣದಿ || ಇಂದು ಮುಖಿಯರು ಶಿಂಧುಶಯನಾಗೆ | ಮಂದಿರದೊಳಗೆ ಆನಂದದಿಂದ ಶ್ರೀ || ಶಾಮಸುಂದರಗೆ | ಘನ ಮೋದದಿಂದ | ಜಯ ಮಂಗಳವೆಂದು ಪಾಡಿರೆ ||
--------------
ಶಾಮಸುಂದರ ವಿಠಲ
ಬೆಳಗಿರೆ ಆರುತಿಯ ಶ್ರೀ ತುಳಸಿಗೆ ಪ ಬೆಳಗಿರೆ ಆರುತಿ ತುಳಸಿದೇವಿಗೆ ನಿತ್ಯ ಲಲನೆಯರೆಲ್ಲ ಮಂಗಳವೆಂದು ಪಾಡುತ ಅ.ಪ ಸುಧೆಯ ಕಲಶದೊಳು ಮಧುವೈರಿನಯನದ ಮುದ ಜಲಬೀಳಲು ಉದುಭವಿಸಿದಳೆಂದು 1 ದರುಶನ ಮಾತ್ರದಿ ದುರಿತಗಳೋಡಿಸಿ ಸ್ಥಿರವಾದ ಸೌಭಾಗ್ಯ ಕರುಣಿಸುವಳೆಂದು 2 ಇಳೆಯೊಳು ಕಾರ್ಪರ ನಿಲಯ ಶ್ರೀನರಹರಿ ಒಲುಮೆಯ ಪಡೆದ ಶ್ರೀ ತುಳಸಿದೇವಿಗೆ ಬೇಗ3
--------------
ಕಾರ್ಪರ ನರಹರಿದಾಸರು
ಸುಂದರ ಮೂರುತಿ ಹರಿಯೆ ಬಾ- ರೆಂದು ಕಶ್ಯಪ ಋಷಿ ಅದಿತಿಯರು ಮಂದಹಾಸದಿ ನಮ್ಮ ಮಂದಿರಕೀಗ ಗೋ- ವಿಂದ ಬಾ ಶ್ರೀಮುಕುಂದ ಬಾ ಯಾದವ ವೃಂದ ಬಾ ಬಲುಮುದದಿಂದ ಬಾ ಬಾ- ರೆಂದು ಕರದಾರು ಶೋಭಾನೆ 1 ಅಚ್ಚುತಾನಂತ ಶ್ರೀಹರಿ ನೀನು ಸಚ್ಚಿದಾನಂತಾತ್ಮನೆ ನೀನು ಮಿತ್ರೆ ಲಕುಮಿ ಒಡಗೂಡುತ ಬಾರೆಂದು ಅತ್ರಿಯರು ಸ್ತುತಿಪರು ಮಿತ್ರೆಯರು ಪಾಡ್ವರು ಕೀರ್ತಿಪರು ಅನಸೂಯಾತ್ರಿಯರು ಬಾರೆಂದು ಕರೆದಾರು ಶೋಭಾನೆ 2 ಭಾಗವತರ ಪ್ರಿಯ ಬಾರೆಂದು ಭಾರದ್ವಾಜರು ಭಕ್ತಿಯಲಿ ಸತಿ ಸುಶೀಲೆ- ಯರು ಸುಂದರ ನಾರಿಯರು ಕರೆವರು ಕಂಸಾರಿ ಬಾರೆಂದು ಕರದಾರು ಶೋಭಾನೆ 3 ಹಸ್ತಿವರದ ಹರಿ ಬಾರೆಂದು ವಿಶ್ವಾಮಿತ್ರರು ಹರುಷದಲಿ ಸತಿ ಸಹಿತದಿ ಕರೆವರು ಭಕ್ತಿಯಲಿ ಪರಮಾಸಕ್ತಿಯಲಿ ಹರಿಯನು ಸ್ತೋತ್ರದಲಿ ಭೂ ರಮಾ ಪಾರ್ಥಸಾರಥಿಯ ಕರದಾರು ಶೋಭಾನೆ 4 ಕೌಶಿಕ ಯಜ್ಞಪಾಲನೆ ಬಾ ಕಂಸನ ಸಭೆಯಲಿ ಸೆಳೆದನೆ ಬಾ ಹಂಸವಾಹನಪಿತ ಬಾರೆಂದು ಕರೆವರು ಗೌತಮರು ಪತ್ನಿ ಅಹಲ್ಯೆಯರು ಪಾಡುತ ಪ್ರಾರ್ಥಿಪರು ಮುರಹರಿ ಗೋಪಾಲ ಬಾರೆಂದು ಕರದಾರು ಶೋಭಾನೆ 5 ಜಗದುದರನೆ ಶ್ರೀ ಹರಿಯೆ ಬಾ ನಿಗಮತಂದು ಸುತಗಿತ್ತನೆ ಬಾ ಝಗಿಝಗಿಸುವ ಆಭರಣಗಳ್ಹೊಳೆಯುತ ಬಾರೆಂದು ಜಯ ಜಯವೆನ್ನುವರು ಋಷಿ ಜಗದಗ್ನಿಯರು ರೇಣುಕ ಸಹಿತ ಶ್ರೀಶನ ಕರದಾರು ಶೋಭಾನೆ 6 ಮದನ ಗೋಪಾಲನಿಗೆ ಮಂಗಳ ಯದುಕುಲ ತಿಲಕನಿಗೆ ಮಂಗಳ ಕಮಲಾನಾಭ ವಿಠ್ಠಲನಿಗೆ ಸತಿ ಅ- ರುಂಧತಿಯರು ಜಯ ಜಯ ಮಂಗಳವೆಂದು ಕರದಾರು ಶೋಭಾನೆ7 ಶೋಭನವೆನ್ನಿರೆ ಶ್ರೀಹರಿಗೆ ಶೋಭನವೆನ್ನಿರೆ ಮಾಧವಗೆ ಶೋಭನವೆನ್ನಿರಿ ಸೊಬಗುಳ್ಳ ದೇವಗೆ ಶೋಭಾನೆ ಸಿರಿಯರಸಗೆ ದಿವ್ಯ ಶೋಭಾನೆ ಪರಮಪುರುಷನಿಗೆ ಶೋಭಾನೆ ಶೋಭನ ಗರುಡಗಮನಗÉಶೋಭನವೆನ್ನಿರೆ ಶೋಭಾನೆ 8
--------------
ನಿಡಗುರುಕಿ ಜೀವೂಬಾಯಿ